ETV Bharat / state

ಮತದಾನ ಬಹಿಷ್ಕರಿಸಿದರೂ ಗ್ರಾಮಸ್ಥರಿಗೆ ಸಿಗದ ಮೂಲಭೂತ ಸೌಕರ್ಯ

author img

By

Published : Oct 19, 2022, 9:33 AM IST

ಸರ್ವಋತು ರಸ್ತೆಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದರೂ ಗ್ರಾಮದ ಜನರ ಬೇಡಿಕೆ ಈಡೇರದೆ ಇರುವುದರಿಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

kn_srs_
ಸರ್ವಋತು ರಸ್ತೆಗಾಗಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಶಿರಸಿ(ಉತ್ತರ ಕನ್ನಡ): ಸಾಮಾನ್ಯವಾಗಿ ಮತದಾನ ಬಹಿಷ್ಕಾರ ಮಾಡಿದಲ್ಲಿ ಆ ಗ್ರಾಮದ ಬಹುತೇಕ ಬೇಡಿಕೆಗಳು ಈಡೇರುತ್ತವೆ. ಆದರೆ, ಜಿಲ್ಲೆಯ ಸಿದ್ದಾಪುರ ತಾಲೂಕಿನ ಅತ್ತಿಮುರುಡು ಗ್ರಾಮಸ್ಥರ ಪರಿಸ್ಥಿತಿ ಮಾತ್ರ ಉಲ್ಟಾ ಆಗಿದ್ದು, ಇಲ್ಲಿಯ ಜನರು ಮತದಾನ ಬಹಿಷ್ಕಾರ ಮಾಡಿದರೂ ಬೇಡಿಕೆಗಳ ಈಡೇರದೆ ಇದ್ದಿದ್ದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

ಅತ್ತಿಮುರುಡ ಗ್ರಾಮದಿಂದ ಹೊಸಗದ್ದೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ಇದರಿಂದ ಪ್ರತಿದಿನ ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಸರ್ವಋತು ರಸ್ತೆಗೆ ಆಗ್ರಹಿಸಿ ಗ್ರಾಮದ ಜನರು ಮತದಾನ ಬಹಿಷ್ಕರಿಸಿದ್ದರು. ಆದರೂ ಸಹ ಗ್ರಾಮದ ಜನರ ಬೇಡಿಕೆ ಮಾತ್ರ ಈಡೇರದೆ ಇರುವುದು ಗ್ರಾಮಸ್ಥರಿಗೆ ಬೇಸರ ತಂದಿದೆ.

ಈ ಕುರಿತು ಗಣಪತಿ ಎಂಬ ಗ್ರಾಮಸ್ಥರು ಮಾತನಾಡಿ, ಅಣಲೇಬೈಲ್ ಪಂಚಾಯಿತಿ ವ್ಯಾಪ್ತಿಯ ಉಳಿದ ರಸ್ತೆಗಳನ್ನು ಸರ್ವಋತು ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ನಮ್ಮ ರಸ್ತೆಯನ್ನು ಇದುವರೆಗೂ ಖಡೀಕರಣ ಸಹ ಮಾಡಿಲ್ಲ. ಮತದಾನ ಬಹಿಷ್ಕರಿಸಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನು ಸರ್ವಋತು ರಸ್ತೆ ಆಗ್ರಹಕ್ಕೆ ಯಾರಿಂದಲೂ ಸ್ಪಂದನೆ ಸಿಗದಿದ್ದಾಗ ಗ್ರಾಮಸ್ಥರೆಲ್ಲ ಸೇರಿ ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದರು. ಆ ವೇಳೆ ಗ್ರಾಮಕ್ಕೆ ಅಧಿಕಾರಿಗಳ ದಂಡೇ ಓಡಿಬಂದಿತ್ತು.

ಸ್ವತಃ ತಹಶಿಲ್ದಾರರು ಗ್ರಾಮಕ್ಕೆ ಆಗಮಿಸಿ ಜನರ ಮನವೊಲಿಸಿ, ಸರ್ವಋತು ರಸ್ತೆ ಮಾಡಿಕೊಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಈಗ ಎಲ್ಲವೂ ಅಧಿಕಾರಿಗಳಿಗೆ ಮರೆತುಹೋಗಿದೆ. ತಹಶಿಲ್ದಾರರ ಭರವಸೆ ಸಹ ನೆಲಕಚ್ಚಿದೆ. ನಮ್ಮಲ್ಲಿ ಕೇವಲ 289 ಮತಗಳಿವೆ. ಇದೇ ಕಾರಣಕ್ಕೇ ಈ ಗ್ರಾಮಗಳ ನಿರ್ಲಕ್ಷ್ಯ ಆಗಿದೆ. ಈ ಮೊದಲು ಎರಡು ಬಾರಿ ಈ ರಸ್ತೆಗೆ ಖಡೀಕರಣಕ್ಕೆ ಹಣ ಮಂಜೂರಾಗಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಏನಾಯಿತೋ ತಿಳಿದಿಲ್ಲ, ಹಣ ಮಾತ್ರ ಬಿಡುಗಡೆ ಆಗಲೇ ಇಲ್ಲ ಎಂದು ಎಂದು ಗಣಪತಿ ಹೇಳಿದರು.

ಇದನ್ನೂ ಓದಿ: ಪಾಳು ಬಿದ್ದ ರಸ್ತೆ.. ದುರಸ್ತಿ ಕಾರ್ಯಕ್ಕಾಗಿ ಮದುವೆಗೆ ಕೂಡಿಟ್ಟಿದ್ದ ಹಣವನ್ನೇ ಕೊಟ್ಟ ಐಟಿ ಉದ್ಯೋಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.