ಶಿರಸಿ(ಉತ್ತರ ಕನ್ನಡ): ಜೆಡಿಎಸ್ ಅನ್ನು ಬೆಂಬಲಿಸೋ ಪ್ಲಾನ್ ಇರಲಿಲ್ಲ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸೋನಿಯಾ ಗಾಂಧಿ ಅವರ ಜೊತೆ ಮಾತನಾಡಿದ್ದರು ಅನ್ನೋ ಸುದ್ದಿ ಗೊತ್ತಾಗಿತ್ತು. ಆದ್ರೆ ಅಧಿಕೃತವಾಗಿ ಯಾವುದೇ ಆದೇಶ ಮಾಡಿದ್ದು ಅಥವಾ ಸಂದೇಶ ಕೊಟ್ಟಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ ದೇಶಪಾಂಡೆ ಹೇಳಿದರು.
ಶಿರಸಿಯಲ್ಲಿ ನಡೆದ ದೈವಜ್ಞ ಕಲ್ಯಾಣ ಮಂಟಪದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ರಾಷ್ಟ್ರಮಟ್ಟದಲ್ಲಿ ಒಂದು ಶಿಬಿರ ಮಾಡಿದ್ರು, ಅದೇ ರೀತಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಶಿಬಿರ ನಡೆಯಲಿದೆ. ಹೇಗೆ ಪಕ್ಷ ಸಂಘಟನೆ ಮಾಡಬೇಕು, ಹೇಗೆ ಚುನಾವಣೆ ಎದುರಿಸಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಸಲು ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯಸಭೆ ಮೂರನೇ ಅಭ್ಯರ್ಥಿ ಗೆಲುವಿಗೆ ಹೀಗಿದೆ ಬಿಜೆಪಿ ಲೆಕ್ಕಾಚಾರ..!
ಹೊರಟ್ಟಿ ಬಿಜೆಪಿ ಸೇರಿದ್ದಾರೆ. ಆದ್ರೂ ಕೂಡ ನಮ್ಮ ಅಭ್ಯರ್ಥಿಯೂ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿ ಗೆಲ್ಲಿಸಲು ಬೇಕಾದ ಪ್ರಚಾರಗಳನ್ನು ರಾಜ್ಯ ಮಟ್ಟದಿಂದ ಮಾಡಲಾಗುತ್ತಿದೆ. ಅದೇ ರೀತಿ ಜಿಲ್ಲೆಯಲ್ಲೂ ಕೂಡ ಎಲ್ಲರೂ ಅಭ್ಯರ್ಥಿಯನ್ನು ಗೆಲ್ಲಿಸೋಕೆ ಕೈಜೋಡಿಸಿದ್ದಾರೆ. ಚುನಾವಣಾ ತಯಾರಿ ಕೂಡ ನಡೆದಿದ್ದು, ನಾವು ಸಿದ್ಧರಾಗಿದ್ದೇವೆ ಎಂದರು.