ETV Bharat / state

ಕಾರವಾರ: ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ; ಸವಾರರಿಬ್ಬರ ದುರ್ಮರಣ! - ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ

ನಿನ್ನೆ ತಡರಾತ್ರಿ ಬೈಕ್​ನಲ್ಲಿ ಅಂಕೋಲಾದಿಂದ ಕಾರವಾರದ ಕಡೆ ತೆರಳುತ್ತಿದ್ದಾಗ ಅಪರಿಚಿತ ವಾಹನವೊಂದು ಗುದ್ದಿ ಪರಾರಿಯಾಗಿದೆ. ಈ ವೇಳೆ, ಭಾರೀ ಮಳೆ ಸುರಿಯುತ್ತಿದ್ದ ಕಾರಣ ಘಟನೆ ತಡವಾಗಿ ಗಮನಕ್ಕೆ ಬಂದಿದೆ.

road accident
ದುರ್ಮರಣ
author img

By

Published : Jun 30, 2020, 7:51 AM IST

ಕಾರವಾರ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಅಮದಳ್ಳಿಯಲ್ಲಿ ತಡರಾತ್ರಿ ನಡೆದಿದೆ.

ಕಾರವಾರದ ಕೆ.ಎಚ್.ಬಿ ಕಾಲೊನಿ ನಿವಾಸಿಗಳಾದ ಶಶಿ ಬಸಪ್ಪ (20), ಗುಂಡಪ್ಪ (25) ಮೃತಪಟ್ಟ ದುರ್ದೈವಿಗಳು. ನಿನ್ನೆ ತಡರಾತ್ರಿ ಬೈಕ್​ನಲ್ಲಿ ಅಂಕೋಲಾದಿಂದ ಕಾರವಾರದ ಕಡೆ ತೆರಳುತ್ತಿದ್ದಾಗ ಅಪರಿಚಿತ ವಾಹನವೊಂದು ಗುದ್ದಿ ಪರಾರಿಯಾಗಿದೆ. ಈ ವೇಳೆ ಭಾರೀ ಮಳೆ ಸುರಿಯುತ್ತಿದ್ದ ಕಾರಣ ಘಟನೆ ತಡವಾಗಿ ಗಮನಕ್ಕೆ ಬಂದಿದ್ದು, ಅಷ್ಟರಲ್ಲಾಗಲೇ ಇಬ್ಬರು ಮೃತಪಟ್ಟಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಅಪರಿಚಿತ ವಾಹನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.