ETV Bharat / state

ತಾಂತ್ರಿಕ ದೋಷದಿಂದ ATMನಲ್ಲಿ ಸಿಕ್ಕ 1,74,000 ರೂ. ಮರಳಿ ನೀಡಿದ ಯುವಕ - young man gave back money

ಎಟಿಎಂನಲ್ಲಿನ ತಾಂತ್ರಿಕ ದೋಷದಿಂದ ಖಾತೆಗೆ ಜಮಾ ಆಗದೆ ಹಾಗೆಯೇ ವಾಪಸ್​ ಬಂದಿದ್ದ ಹಣವನ್ನು, ವಾರಸುದಾರರಿಗೆ ಒಪ್ಪಿಸಿ ಯುವಕನೋರ್ವ ಪ್ರಾಮಾಣಿಕತೆ ಮೆರೆಯುವ ಜೊತೆಗೆ ಮಾನವೀಯ ಕಾರ್ಯ ಮಾಡಿದ್ದಾನೆ.

young-man-gave-back-174-000-which-he-got-in-atm
ಎಟಿಎಂ ತಾಂತ್ರಿಕ ದೋಷದಿಂದ ಸಿಕ್ಕ 1,74000 ರೂ. ಮರಳಿ ನೀಡಿದ ಯುವಕ
author img

By

Published : Sep 1, 2021, 12:48 PM IST

Updated : Sep 1, 2021, 2:20 PM IST

ಭಟ್ಕಳ(ಉತ್ತರ ಕನ್ನಡ): ಎಟಿಎಂನಿಂದ ಬೇರೊಬ್ಬರ ಖಾತೆಗೆ ಜಮಾ ಮಾಡಲು ಬಂದ ವ್ಯಕ್ತಿಯೊಬ್ಬರ ಹಣ ಮಷಿನ್​ನಲ್ಲಿನ ತಾಂತ್ರಿಕ ಸಮಸ್ಯೆಯಿಂದ ವಾಪಸ್ ಬಂದಿದ್ದನ್ನು ಕಂಡ ಯುವಕ, ಆ ಹಣವನ್ನು ಪೊಲೀಸ್​​ ವಶಕ್ಕೆ ನೀಡಿ ವಾರಸುದಾರರಿಗೆ ಹಿಂದಿರುಗಿಸಿದ್ದಾನೆ.

ತಾಲೂಕಿನ ಬಂದರು ರಸ್ತೆಯಲ್ಲಿನ ಎಟಿಎಂಗೆ ಮಂಗಳವಾರ ಮಧ್ಯಾಹ್ನ ಬಿಲಾಲ್ ತನ್ವಿರ್​ ಎಂಬಾತ ತನ್ನ ತಂದೆಯ ಖಾತೆಗೆ 1,74,000 ರೂ. ಜಮಾ ಮಾಡಿ ತೆರಳಿದ್ದರು. ಆದರೆ ಎಟಿಎಂನಲ್ಲಿನ‌ ತಾಂತ್ರಿಕ ತೊಡಕಿನಿಂದ ಹಣ ವಾಪಸ್​​ ಬಂದಿತ್ತು. ಇದು ತನ್ವಿರ್ ಅರಿವಿಗೆ ಬಂದಿರಲಿಲ್ಲ. ಬಳಿಕ ಬೆಳಕೆಯ ದಿನಕರ ಗೊಂಡ ಎಂಬಾತ ಇದೇ ಎಟಿಎಂಗೆ ತೆರಳಿದ್ದಾನೆ. ಆಗ ವಾಪಸ್​ ಬಂದಿದ್ದ ಹಣವನ್ನು ಕಂಡು, ನಗರ ಠಾಣೆಗೆ ಬಂದು ಪೊಲೀಸರ ವಶಕ್ಕೆ ನೀಡಿ ಘಟನೆ ಬಗ್ಗೆ ತಿಳಿಸಿದ್ದಾನೆ.

ತಕ್ಷಣಕ್ಕೆ ಎಟಿಎಂ ಬಳಿ ತೆರಳಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಆಗ ಹಣವು ಬಿಲಾಲ್ ತನ್ವಿರ್​ ತಂದೆಯ ಖಾತೆಗೆ ಜಮಾ ಆಗದಿರುವುದು ತಿಳಿದುಬಂದಿದೆ. ಈ ಬಗ್ಗೆ ಖಾತ್ರಿಪಡಿಸಿಕೊಂಡು 1,74,000 ರೂ.ಗಳನ್ನು ಬಿಲಾಲ್​ಗೆ ಹಸ್ತಾಂತರಿಸಲಾಗಿದೆ.

ತಾಂತ್ರಿಕ ದೋಷದಿಂದ ATMನಲ್ಲಿ ಸಿಕ್ಕ 1,74,000 ರೂ. ಮರಳಿ ನೀಡಿದ ಯುವಕ

ಹಣ ಮರಳಿ ಪಡೆದ ಮಾಲೀಕ, ದಿನಕರ್​ಗೆ ಧನ್ಯವಾದ ತಿಳಿಸಿದ್ದಾನೆ. ಅಲ್ಲದೆ ಯುವಕನ ಮಾನವೀಯ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ನನ್ನ ತವರುಮನೆಯನ್ನು ಎಂದೂ ಮರೆಯೊಲ್ಲ, ನಿಮಗೆ ಅನಂತ ಅನಂತ ಧನ್ಯವಾದಗಳು'

Last Updated : Sep 1, 2021, 2:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.