ಕಾರವಾರ: ಒಂದೇ ನೋಂದಣಿ ಸಂಖ್ಯೆಯ ಎರಡು ಕಾರುಗಳನ್ನು ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಸೇವೆಗೆ ಬಿಟ್ಟಿರುವ ವಿಚಿತ್ರ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ಗ್ರಾಮೀಣ ಕುಡಿಯುವ ನೀರಿನ ಘಟಕ ಮತ್ತು ಜಿಲ್ಲಾ ಪಂಚಾಯಿತಿಗೆ ಎರಡು ಕಾರುಗಳನ್ನು ಗುತ್ತಿಗೆ ಆಧಾರದ ಮೇಲೆ ಬಾಡಿಗೆಗೆ ಬಿಡಲಾಗಿತ್ತು. ವಿಚಿತ್ರ ಅಂದರೆ ಎರಡೂ ವಾಹನಗಳಿಗೆ ಕೆಎ 30 ಎ 3722 ನಂಬರ್ ಹಾಕಲಾಗಿದೆ.
ಹೀಗೆ ಕಳೆದ ಹಲವು ವರ್ಷಗಳಿಂದ ಚಲಾಯಿಸುತ್ತಿರುವ ಅನುಮಾನಗಳಿದ್ದು, ಇಂದು ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಒಂದು ಕಾರು ಕಿನ್ನರ ಮೂಲದ ಸಾಯಿನಾಥ ಕೊಟಾರಕರ್ ಹೆಸರಿನಲ್ಲಿ ನೋಂದಣಿಯಾಗಿದ್ದು, ಇನ್ನೊಂದಕ್ಕೆ ಅದೇ ನಂಬರ್ ಬಳಸಲಾಗಿದೆ. ಈಗಾಗಲೇ ಎರಡೂ ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.