ETV Bharat / state

ಕುಡಿಯುವ ನೀರಿಗೆ ಹಾಹಾಕಾರ... ಮತದಾನ ಬಹಿಷ್ಕರಿಸಲು ಗ್ರಾಮಸ್ಥರ ನಿರ್ಧಾರ

ಕುಡಿಯುವ ಹನಿ ನೀರಿಲ್ಲ. ಇಲ್ಲಿವರೆಗೆ ಗೋಗರೆದರೂ ಸಮಸ್ಯಗೆ ಯಾರೂ ಸ್ಪಂದಿಸಿಲ್ಲ. ಹಾಗಾಗಿ ಈ ಬಾರಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಕಾರವಾರ ತಾಲೂಕು ಸದಾಶಿವಗಡದ ನಾಖುದಾ ಮೊಹಲ್ಲಾ ನಿವಾಸಿಗಳು ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸದಾಶಿವಗಡ ಗ್ರಾಮದಲ್ಲಿ ನೀರಿನ ಸಮಸ್ಯೆ
author img

By

Published : Apr 10, 2019, 11:24 AM IST

ಕಾರವಾರ: ಹತ್ತಾರು ವರ್ಷಗಳಿಂದ ನೂರಾರು ಕುಂಟುಂಬಗಳ ಬಾಯಾರಿಕೆ ನೀಗಿಸುತ್ತಿದ್ದ ಬಾವಿಗಳೆರಡು ಇದೀಗ ಬರಿದಾಗಿದೆ. ಇದರಿಂದ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಗೋಗರೆದರೂ ಯಾರೊಬ್ಬರು ತಿರುಗಿ ನೋಡುತ್ತಿಲ್ಲ. ಇದರಿಂದ ಗ್ರಾಮಸ್ಥರು ಸಿಟ್ಟಿಗೆದ್ದಿದ್ದು, ಚುನಾವಣೆಯನ್ನೇ ಬಹಿಷ್ಕರಿಸಲು ಮುಂದಾಗಿದ್ದಾರೆ.

ಹೌದು, ಉತ್ತರಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಸದಾಶಿವಗಡದ ನಾಖುದಾ ಮೊಹಲ್ಲಾ ನಿವಾಸಿಗಳು ಇಂತಹದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಇಲ್ಲಿ ತಲೆದೂರಿರುವ ನೀರಿನ ಸಮಸ್ಯೆ ಇದೀಗ ಗ್ರಾಮಸ್ಥರನ್ನು ಸಂಕಷ್ಟಕ್ಕೆ ದೂಡಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸದಾಶಿವಗಡ ಗ್ರಾಮದಲ್ಲಿ ನೀರಿನ ಸಮಸ್ಯೆ

ಗ್ರಾಮದಲ್ಲಿರುವುದು ಎರಡೇ ಕುಡಿಯುವ ನೀರಿನ ಬಾವಿ:

ಇನ್ನು ಇಷ್ಟೊಂದು ಕುಟುಂಬಗಳಿದ್ದರೂ ಗ್ರಾಮದಲ್ಲಿರುವುದು ಎರಡು ಕುಡಿಯುವ ನೀರಿನ ಬಾವಿಗಳು ಮಾತ್ರ. ಒಂದು ಮಸೀದಿಯವರು ತೆಗೆಸಿದ್ದು, ಇನ್ನೊಂದು ಬಾವಿ ಖಾಸಗಿಯವರದಾಗಿದೆ. ನೀರು ಸರಿಯಾಗಿ ಸಿಗದ ಕಾರಣ ಪಾಳು ಬಿದ್ದಿದೆ. ಉಳಿದಂತೆ ಬಾವಿಗಳಿದ್ದರೂ ಉಪ್ಪು ನೀರು ಮತ್ತು ಜವಳು ಮಿಶ್ರಿತವಾಗಿದ್ದರಿಂದ ಪ್ರಯೋಜನಕ್ಕೆ ಬರದಂತಾಗಿದೆ. ಆದರೆ ಇಲ್ಲಿರುವ ಮಸೀದಿ ಬಾವಿಯಲ್ಲಿಯೂ ಕೂಡ ಕಳೆದ ನಾಲ್ಕೈದು ವರ್ಷಗಳಿಂದ ನೀರು ಕಡಿಮೆಯಾಗಿದ್ದು, ಕೆಲ ಬಾರಿ ಅರ್ಧ ಕೊಡ ಸಿಗುವುದು ಕಷ್ಟ ಎನ್ನುತ್ತಾರೆ ಗ್ರಾಮಸ್ಥರು.

ಕಿವಿಗೊಡದ ಜನಪ್ರತಿನಿಧಿಗಳು, ಅಧಿಕಾರಿಗಳು:

ಇನ್ನು ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ಫಕ್ರುದ್ದೀನ್ ದಾವೂದ್, ಗ್ರಾಮದಲ್ಲಿ ದಿನೇ ದಿನೇ ನೀರಿನ ಸಮಸ್ಯೆ ಜೋರಾದಾಗ ಗ್ರಾಮ ಪಂಚಾಯತ್​, ತಹಶಿಲ್ದಾರ್, ಜಿಲ್ಲಾಧಿಕಾರಿ ಸೇರಿ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೆ ಯಾರೊಬ್ಬರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಪಕ್ಕದ ಗ್ರಾಮಕ್ಕೆ ಪೈಪ್​ಲೈನ್ ಹಾಕಿ ನೀರು ಬಿಡಲಾಗುತ್ತಿದೆ. ಆದರೆ ನಮಗೆ ಮಾತ್ರ ಇನ್ನೂ ಸೌಲಭ್ಯ ನೀಡಿಲ್ಲವೆಂದು ದೂರಿದರು.

ಮತದಾನ ಬಹಿಷ್ಕಾರ:

ನಮ್ಮಲ್ಲಿ ನೀರಿನ ಸಮಸ್ಯೆ ಮಿತಿ ಮೀರಿದೆ.‌ ಸಮಸ್ಯೆ ಹೇಳಿಕೊಂಡರೆ ಯಾರೂ ಕಿವಿಗೊಡುತ್ತಿಲ್ಲ. ಆದರೆ ಪ್ರತಿ ವರ್ಷ ಮತಯಾಚನೆಗೆ ತಪ್ಪದೇ ಬರುತ್ತಾರೆ. ಇದರಿಂದ ಈ ಬಾರಿ ನಮಗೆ ಅವಶ್ಯವಿರುವ ನೀರನ್ನು ಪೂರೈಸುವವರೆಗೂ ಗ್ರಾಮಸ್ಥರೆಲ್ಲ ಸೇರಿ ಮತದಾನ ಮಾಡದಿರಲು ನಿರ್ಧರಿಸಿದ್ದೇವೆ. ನಮಗೂ ಸಹ ಎಲ್ಲರಂತೆ ನೀರು ಸಿಗುವಂತಾಗಬೇಕು. ಅಲ್ಲದೆ ಗ್ರಾಮದಲ್ಲಿ ರಸ್ತೆ ಕೂಡ ಇಲ್ಲ, ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ಜಾಗವಿಲ್ಲ. ಇದರಿಂದ ಪ್ರತಿ ವರ್ಷ ಮಳೆಗಾಲ ಬೇಸಿಗೆ ಕಾಲದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಗಮನ ಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Intro:ಕಾರವಾರ: ಹತ್ತಾರು ವರ್ಷಗಳಿಂದ ನೂರಾರು ಕುಂಟುಂಬಗಳ ಬಾಯಾರಿಕೆ ನೀಗಿಸುತ್ತಿದ್ದ ಬಾವಿಗಳೆರಡು ಇದೀಗ ತಳಪಾಯ ಕಂಡಿದೆ. ಆದರೆ ಸಮಸ್ಯೆ ಬಗೆಹರಿಸುವಂತೆ ಗೋಗರೆದರು ಯಾರೊಬ್ಬರು ತಿರುಗಿ ನೋಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಿಟ್ಟಿಗೆದ್ದಿದ್ದು, ಇದೀಗ ಚುನಾವಣೆಯನ್ನೆ ಬಹಿಷ್ಕರಿಸುವ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಹೌದು, ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಸದಾಶಿವಗಡದ ನಾಖುದಾ ಮೊಹಲ್ಲಾದ ನಿವಾಸಿಗಳು ಇಂತಹದೊಂದು ನಿರ್ಧಾರಕ್ಕೆ ಮುಂದಾಗಿದ್ದಾರೆ. ಗ್ರಾಮದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಮನೆಗಳಿದ್ದು, ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಆದರೆ ಗ್ರಾಮದಲ್ಲೆ ಕಳೆದ ಹಲವು ವರ್ಷಗಳಿಂದ ತಲೆದೂರಿರುವ ನೀರಿನ ಸಮಸ್ಯೆ ಇದೀಗ ಗ್ರಾಮಸ್ಥರನ್ನು ಸಂಕಷ್ಟಕ್ಜೆ ದೂಡಿದೆ.
ಗ್ರಾಮದಲ್ಲಿರುವುದು ಎರಡೇ ಕುಡಿಯುವ ನೀರಿ ಬಾವಿ:
ಇನ್ನು ಇಷ್ಟೊಂದು ಕುಟುಂಬಗಳಿದ್ದರು ಗ್ರಾಮದಲ್ಲಿರುವುದು ಎರಡು ಕುಡಿಯುವ ನೀರಿನ ಬಾವಿ ಮಾತ್ರ. ಒಂದು ಮಸಿದಿಯವರು ತೆಗಸಿದ್ದು, ಇದೀಗ ಇಡೀ ಗ್ರಾಮಕ್ಕೆ ಜೀವ ಜಲವನ್ನು ಪೂರೈಸುತ್ತಿದೆ. ಇನ್ನೊಂದು ಬಾವಿ ಖಾಸಗಿಯವರದಾಗಿದ್ದು, ನೀರು ಸರಿಯಾಗಿ ಇಲ್ಲದ ಕಾರಣ ಪಾಳು ಬಿದ್ದಿದೆ. ಉಳಿದಂತೆ ಬಾವಿಗಳಿದ್ದರು ಉಪ್ಪು ನೀರು ಮತ್ತು ಜವಳು ಮಿಶ್ರಿತವಾಗಿದ್ದರಿಂದ ಪ್ರಯೋಜನಕ್ಕೆ ಬರದಂತಾಗಿದೆ. ಆದರೆ ಇಲ್ಲಿರುವ ಮಸಿದಿ ಬಾವಿಯಲ್ಲಿಯೂ ಕೂಡ ಕಳೆದ ನಾಲ್ಕೈದು ವರ್ಷಗಳಿಂದ ನೀರು ಕಡಿಮೆಯಾಗಿದ್ದು, ಕೆಲ ಬಾರಿ ಅರ್ಧ ಕೊಡ ಸಿಗುವುದು ಕಷ್ಟ ಎನ್ನುತ್ತಾರೆ ಗ್ರಾಮಸ್ಥರು.
ಕಿವಿಗೊಡದ ಜನಪ್ರತಿನಿಧಿಗಳು ಅಧಿಕಾರಿಗಳು:
ಇನ್ನು ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ಫ್ರಕ್ರುದ್ದೀನ್ ದಾವುದ್, ಗ್ರಾಮದಲ್ಲಿ ದಿನೆ ದಿನೆ ನೀರಿನ ಸಮಸ್ಯೆ ಜೋರಾದಾಗ ಗ್ರಾಮ ಪಂಚಾಯಿತಿ, ತಹಶೀಲ್ದಾರ್, ಜಿಲ್ಲಾಧಿಕಾರಿ ಸೇರಿ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೆ ಯಾರೊಬ್ಬರು ಈ ಬಗ್ಗೆ ಗಮನ ನೀಡುತ್ತಿಲ್ಲ. ಪಕ್ಕದ ಗ್ರಾಮಕ್ಕೆ ಪೈಪ್ ಲೈನ್ ಹಾಕಿ ನೀರು ಬಿಡಲಾಗುತ್ತಿದೆ. ಆದರೆ ನಮಗೆ ಮಾತ್ರ ಇನ್ನು ನೀರಿನ ಸೌಲಭ್ಯ ನೀಡಿಲ್ಲ ಎಂದು ದೂರಿದರು.
ಮತದಾನ ಬಹಿಷ್ಕಾರ:
ನಮ್ಮಲ್ಲಿ ನೀರಿನ ಸಮಸ್ಯೆ ಮಿತಿ ಮೀರಿದೆ.‌ ಸಮಸ್ಯೆ ಹೇಳಿಕೊಂಡರೆ ಯಾರು ಗಮನ ಹರಿಸುತ್ತಿಲ್ಲ. ಆದರೆ ಪ್ರತಿ ವರ್ಷ ಮತಯಾಚನೆಗೆ ತಪ್ಪದೆ ಬರುತ್ತಾರೆ. ಇದರಿಂದ ಈ ಬಾರಿ ನಮಗೆ ಅವಶ್ಯವಿರುವ ನೀರನ್ನು ಪೂರೈಸುವವರೆಗೂ ಗ್ರಾಮಸ್ಥರು ಮತದಾನ ಮಾಡದಿರಲು ನಿರ್ಧರಿಸಿದ್ದೇವೆ. ನಮಗೆ ನೀರಿನ ಸಮಸ್ಯೆ ಬಗೆ ಹರಿಸಿ ಎಲ್ಲರಿಗೂ ನೀರು ಸಿಗುವಂತಾಗಬೇಕು. ಅಲ್ಲದೆ ಗ್ರಾಮದಲ್ಲಿ ರಸ್ತೆ ಕೂಡ ಇಲ್ಲ ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ಜಾಗವಿಲ್ಲ. ಇದರಿಂದ ಪ್ರತಿ ವರ್ಷ ಮಳೆಗಾಲ ಬೆಸಿಗೆಕಾಲದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಗಮನ ಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Body:ಕ

Conclusion:ಕ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.