ETV Bharat / state

ಶಿರಸಿ: ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ - unknown person dead body found

ಶಿರಸಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆಗೈದು ಶವವನ್ನು ಕಾಡಿನಲ್ಲಿ ಎಸೆಯಲಾಗಿದೆ.

ಅಪರಿಚಿತ ವ್ಯಕ್ತಿಯ ಕೊಲೆ
ಅಪರಿಚಿತ ವ್ಯಕ್ತಿಯ ಕೊಲೆ
author img

By ETV Bharat Karnataka Team

Published : Sep 15, 2023, 5:54 PM IST

ಶಿರಸಿ: ತಲೆ ಒಡೆದು ಅಪರಿಚಿತ ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಕೊರ್ಲಕಟ್ಟಾ ಮಾಳಂಜಿ ರಸ್ತೆಯ ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಸುಮಾರು 50 ರಿಂದ 55 ವರ್ಷ ವಯಸ್ಸಿನ ವ್ಯಕ್ತಿಯ ರಕ್ತಸಿಕ್ತ ಶವ ದೊರೆತಿದೆ.

ದೇಹದ ಮೇಲೆ ಎರಡು ಗೋಣಿ ಚೀಲ ಹಾಕಲಾಗಿದ್ದು, ಅದರ ಮೇಲೆ ಸೊಪ್ಪು ಹಾಕಿರುವುದು ಕಂಡು ಬಂದಿದೆ. ಚೀಲದಲ್ಲಿ ಶವ ತುಂಬಿ ಕಾಡಿನಲ್ಲಿ ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ. ಶವದ ಎಡ ಕಾಲಿನ ಎರಡನೇ ಬೆರಳಿನಲ್ಲಿ ಬೆಳ್ಳಿಯ ಉಂಗುರವಿದೆ. ಗುರುವಾರ ಮಧ್ಯರಾತ್ರಿ ಸುಮಾರಿಗೆ ಕೊಲೆ ನಡೆದಿರಬಹುದು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಶುಕ್ರವಾರ ಬೆಳಿಗ್ಗೆ ಹಾಲು ಹಾಕುವ ವ್ಯಕ್ತಿ ಘಟನೆ ತಿಳಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮೃತ ವ್ಯಕ್ತಿ ಸ್ಥಳೀಯರಿಗೆ ಪರಿಚಯವಿಲ್ಲ. ಬೇರೆ ಊರಿನವರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ: ಮಹಿಳೆ ಹಾಗೂ ಇಬ್ಬರು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಾಮರಾಜನಗರದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೇಘಾ ಮತ್ತು ಮಕ್ಕಳಾದ ಪುನ್ವಿತಾ ಹಾಗೂ ಮನ್ವಿತಾ ಮೃತರು ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಮತ್ತು ಆತನ ಕುಟುಂಬಸ್ಥರೇ ಮೂವರನ್ನು ಹತ್ಯೆ ಮಾಡಿದ್ದಾರೆ ಎಂದು ಮೇಘಾ ಕುಟುಂಬದವರು ಆರೋಪಿಸಿದ್ದಾರೆ.

ಗುಂಡು ಹಾರಿಸಿ ಪತ್ನಿ ಕೊಲೆ: ಕೌಟುಂಬಿಕ ಕಲಹದಿಂದ ಪತಿಯೇ ತನ್ನ ಪತ್ನಿಗೆ ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಗುರುವಾರ ನಡೆದಿದೆ. ಹನುಮವ್ವ ಎಂಬ ಮಹಿಳೆ ಕೊಲೆಯಾಗಿದ್ದು, ಆರೋಪಿ ಪತಿ ಬಸವರಾಜ ತಲೆಮರೆಸಿಕೊಂಡಿದ್ದಾನೆ. ಕುಡಿತದ ಚಟಕ್ಕೆ ದಾಸನಾಗಿದ್ದ ಆರೋಪಿ ದಿನವು ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದನಂತೆ. ಘಟನೆ ದಿನ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದ್ದು, ಮನೆಯಲ್ಲಿದ್ದ ಪಿಸ್ತೂಲ್​ನಿಂದ ಹೆಂಡತಿಗೆ ಗುಂಡು ಹಾರಿಸಿ ಪತಿ ಕೊಲೆ ಮಾಡಿದ್ದಾನೆ. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಕೌಟುಂಬಿಕ ಕಲಹ - ಪತ್ನಿ ಮೇಲೆ‌ ಗುಂಡು ಹಾರಿಸಿ‌ ಕೊಲೆ ಮಾಡಿದ ಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.