ಕಾರವಾರ: ಕಾರು ಹಾಗೂ ಓಮಿನಿ ವಾಹನದ ಗಾಜು ಒಡೆದು ಒಳಗಡೆಯಿದ್ದ ಬ್ಯಾಗ್ ಮತ್ತು ಬಟ್ಟೆಗಳನ್ನು ಹೊತ್ತೊಯ್ದಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ರಾಕ್ ಗಾರ್ಡನ್ ವೀಕ್ಷಣೆಗೆ ಬಂದ ಮಹಾರಾಷ್ಟ್ರ ಹಾಗೂ ಗೋವಾ ಮೂಲದ ಪ್ರವಾಸಿಗರ ಕಾರಿನ ಗಾಜು ಒಡೆದು ಅದರಲ್ಲಿದ್ದ ಬ್ಯಾಗ್ ಕಳ್ಳತನ ಮಾಡಿದ್ದಾರೆ. ಕಾರಿನಲ್ಲಿ 10 ಸಾವಿರ ರೂ ನಗದು ಇತ್ತು. ಇನ್ನೊಂದು ಕಾರಿನಲ್ಲಿದ್ದ ಬಟ್ಟೆ ಬ್ಯಾಗನ್ನು ಕಳ್ಳತನ ಮಾಡಿದ್ದಾರೆ.
ಸ್ಥಳಕ್ಕೆ ಪೋಲಿಸರು ಬಂದು ಪರೀಶಿಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.