ಕಾರವಾರ(ಉತ್ತರ ಕನ್ನಡ): ಸಿದ್ದಾಪುರ ತಾಲ್ಲೂಕಿನ ಹುಕ್ಕಳಿ ಬಳಿಯ ಗುಂಡಿಗದ್ದೆ ಫಾಲ್ಸ್ ನೋಡಲು ಬಂದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಭಾನುವಾರ ಪತ್ತೆಯಾಗಿದೆ. ಸ್ಥಳೀಯರ ಸಹಕಾರದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಜಲಪಾತದಿಂದ ಮೇಲೆತ್ತಿದ್ದಾರೆ.
ಮೃತ ವ್ಯಕ್ತಿಯನ್ನು ಕೋಲಾರ ಮೂಲದ ರಾಘವೇಂದ್ರ ಗೌಡ (32) ಎಂದು ಗುರುತಿಸಲಾಗಿದೆ. ತಂಡಾಗುಂಡಿ ಪಂಚಾಯಿತಿ ವ್ಯಾಪ್ತಿಯ ಹುಕ್ಕಳಿ ಬಳಿಯ ಗುಂಡಿಗದ್ದೆ ಫಾಲ್ಸ್ ಬಗ್ಗೆ ವ್ಯಕ್ತಿಯೋರ್ವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಮಾಹಿತಿ ಆಧರಿಸಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟಾಗಿ 13 ಮಂದಿ ಪ್ರವಾಸಕ್ಕೆ ತೆರಳಿದ್ದರು.
![ದುಂಡಪ್ಪ ಮಾಲದಿನ್ನಿ](https://etvbharatimages.akamaized.net/etvbharat/prod-images/16344963_thum.jpg)
ಆದರೆ, ಯಾವುದೇ ಸಮರ್ಪಕ ರಸ್ತೆ ಸೇರಿದಂತೆ ಸುರಕ್ಷತೆ ಬಗ್ಗೆ ತಿಳಿಯದೆ ಫಾಲ್ಸ್ ಬಳಿ ಇಳಿದಾಗ ರಾಘವೇಂದ್ರ ಆಯತಪ್ಪಿ ಬಿದ್ದು ನಾಪತ್ತೆಯಾಗಿದ್ದ. ಶನಿವಾರ ಪೊಲೀಸರು ಹುಡುಕಾಟ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ. ಭಾನುವಾರ ಸ್ಥಳೀಯರ ಸಹಕಾರದಲ್ಲಿ ನಿರಂತರ ಹುಡುಕಾಟ ನಡೆಸಿ ಪತ್ತೆ ಮಾಡಲಾಗಿದ್ದು, ಬಳಿಕ ಸ್ಥಳೀಯರ ಸಹಕಾರದಿಂದ ಶವವನ್ನು ಮೇಲೆತ್ತಿದ್ದಾರೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕಾಕ್ನ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕನ ಮೃತದೇಹ ಪತ್ತೆ
ಗೋಕಾಕ್ ತಾಲೂಕಿನ ಕೊಳವಿ ಗ್ರಾಮದಲ್ಲಿ ಹೊಲಕ್ಕೆ ಹೋಗುವಾಗ ಆಯತಪ್ಪಿ ಹಳ್ಳದಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಯುವಕನ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಳವಿ ಗ್ರಾಮದಲ್ಲಿ ಸೆ. 09 ರಂದು ಹೊಲಕ್ಕೆ ಹೋಗುವಾಗ ನೀರಿನಲ್ಲಿ ದುಂಡಪ್ಪ ಮಾಲದಿನ್ನಿ (25) ಎಂಬಾತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಇತ್ತ ಮಾಹಿತಿ ತಿಳಿದು ಸ್ಥಳದಲ್ಲಿ ಹುಡುಕಾಟ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿ ಸತತವಾಗಿ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದರು.
ಮೂರು ದಿನ ಕಾರ್ಯಾಚರಣೆ ಬಳಿಕ ಯುವಕನ ಮೃತದೇಹದ ಇಂದು ಬೆನಚಿನಮರಡಿ ಗ್ರಾಮದ ಕೊಳವಿ ಮಾರ್ಗದ ಮಧ್ಯದಲ್ಲಿ ಪತ್ತೆಯಾಗಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗೋಕಾಕ್ನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಬೆಳಗಾವಿ ಗಣೇಶ ನಿಮಜ್ಜನ ವೇಳೆ ಯುವಕನ ಕೊಲೆ.. ನಾಲ್ವರು ಆರೋಪಿಗಳು ಅರೆಸ್ಟ್