ಶಿರಸಿ : ಚುನಾವಣೆಯ ಕೊನೆಯ ಹಂತದಲ್ಲಿ ವಿರೋಧ ಪಕ್ಷದವರು ಏನೆಲ್ಲಾ ಅಪಪ್ರಚಾರ ಮಾಡಬೇಕೋ ಅದನ್ನು ಮಾಡಲು ಲೈಸೆನ್ಸ್ ನೀಡಿದ್ದೇವೆ ಎಂದು ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮ ಹೆಬ್ಬಾರ್, ಹನಿ ಟ್ರಾಪ್ನಲ್ಲಿ ತಮ್ಮ ಹೆಸರು ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿ, ಇದನ್ನು ನೂರಾರು ಬಾರಿ ಕೇಳಿದ್ದೇನೆ, ಅದರಿಂದ ಏನೂ ಆಗುವುದಿಲ್ಲ ಎಂದರು. ಇನ್ನೂ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಾಂಗ್ರೆಸ್ನಂತೆ ನಮ್ಮಲ್ಲೂ ಸಹ ಸಚಿವರು, ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಹೆಚ್ಚಿನ ಮತದಲ್ಲಿ ನಾವು ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯ ಅಂತಿಮ ಘಟ್ಟವನ್ನು ನಾವು ತಲುಪಿದ್ದು, ಒಳ್ಳೆಯ ವಾತಾವರಣವಿದೆ. ಬಿಜೆಪಿ ಈ ಚುನಾವಣೆಯಲ್ಲಿ ಅತ್ಯದ್ಭುತ ವಿಜಯ ಸಾಧಿಸುತ್ತದೆ. ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜಾತಿ, ಮತ, ಧರ್ಮ, ಪಂತದ ಬೇಧವಿಲ್ಲದೇ ಬಿಜೆಪಿಯೊಂದಿಗೆ ಇದ್ದಾರೆ ಎಂದರು.