ETV Bharat / state

ಸಿದ್ದಾಪುರದಲ್ಲಿ ಮಳೆಗಾಲದಲ್ಲಷ್ಟೇ ಸೃಷ್ಟಿಯಾಗೋ ಫಾಲ್ಸ್​​... ಭೋರ್ಗರೆವ ನೀರಲ್ಲಿ ಪ್ರವಾಸಿಗರ ಮಸ್ತಿ

author img

By

Published : Aug 4, 2019, 1:45 PM IST

ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಸಿದ್ದಾಪುರದ ನಿಫಲಿ ಫಾಲ್ಸ್​ಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ತುಂಬಿ ಹರಿಯುತ್ತಿದೆ ನಿಫಲಿ ಫಾಲ್ಸ್

ಶಿರಸಿ: ಅತ್ಯಂತ ಸುರಕ್ಷಿತ ಹಾಗೂ ನೀರಲ್ಲಿ ಇಳಿದು ಆಟ ಆಡುತ್ತಾ ಮಜಾ ಮಾಡಬಲ್ಲ ಜಿಲ್ಲೆಯ ವಿಶಿಷ್ಟ ಫಾಲ್ಸ್​ ವೀಕ್ಷಣೆಗೆ ದಿನೇ ದಿನೆ ಜನಸಾಗರ ಹೆಚ್ಚುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವ ಫಾಲ್ಸ್​ಗೆ ಪ್ರತಿ ದಿನ ವಿವಿಧ ಜಿಲ್ಲೆಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಸಿದ್ದಾಪುರದಿಂದ ವಿಶ್ವ ಪ್ರಸಿದ್ಧ ಜೋಗ್​ಫಾಲ್ಸ್​ಗೆ ಹೋಗುವ ರಸ್ತೆಯಲ್ಲಿ ಸಿಗುವ ಈ ಫಾಲ್ಸ್​ ಹೊಸೂರು ಡ್ಯಾಂನಿಂದ ಉದ್ಭವವಾಗಿದೆ. ರಜಾ ದಿನಗಳಲ್ಲಿ 15-20 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಾರದ ದಿನದಲ್ಲಿ ಸಾವಿರಾರು ಜನರು ಭೇಟಿ ನೀಡುತ್ತಾರೆ.

ತುಂಬಿ ಹರಿಯುತ್ತಿದೆ ಫಾಲ್ಸ್

ಪ್ರಸಿದ್ಧ ಜೋಗಕ್ಕೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಿರುವುದು ವಿಶೇಷವಾಗಿದೆ. ಮಳೆಗಾಲದಲ್ಲಿ ಹೊಸೂರು ಡ್ಯಾಂ​ ತುಂಬಿ ಹೊರಬಂದ ನೀರು ಚಿರೆ ಕಲ್ಲಿನ ಇಳಿಜಾರು ಜಾಗದಲ್ಲಿ ಹರಿದು ಈ ಫಾಲ್ಸ್​ ರೂಪುಗೊಂಡಿದೆ. ಸುಮಾರು 200 ಮೀಟರ್​ ಉದ್ದ ಹಾಗೂ 25-30 ಮೀಟರ್​ನಷ್ಟು ಅಗಲವಾಗಿ ಈ ಫಾಲ್ಸ್​ ಹರಿಯುತ್ತದೆ.

ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇದು ಕೇವಲ 3 ರಿಂದ 4 ತಿಂಗಳು ಮಾತ್ರ ನೀರಿರುವ ಫಾಲ್ಸ್​ ಇದಾಗಿದ್ದು, ಮಳೆಗಾಲ ಮುಗಿದ ಮೇಲೆ ಡ್ಯಾಂ ನೀರು ಇಳಿಮುಖವಾಗುವುದರಿಂದ ನೀರಿನ ಹರಿವು ಇರುವುದಿಲ್ಲ.

ಜೋಗ ಹಾಗೂ ಇತರೆ ಫಾಲ್ಸ್​ಗಳ ಸಮೀಪಕ್ಕೆ ಹೋಗಲು ಬಿಡುವುದಿಲ್ಲ. ‌ಆದರೆ ಈ ಫಾಲ್ಸ್​ ಬಹಳ ಸುರಕ್ಷಿತವಾಗಿದ್ದು ಸುಲಭವಾಗಿ ನೀರಿನಲ್ಲಿ ಇಳಿದು ಆಡಬಹುದು. ಯಾವುದೇ ಅಪಾಯವಿಲ್ಲ ಎನ್ನುವುದು ಪ್ರವಾಸಿಗರ ಮಾತಾಗಿದೆ.

Intro:ಶಿರಸಿ :
ಅತ್ಯಂತ ಸುರಕ್ಷಿತ ಹಾಗೂ ನೀರಲ್ಲಿ ಇಳಿದು ಆಟ ಆಡುತ್ತಾ ಮಜಾ ಮಾಡಬಲ್ಲ ಜಿಲ್ಲೆಯ ವಿಶಿಷ್ಟ ಫಾಲ್ಸ ಆಗಿರುವ ನಿಪಲಿ ಫಾಲ್ಸ ವೀಕ್ಷಣೆಗೆ ದಿನೇ ದಿನೇ ಜನಸಾಗರ ಹೆಚ್ಚಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವ ಫಾಲ್ಸಗೆ ಪ್ರತಿ ದಿವಸ ವಿವಿಧ ಜಿಲ್ಲೆಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ನೀರಿನ ಆಟದ ಮಜಾ ಅನುಭವಿಸುತ್ತಿದ್ದಾರೆ.

ಸಿದ್ದಾಪುರದಿಂದ ವಿಶ್ವ ಪ್ರಸಿದ್ಧ ಜೋಗ್ ಫಾಲ್ಸ್ ಗೆ ಹೋಗುವ ರಸ್ತೆಯಲ್ಲಿರುವ ಸಿಗುವ ನಿಪಲಿ ಫಾಲ್ಸ ಹೊಸೂರು ಡ್ಯಾಮ್ ನಿಂದ ಉದ್ಭವವಾಗಿದೆ. ರಜಾ ದಿನಗಳಲ್ಲಿ 15-20ಸಾವಿರ ಪ್ರವಾಸಿಗರು ಬರುತ್ತಿದ್ದು, ವಾರದ ದಿನದಲ್ಲಿ ಸಾವಿರಾರು ಜನರು ಭೇಟಿ ನೀಡುತ್ತಾರೆ.

Body:ಪ್ರಸಿದ್ಧ ಜೋಗಕ್ಕೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಿರುವುದು ವಿಶೇಷವಾಗಿದೆ. ಹಲಗೇರಿ ಗ್ರಾಪಂದ ಹೂಸೂರು ಡ್ಯಾಮ ಮಳೆಗಾಲದಲ್ಲಿ ತುಂಬಿದಾಗ ಹೊರಬಂದು ಪಕ್ಕದ ಚಿರೆಕಲ್ಲಿನ ಇಳಿಜಾರು ಜಾಗದಲ್ಲಿ ನಿಪಲಿ‌ ಫಾಲ್ಸ ಹರಿಯುತ್ತದೆ. ಸುಮಾರು 200ಮೀಟರ ಉದ್ದ ಹಾಗೂ 25-30ಮೀಟರ್‍ನಷ್ಟು ಅಗಲವಾಗಿ ಹರಿಯುವದೇ ಫಾಲ್ಸಿಮ ವಿಶೇಷವಾಗಿದೆ. ರಸ್ತೆ ಸಮೀಪವೇ ಇರುವದರಿಂದ ವಾಹನ ಪಾರ್ಕ ಮಾಡಿ ಬಂದು ಬದಿಗೆ ನಿಂತು ನೋಡಬಹುದಾಗಿದೆ.

ಹಲಗೇರಿ ಬಸ್ ನಿಲ್ದಾಣದಿಂದ ಅರ್ಧ ಕಿಮಿ ದೂರದಲ್ಲೇ ಈ ಪಾಲ್ಸ್ ರಸ್ತೆ ಪಕ್ಕವೇ ಇದೆ. ಈ ನೀರು ಚಿರೆಕಲ್ಲಿನ ಮೇಲೆ ಹರಿಯುವದರಿಂದ ಜನರು ನೀರಲ್ಲಿ ಹೋಗಿ ಆಡುವದೇ ಹೆಚ್ಚು. ಜೋರಾದ ಮಳೆ ನಡುವೆ ಸಾವಿರಾರು ಯುವಕ, ಯುವತಿಯರು ನೀರಾಟ ಆಡುತ್ತಾರೆ.ಹಾವೇರಿ,ಹುಬ್ಬಳ್ಳಿ,ದಾವಣಗೇರಿ,ಶಿವಮೊಗ್ಗ .ಉ.ಕ ಜಿಲ್ಲೆಯ ಸಾವಿರಾರುಜನರು ಇಲ್ಲಿಗೆ ಬರುತ್ತಾರೆ. ಇದು ಕೇವಲ 3-4ತಿಂಗಳು ಮಾತ್ರ ಕಾಣಸಿಗುವ ಫಾಲ್ಸ ಆಗಿದ್ದು, ಮಳೆಗಾಲ ಮುಗಿದ ಮೇಲೆ ಡ್ಯಾಮ ನೀರು ಇಳಿಯುವದರಿಂದ ಆಗ ನೀರು ಹರಿವು ಇರುವದಿಲ್ಲ.

ಜೋಗ ಹಾಗೂ ಇತರೆ ಫಾಲ್ಸನಲ್ಲಿ ಸಮೀಪ ಹೋಗಲು ಬಿಡುವದಿಲ್ಲ.‌ಬಹಳ ತ್ರಾಸುದಾಯಕವೂ ಆಗಿದೆ. ಆದರೆ ಈ ಫಾಲ್ಸ ಬಹಳ ಸುರಕ್ಷಿತ ಹಾಗೂ ಸುಲಭವಾಗಿ ನೀರು ಬಳಿ ಹೋಗಿ ಆಡಬಹುದು. ವಿಶೇಷ ಅಪಾಯವೂ ಇಲ್ಲ ಎನ್ನುವುದು ಪ್ರವಾಸಿಗರ ಮಾತಾಗಿದೆ.

.........
ಸಂದೇಶ ಭಟ್ ಶಿರಸಿ. Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.