ETV Bharat / state

ಬಾಳೆಗೊನೆ ಜೊತೆ 4 ಕಡವೆ ಕೊಂಬು, ನಾಟ ಸಾಗಾಟ.. ಕುಮಟಾದಲ್ಲಿ ಇಬ್ಬರ ಬಂಧನ - ಕಡವೆ ಕೊಂಬು

ಬಾಳೆಕೊನೆ ಸಾಗಿಸುವ ವಾಹನದಲ್ಲಿ ಅಕ್ರಮವಾಗಿ ಕಡವೆ ಕೊಂಬುಗಳು ಹಾಗೂ ಜಂಗ್ಲಿ ಜಾತಿಯ ಕಟ್ಟಿಗೆ ಸಾಗಿಸುವಾಗ ಕುಮಟಾ ತಾಲೂಕಿನ ಕತಗಾಲನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಾಹನ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.

Two accused arrested in Kumata
ಕುಮಟಾದಲ್ಲಿ ಇಬ್ಬರ ಬಂಧನ
author img

By

Published : Aug 18, 2022, 8:56 AM IST

ಕಾರವಾರ: ಬಾಳೆಗೊನೆ ಜೊತೆ ನಾಲ್ಕು ಕಡವೆ ಕೊಂಬು ಹಾಗೂ ಕಟ್ಟಿಗೆ ನಾಟ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಮಟಾ ತಾಲೂಕಿನ ಕತಗಾಲನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಶಿರಸಿಯ ಕಸ್ತೂರಿ ಬಾ ನಗರ ನಿವಾಸಿ ಮಹಮ್ಮದ್ ಅಸ್ಲಾಂ ಬಾಬಾಜಾನ್ ಕರ್ಕಿಮಕ್ಕಿ ಹಾಗೂ ಶಿರಸಿಯ ಅಂಜೂ ಫರ್ನಿಚರ್ ಮಾಲೀಕ ಅಂಥೋನ್ ಬಿ ನರೋನಾ ಬಂಧಿತ ಆರೋಪಿಗಳು. ಮಂಗಳವಾರ ತಡರಾತ್ರಿ ವಾಹನದಲ್ಲಿ ಕಡವೆ ಕೊಂಬು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಕತಗಾಲ ಬಳಿ ಕಾರ್ಯಾಚರಣೆಗಿಳಿದಿದ್ದ ಉಪವಲಯ ಅರಣ್ಯಾಧಿಕಾರಿ ಬಿ. ಎನ್. ಬಂಕಾಪುರ ನೇತೃತ್ವದ ಸಿಬ್ಬಂದಿ ಬುಧವಾರ ಮುಂಜಾನೆ ಬಂದ ಎಲ್ಲ ವಾಹನಗಳ ತಪಾಸಣೆ ನಡೆಸಿದ್ದಾರೆ.

ಈ ವೇಳೆ, ಬಾಳೆಗೊನೆ ಸಾಗಿಸುವ ವಾಹನದಲ್ಲಿ ಅನಧೀಕೃತವಾಗಿ 4 ಕಡವೆ ಕೊಂಬು, ಜಂಗ್ಲಿ ಜಾತಿಯ ಕೊರೆದು ಪ್ಲೇನಿಂಗ್ ಮಾಡಿದ 54 ಮರದ ತುಂಡುಗಳು ಹಾಗೂ 8 ಕ್ವಿಂಟಾಲ್ ಬಾಳೆಗೊನೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ವನ್ಯಜೀವಿ ಹಾಗೂ ಅರಣ್ಯ ಕಾಯ್ದೆಯಡಿ ಕೇಸ್​ ದಾಖಲಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ, ಬಂಧಿತ ಆರೋಪಿಗಳನ್ನು ಕುಮಟಾ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕಾರ್ಯಾಚರಣೆ ವೇಳೆ ಅರಣ್ಯ ರಕ್ಷಕರಾದ ಮಹೇಶ ಹವಳಮ್ಮನವರ್, ಗಣೇಶ ನಾಯಕ, ಸದಾಶಿವ ಪುರಾಣಿಕ್, ವಾಹನ ಚಾಲಕ ವಸಂತ ನಾಯ್ಕ, ಇಲಾಖೆ ಸಿಬ್ಬಂದಿ ನಾಗೇಶ ಪಟಗಾರ, ಶಂಕರ ಗೌಡ, ಕಿರಣ ನಾಯ್ಕ ಇದ್ದರು.

ಇದನ್ನೂ ಓದಿ: ಚಾಮರಾಜನಗರದಲ್ಲಿ ಹುಲಿ ಉಗುರು ಮಾರಾಟ ಯತ್ನ: 3.5 ಲಕ್ಷ ಮೌಲ್ಯದ 8 ಉಗುರುಗಳು ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.