ETV Bharat / state

ಬಂಡೆಗೆ ಭೀಮ ದಾರ ಕಟ್ಟಿ ಬುಗುರಿ ಆಡಿದ್ದನಂತೆ.. ಈ 'ಬುಗುರಿ'ಯನ್ನೊಮ್ಮೆ ಆಡಿ, ಆಗದಿದ್ದರೆ ನೋಡಿಯಾದ್ರೂ ಬನ್ನಿ! - ಕರ್ನಾಟಕದ ಪ್ರಸಿದ್ಧ ತಾಣಗಳು

ಕಲ್ಲಿನ ಬಂಡೆಗೆ ಭೀಮ ದಾರವನ್ನು ಕಟ್ಟಿ ಬುಗುರಿ ಆಡುತ್ತಿದ್ದನಂತೆ. ಪಾಂಡವರು ಇಲ್ಲಿ ನೆಲೆಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ, ಇದಕ್ಕೆ 'ಭೀಮನ ಬುಗುರಿ' ಎಂದೂ ಹೆಸರು ಬಂದಿದೆ..

ಭೀಮ ಬುಗುರಿ
ಭೀಮ ಬುಗುರಿ
author img

By

Published : May 13, 2022, 1:55 PM IST

ಕಾರವಾರ : ಅದು ಹಚ್ಚ ಹಸಿರಿನ ಕಾನನದ ನಡುವೆ ತುತ್ತ ತುದಿಯಲ್ಲಿರುವ ತಾಣ. ಪಾಂಡವರು ಆಟವಾಡುತ್ತಿದ್ದರು ಎನ್ನಲಾಗುವ ಈ ಪ್ರದೇಶದಲ್ಲಿ ಭೀಮ ಬೃಹತ್ ಬಂಡೆಗಲ್ಲನ್ನ ಬುಗರಿಯಂತೆ ತಿರುಗಿಸಿ ಕಲ್ಲಿನ ಮೇಲೆ ನಿಲ್ಲಿಸಿದ್ದ ಎಂಬ ಪ್ರತೀತಿ ಕೂಡ ಇದೆ. ಇಂದಿಗೂ ಭೀಮನ ನಾಮದೊಂದಿಗೆ ಪ್ರಖ್ಯಾತವಾಗಿರುವ ಈ ತಾಣ ಚಾರಣ ಪ್ರಿಯರ ಆಕರ್ಷಣೀಯ ಕೇಂದ್ರವಾಗಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದ ತೋಡೂರಿನಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಭೀಮನ ಬುಗುರಿ ಇದೀಗ ಚಾರಣಿಗರ ಪಾಲಿಗೆ ನೆಚ್ಚಿನ ತಾಣ. ಕಾಲ್ನಡಿಗೆಯಲ್ಲಿ ಮಾತ್ರ ತೆರಳುವ ಅವಕಾಶ ಇರುವ ಕಾರಣ ವಾರಾಂತ್ಯ ಇಲ್ಲವೇ ರಜಾ ದಿನಗಳಲ್ಲಿ ಪ್ರವಾಸಿಗರು, ಸಾಹಸಿಗರು ಈ ಪ್ರದೇಶಕ್ಕೆ ಭೇಟಿ ನೀಡಿ ಸೌಂದರ್ಯ ಸವಿಯುತ್ತಿದ್ದಾರೆ.

ಕಣ್ಣು ಹಾಯಿಸಿದಷ್ಟು ದೂರವೂ ಹಚ್ಚ ಹಸಿರಿನಿಂದಲೇ ಗೋಚರಿಸುವ ತಾಣ ಪರಿಸರ ಅಧ್ಯಯನಕಾರರಿಗೂ ಸಾಕಷ್ಟು ಅನುಕೂಲಕರವಾಗಿದೆ. ಕಾರವಾರದ ಕರಾವಳಿ ದೋಣಿ ವಿಹಾರ ಮತ್ತು ಸಾಹಸ ಕೇಂದ್ರದಿಂದಲೂ ಪ್ರವಾಸಿಗರನ್ನು ತಾಣಕ್ಕೆ ಕರೆತಂದು ಪರಿಚಯಿಸಲಾಗುತ್ತಿದೆ. ಈ ಬಾರಿ ಸುಮಾರು 25 ಮಕ್ಕಳು ಸೇರಿದಂತೆ 40 ಕ್ಕೂ ಹೆಚ್ಚು ಜನರು ಚಾರಣ ಕೈಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಭೀಮ ಬುಗುರಿ

ಕಾಡಿನ ಹಣ್ಣು ಸಖತ್ ಟೇಸ್ಟ್ : ಇನ್ನು ಭೀಮನ ಬುಗುರಿಗೆ ತೆರಳುವಾಗ ಸುಮಾರು ಎರಡು ತಾಸು ಕಾಲ್ನಡಿಗೆ ಮೂಲಕ ಕಾಡಿನ ಮಧ್ಯದ ದುರ್ಗಮ ಪ್ರದೇಶದಲ್ಲಿ ತೆರಳಬೇಕು. ಹೀಗೆ ತೆರಳುವಾಗ ಮಾರುಕಟ್ಟೆಯಲ್ಲಿಯೂ ಸಿಗದಂತಹ ಕಾಡು ಹಣ್ಣುಗಳು ಸಖತ್ ಟೇಸ್ಟಿಯಾಗಿವೆ. ಮುಂದೆ ಸಾಗಿದರೆ ಮನೆಯೊಂದು ಇದ್ದು, ಭಾರಿ ಶ್ರಮದೊಂದಿಗೆ ಜೀವನ ಮಾಡುತ್ತಿದ್ದಾರೆ.

ಅಲ್ಲಿಂದ ಮತ್ತೆ ಅರ್ಧ ಗಂಟೆ ಕ್ರಮಿಸಿದರೇ ಬೃಹತ್ ಕಲ್ಲಿನ ಮೇಲೆ ಬುಗುರಿಯಾಕಾರದ ಬಂಡೆ ನಿಂತಿದೆ. ಆ ಬಂಡೆ ಒಂದು ಕಡೆ ಮೊಟ್ಟೆಯಾಕಾರದಲ್ಲಿ ಕಾಣುತ್ತೆ. ಚಾರಣ ಪ್ರಿಯರು ಬಂಡೆಗಲ್ಲನ್ನ ಏರಿದಾಗ ಸುತ್ತಲೂ ಕಾಣುವ ಸೊಬಗು ಎಲ್ಲರನ್ನೂ ಮೂಕ ವಿಸ್ಮಿತಗೊಳಿಸುತ್ತದೆ. ಕಲ್ಲಿನ ಬಂಡೆಗೆ ಭೀಮ ದಾರವನ್ನು ಕಟ್ಟಿ ಬುಗುರಿ ಆಡುತ್ತಿದ್ದನಂತೆ. ಪಾಂಡವರು ಇಲ್ಲಿ ನೆಲೆಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ, 'ಭೀಮನ ಬುಗುರಿ' ಎಂದೂ ಹೆಸರು ಬಂದಿದೆ. ಕಳೆದ ಹಲವು ವರ್ಷದಿಂದ ಈ ಪ್ರದೇಶದಲ್ಲಿ ರ್ಯಾಪ್ಲಿಂಗ್ ಸಾಹಸ ಶಿಬಿರ ಕೂಡ ಆಯೋಜಿಸುತ್ತಿದ್ದೇವೆ ಎನ್ನುತ್ತಾರೆ ಸಾಹಸಿಗರು.

ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣವಾಗಿರುವ ಪ್ರವಾಸೋದ್ಯಮದಿಂದ ಯಾವುದೇ ಅಭಿವೃದ್ಧಿಕಾರ್ಯಗಳು ನಡೆದಿಲ್ಲ. ಆದರೂ ಭೀಮನ‌ಬುಗುರಿಗೆ ಪ್ರವಾಸಿಗರು ಮಾತ್ರ ಹರಿದುಬರುತ್ತಿದ್ದಾರೆ. ಅಭಿವೃದ್ಧಿ ಪಡಿಸಿದಲ್ಲಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲಿದೆ.

(ನೋಡಿ: ಭೂಮಿ ಮೇಲಿನ ಸ್ವರ್ಗದಂತಿದೆ ಕೊಡಗಿನ ಈ ಪ್ರವಾಸಿ ತಾಣ.. ನೀವು ಒಮ್ಮೆ ಭೇಟಿ ನೀಡಿ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.