ETV Bharat / state

ಬಿಜೆಪಿಗೆ ಮತ ಹಾಕಿ ಎನ್ನಲ್ಲ, ಯಾರಿಗೆ ಮತ ಹಾಕಬೇಕೆಂದು ಹಿಂದೂಗಳು ಯೋಚಿಸಬೇಕು: ಬಿ.ಎಸ್.ಪೈ

author img

By

Published : Feb 13, 2022, 7:34 AM IST

ಬಿಜೆಪಿಗೆ ಮತ ಹಾಕಿ ಎಂದು ಹಿಂದೂ ಜಾಗರಣ ವೇದಿಕೆ ಎಲ್ಲಿಯೂ ಹೇಳಿರಲಿಲ್ಲ. ಆದರೆ, ಯಾರಿಗೆ ಮತ ಹಾಕಬೇಕೆಂದು ಹಿಂದೂಗಳು ಯೋಚಿಸಬೇಕು. ಹಿಂದೂ ಜಾಗರಣ ವೇದಿಕೆ ಬಿಜೆಪಿಯನ್ನೇ ಬೆಂಬಲಿಸಬೇಕು ಎಂಬ ನಿಯಮವಿಲ್ಲ ಎಂದು ಹಿಂದೂ‌ ಜಾಗರಣ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್.ಪೈ ಹೇಳಿದ್ದಾರೆ.

Hindu Jagaran Vedike President B.S Pai
ಹಿಂದೂ ಜಾಗರಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್ ಪೈ

ಕಾರವಾರ: ನಾವೆಲ್ಲರೂ ಆರಿಸಿ ಕಳುಹಿಸಿದ ಬಿಜೆಪಿ ಶಾಸಕರು, ಸಂಸದರು ಫೋನಿಗೆ ಸಿಗುತ್ತಿಲ್ಲ. ಸಚಿವರಿಂದಲೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಜನಪ್ರತಿನಿಧಿಗಳಿಗೆ ಮನವಿ ಕೊಟ್ಟು ವಿಶ್ವಾಸವಿಡುವ ಪರಿಸ್ಥಿತಿ ಈಗ ಇಲ್ಲ. ಹಿಂದೂಗಳು ವಿಚಾರ ಮಾಡಬೇಕು. ಅವರವರ ರಕ್ಷಣೆಯನ್ನು ಅವರವರೇ ಮಾಡಿಕೊಳ್ಳಬೇಕಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಎಸ್.ಪೈ ತಿಳಿಸಿದ್ದಾರೆ.

ಕಾರವಾರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವುದು ನಮ್ಮದೇ ಪರಿವಾರದ ಬಿಜೆಪಿ ಸರ್ಕಾರ ನಿಜ. ಆದರೆ ಅಧಿಕೃತವಾಗಿ ಬಿಜೆಪಿಗೆ ಮತ ಹಾಕಿ ಎಂದು ಹಿಂದೂ ಜಾಗರಣ ವೇದಿಕೆ ಎಲ್ಲಿಯೂ ಹೇಳಿರಲಿಲ್ಲ. ಯಾರಿಗೆ ಮತ ಹಾಕಬೇಕೆಂದು ಹಿಂದೂಗಳು ಯೋಚಿಸಬೇಕು. ಹಿಂದೂ ಜಾಗರಣ ವೇದಿಕೆ ಬಿಜೆಪಿಯನ್ನೇ ಬೆಂಬಲಿಸಬೇಕು ಎಂಬ ನಿಯಮವಿಲ್ಲ.

ಪಾದರಾಯನಪುರದಲ್ಲಿ ಪೊಲೀಸರಿಗೆ ಅವರ ರಕ್ಷಣೆಯನ್ನೇ ಮಾಡಿಕೊಳ್ಳಲಾಗಿಲ್ಲ. ನಿಮ್ಮ ನಿಮ್ಮ ರಕ್ಷಣೆ ನೀವು ಮಾಡಿಕೊಳ್ಳಿ ಎಂದು ವೈಯರ್‌ಲೆಸ್​​ನಲ್ಲಿ ಹೇಳಿದ್ದರು. ಪೊಲೀಸರ ಮೇಲೆ ಈಗ ಯಾವುದೇ ಕಾರಣಕ್ಕೂ ಡಿಪೆಂಡ್ ಮಾಡುವಂತೆಯೇ ಇಲ್ಲ. ಈಗಿನ ಎಂಎಲ್​ಎ, ಎಂಪಿಗಳು ತಮ್ಮ ಕಷ್ಟದ ಸಮಯದಲ್ಲಿ ತಮ್ಮ ನೆರವಿಗೆ ಬಂದಿದ್ದಾರೋ ಇಲ್ವೋ ಎಂದು ಜನರು ವಿಚಾರ ಮಾಡಬೇಕು ಎಂದರು.

ಇದನ್ನೂ ಓದಿ: ಅಸ್ಸಾಂ ಸಿಎಂ ವಿರುದ್ಧ ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್‌ ಪ್ರತಿಭಟನೆ

ಸಚಿವರು, ಸಂಸದರು ನಮಗೆ ಸ್ಪಂದಿಸಿಲ್ಲ ಎಂದು ನಾವು ಕೈಕಟ್ಟಿ ಅಳುತ್ತಾ ಕೂರುವುದಿಲ್ಲ. ಆದರೆ ಮತ ಹಾಕುವಾಗ ಜನ ಯೋಚಿಸಬೇಕು. ನಾವು ಇವರಿಗೆ ಮತ ಹಾಕಿ ಎನ್ನುವುದಿಲ್ಲ. ಹಿಂದೆ ಅವರು ನಮಗೆ ಬೆಂಬಲಿಸಿದ್ದರು, ಅದಕ್ಕೆ ನಾವೂ ಬೆಂಬಲಿಸಿದ್ದೆವು. ಆದರೆ ಈಗ ಸುಮ್ಮನೆ ಕೂರುವುದಿಲ್ಲ. ಹಿಂದೆ ಬೆಂಬಲಿಸಿದ್ದಕ್ಕೆ ನಾಳೆಯೂ ಬೆಂಬಲಿಸಬೇಕು, ನಾಳೆ ಬೆಂಬಲಿಸಿದ್ದಕ್ಕೆ ಮುಂದೆಯೂ ಬೆಂಬಲ ನೀಡಬೇಕೆನ್ನುವುದೇನಿಲ್ಲ. ಅವರವರ ಸ್ವಾರ್ಥಕ್ಕೆ ಅವರವರು ಮಾಡುತ್ತಿದ್ದಾರೆ. ಹಿಂದೂಗಳನ್ನು ರಕ್ಷಣೆ ಮಾಡುವುದು ಹಿಂದೂ ಜಾಗರಣ ವೇದಿಕೆ ಕೆಲಸ. ನಾವು ಅವರ ಕಾಲು ಹಿಡಿಯುವುದಿಲ್ಲ. ಅವರಿಗೆ ಒತ್ತಾಯ ಮಾಡಿಯೂ ಉಪಯೋಗವಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.