ಕಾರವಾರ: ನೌಕಾಪಡೆಯ ಪಶ್ಚಿಮ ವಲಯದ ಫ್ಲ್ಯಾಗ್ ಆಫೀಸರ್ ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್ ಭಾನುವಾರ ಕಾರವಾರದ ಕದಂಬ ನೌಕಾನೆಲೆಗೆ ಭೇಟಿ ನೀಡಿ, ಸೀಬರ್ಡ್ ಎರಡನೇ ಹಂತದ ಕಾಮಗಾರಿ ಪರಿಶೀಲಿಸಿದರು.
![ಕದಂಬ ನೌಕಾನೆಲೆಗೆ ಭೇಟಿ ನೀಡಿದ ಪಶ್ಚಿಮ ವಲಯದ ಎಫ್ಒಸಿ](https://etvbharatimages.akamaized.net/etvbharat/prod-images/kn-kwr-07-navy-visit-ka10044_30012022195955_3001f_1643552995_622.jpg)
ಕದಂಬ ನೌಕಾನೆಲೆಗೆ ಆಗಮಿಸಿದ ಅವರನ್ನು ಕರ್ನಾಟಕ ನೌಕಾ ವಿಭಾಗದ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಸ್ವಾಗತಿಸಿದರು. ಈ ವೇಳೆ ಅಜೇಂದ್ರ ಬಹದ್ದೂರ್ ಸಿಂಗ್ ಕದಂಬ ನೌಕಾನೆಲೆಯ ಹಡಗುಗಳು ಮತ್ತು ಘಟಕಗಳ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದರು. ಸೀಬರ್ಡ್ ಎರಡನೇ ಹಂತದಲ್ಲಿ ಕೈಗೊಳ್ಳಲಾಗುತ್ತಿರುವ ಮೂಲಸೌಕರ್ಯ ಅಭಿವೃದ್ಧಿಯ ಪ್ರಗತಿಯ ಬಗ್ಗೆ ಪ್ರಾಜೆಕ್ಟ್ ಜನರಲ್ ಡೈರೆಕ್ಟರ್ ಜನರಲ್ ಅವರಿಂದ ಮಾಹಿತಿ ಪಡೆದರು.
![ಕದಂಬ ನೌಕಾನೆಲೆಗೆ ಭೇಟಿ ನೀಡಿದ ಪಶ್ಚಿಮ ವಲಯದ ಎಫ್ಒಸಿ](https://etvbharatimages.akamaized.net/etvbharat/prod-images/kn-kwr-07-navy-visit-ka10044_30012022195955_3001f_1643552995_1002.jpg)
ಇದನ್ನೂ ಓದಿ: ಕಾರವಾರ: ಆಲಿವ್ ರೈಡ್ಲೆ ಕಡಲಾಮೆಯ 113 ಮೊಟ್ಟೆಗಳ ರಕ್ಷಣೆ
ಕದಂಬ ನೌಕಾ ಪ್ರದೇಶ ವ್ಯಾಪ್ತಿಯಲ್ಲಿ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ನೌಕಾನೆಲೆಯಲ್ಲಿ ನಡೆಯುತ್ತಿರುವ ಸಾಗರ ಕಾರ್ಯಗಳು, ನೌಕಾ ಹಡಗು ದುರಸ್ತಿ ಯಾರ್ಡ್‌ನ ಆಧುನೀಕರಣ, ಸಮುದ್ರ ಮೂಲಸೌಕರ್ಯ ಅಭಿವೃದ್ಧಿಯ ಇತರ ಅಂಶಗಳು ಮತ್ತು ಬೇಸ್‌ನಲ್ಲಿ ನಗರ ಯೋಜನೆ ಅಂಶಗಳ ಕುರಿತು ಆನ್-ಸೈಟ್ ಬ್ರೀಫಿಂಗ್ ನೀಡಲಾಯಿತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ