ಹೊನ್ನಾವರ: ನಗರದ ಪಟ್ಟಣದ ಬಂದರು ಪ್ರದೇಶದ ಶರಾವತಿ ನದಿ ತೀರದಲ್ಲಿ ಇಂದು ಬೆಳಗ್ಗೆ ಮಹಿಳೆ ಶವ ಪತ್ತೆಯಾಗಿದೆ.
ಮೃತ ಮಹಿಳೆಯನ್ನು ವೀಣಾ ಶಿವಾನಂದ ಪೈ ಎಂದು ಗುರುತಿಸಲಾಗಿದೆ. ವೀಣಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ.
ಸದ್ಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೈಂ ಪಿಎಸ್ಐ ಸಾವಿತ್ರಿ ನಾಯಕ ಮತ್ತು ಸಿಬ್ಬಂದಿ ತನಿಖೆ ಮುಂದುವರೆಸಿದ್ದಾರೆ.