ETV Bharat / state

ಮುರ್ಡೇಶ್ವರದಲ್ಲೇ ಪ್ರಾಂಭವಾಯಿತು ನೂತನ ವಿದ್ಯುತ್​ ಸರಬರಾಜು ಶಾಖೆ.. - Hubballi Power Supply Branch

ಮುರ್ಡೇಶ್ವರ ಭಾಗದ ಜನರ ಬಹುಬೇಡಿಕೆಯಾಗಿದ್ದ ನೂತನ ವಿದ್ಯುತ್​ ಸರಬರಾಜು ಶಾಖೆ ಮುರ್ಡೇಶ್ವರದಲ್ಲಿ ಪ್ರಾರಂಭವಾಗಿದ್ದು, ಈ ಕಾರ್ಯಕ್ರಮವನ್ನು ಭಟ್ಕಳ ಶಾಸಕ ಸುನೀಲ ನಾಯ್ಕ ಉದ್ಘಾಟಿಸಿ, ಇನ್ನು ನಿಮ್ಮ ಸಣ್ಣ, ಪುಟ್ಟ ಸಮಸ್ಯೆಗಳಿಗೆ ಭಟ್ಕಳಕ್ಕೆ ಹೋಗುವ ಪರಿಸ್ಥಿತಿ ಇಲ್ಲ ಎಂದರು.

ನೂತನ ವಿದ್ಯುತ್​ ಸರಬರಾಜು ಶಾಖೆ ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ
author img

By

Published : Oct 2, 2019, 7:57 PM IST

ಭಟ್ಕಳ: ಈ ಭಾಗದ ಬಹು ಜನರ ಬೇಡಿಕೆಯಾಗಿದ್ದ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಶಾಖೆಯನ್ನು ತೆರೆಯಲಾಗಿದ್ದು, ನಿಮ್ಮಲ್ಲಿನ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಿ ಭಟ್ಕಳಕ್ಕೆ ಹೋಗುವ ಬದಲು ಅದರ ವ್ಯವಸ್ಥೆಯನ್ನು ಇಲ್ಲೇ ಕಲ್ಪಿಸಿಕೊಟ್ಟಿದ್ದೇವೆ ಎಂದು ಭಟ್ಕಳ ಕ್ಷೇತ್ರದ ಶಾಸಕ ಸುನೀಲ ನಾಯ್ಕ್ ಹೇಳಿದರು.

ನೂತನ ವಿದ್ಯುತ್​ ಸರಬರಾಜು ಶಾಖೆ ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ್..

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಇದರ ಮುರ್ಡೇಶ್ವರದ ಹೊಸ ಶಾಖೆಯನ್ನು ದೀಪ ಬೆಳಗಿಸಿ, ಶಾಖೆಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಭಾಗದ ಬಹು ಜನರ ಬೇಡಿಕೆಯಾಗಿದ್ದ ಈ ಶಾಖೆ ಕಾರಣಾಂತರಗಳಿಂದ ಕಾರ್ಯಾರಂಭ ವಿಳಂಭವಾಗಿತ್ತು. ಈ ಶಾಖೆಯಿಂದ ನಿಮ್ಮಲ್ಲಿನ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಲಿಕ್ಕೆ ಆಗುತ್ತದೆ. ಮುರ್ಡೇಶ್ವರದ ಆಸುಪಾಸಿನ ಬೈಲೂರು, ಉತ್ತರಕೊಪ್ಪ ಹಾಗೂ ಬಸ್ತಿಯಲ್ಲಿನ ಜನರಿಗೆ ವಿದ್ಯುತ್ ವ್ಯತ್ಯಯದ ಸಮಸ್ಯೆ ತೋರಿದಲ್ಲಿ 25 ಕಿ.ಮಿ. ದೂರ ಹೋಗಿ ಪರಿಹಾರ ಕಂಡುಕೊಳ್ಳಬೇಕಿತ್ತು. ಅಂತಹ ಸಮಸ್ಯೆ ಇನ್ನು ಮುಂದೆ ಇದೇ ಶಾಖೆಯಲ್ಲಿ ಪರಿಹರಿಸಿಕೊಳ್ಳಬಹುದು. ಸ್ವಲ್ಪ ದಿನದಲ್ಲೇ ಕರೆಂಟ್​ ಬಿಲ್ ಪಾವತಿಸಲು ಭಟ್ಕಳಕ್ಕೆ ಹೋಗುವ ಬದಲು ಆ ವ್ಯವಸ್ಥೆಯನ್ನೂ ಈ ಶಾಖೆಯಲ್ಲೇ ಮಾಡಿಕೊಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಕಾರ್ಯಕ್ರಮದ ನಂತರ ಸೌಭಾಗ್ಯ ಯೋಜನೆಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕದ ದೃಢೀಕರಣ ಪತ್ರಗಳನ್ನು ನೀಡಲಾಯಿತು.

Intro:ಭಟ್ಕಳ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಇದರ ಮುರ್ಡೇಶ್ವರದ ಹೊಸ ಶಾಖೆಯನ್ನು
ಭಟ್ಕಳ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಬುಧವಾರದಂದು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ನೂತನ ಶಾಖೆಯಲ್ಲಿ ಉದ್ಘಾಟಿಸಿ,
ಸೌಭಾಗ್ಯ ಯೋಜನೆಯ ಧೃಡಿಕರಣ ಪತ್ರ ವಿತರಿಸಿದರುBody:ಭಟ್ಕಳ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಇದರ ಮುರ್ಡೇಶ್ವರದ ಹೊಸ ಶಾಖೆಯನ್ನು
ಭಟ್ಕಳ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಬುಧವಾರದಂದು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ನೂತನ ಶಾಖೆಯಲ್ಲಿ ಉದ್ಘಾಟಿಸಿ,
ಸೌಭಾಗ್ಯ ಯೋಜನೆಯ ಧೃಡಿಕರಣ ಪತ್ರ ವಿತರಿಸಿದರು

ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಶಾಖೆಯ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಈ ಭಾಗದ ಬಹು ಜನರ ಬೇಡಿಕೆಯಾಗಿದ್ದ ಈ ಶಾಖೆ ಕಾರಣಾಂತರಗಳಿಂದ ವಿಳಂಭವಾಗಿತ್ತು, ಈ ಶಾಖೆಯಿಂದ ನಿಮ್ಮಲ್ಲಿನ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಲಿಕ್ಕೆ ಆಗುತ್ತದೆ. ಮುರ್ಡೇಶ್ವರದ ಆಸುಪಾಸಿನ ಬೈಲೂರು, ಉತ್ತರಕೊಪ್ಪ ಹಾಗೂ ಬಸ್ತಿಯಲ್ಲಿನ ಜನರಿಗೆ ವಿದ್ಯುತ ವ್ಯತ್ಯಯದ ಸಮಸ್ಯೆ ತೋರಿದಲ್ಲಿ 25 ಕಿ.ಮಿ. ದೂರ ಹೋಗಿ ಪರಿಹಾರ ಕಂಡುಕೊಳ್ಳಬೇಕಿತ್ತು. ಅಂತಹ ಸಮಸ್ಯೆ ಇನ್ನೂ ಮುಂದೆ ಇದೆ ಶಾಖೆಯಲ್ಲಿ ಪರಿಹರಿಸಿಕೊಳ್ಳಬಹುದು. ಸ್ವಲ್ಪ ದಿನದಲ್ಲೇ ಕರೇಂಟ ಬಿಲ್ ಪಾವತಿಸಲು ಭಟ್ಕಳಕ್ಕೆ ಹೋಗುವ ಬದಲು ಆ ವ್ಯವಸ್ಥೆ ಈ ಮುರ್ಡೇಶ್ವರ ಶಾಖೆಯಲ್ಲೆ ಮಾಡಿಕೊಡಲಾಗುವುದು ಎಂದರು.

ನಂತರ ಜಿಲ್ಲಾ ಪಂಚಾಯತ ಸದಸ್ಯರಾದ ಸಿಂಧು ಭಾಸ್ಕರ ನಾಯ್ಕ ಮಾತನಾಡಿ ವಿದ್ಯುತ್ ಸಮಸ್ಯೆ ಏನೇ ತಲೆದೂರಿದ್ದರೂ ಭಟ್ಕಳಕ್ಕೆ ಹೋಗಬೇಕಿತ್ತು, ಈ ಶಾಖೆ ಮುರ್ಡೇಶ್ವರದಲ್ಲೇ ಆಗಿರುವುದರಿಂದ ಇಲ್ಲಿನ ಜನರಿಗೆ ತುಂಬಾ ಸಂತೋಷವಾಗಿದೆ. ಈ ಶಾಖೆಯ ಉದ್ಘಾಟನೆ ವರ್ಷದ ಹಿಂದೆಯೆ ಆಗಬೇಕಿದ್ದು, ಈ ಶಾಖೆಗೆ ಹಿಂದಿನ ಶಾಸಕರಾದ ಮಂಕಾಳ ವೈದ್ಯರ ಶ್ರಮ ತುಂಬಾ ಇದೆ. ಗ್ರಾಮೀಣ ಭಾಗದಿಂದ ಬರುವ ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿ, ಯಾವುದೇ ತೊಂದರೆ ಆಗದೆ ಇರುವಾಗೆ ನೋಡಿಕೊಳ್ಳಿ, ಇದರ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳಿ ಎಂದರು.

ನಂತರ ಸೌಭಾಗ್ಯ ಯೋಜನೆಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕದ ಧೃಡಿಕರಣ ಪತ್ರಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾವಳ್ಳಿ 2 ಪಂಚಾಯತ್ ಅಧ್ಯಕ್ಷೆ ನಾಗರತ್ನ ಮೊಗೇರ, ಜಿಲ್ಲಾ ಪಂಚಾಯತ್ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಹೊನ್ನಾವರ ವಿಭಾಗದ ಹೆಸ್ಕಾಂ ಅಭಿಯಂತರ ವಿನೋದ ಭಾಗ್ವತ್‌, ಭಟ್ಕಳ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ನಾಯ್ಕ, ಹೆಸ್ಕಾಂ ಸಹಾಯಕ ಇಂಜಿನಿಯರ್ ಶಿವಾನಂದ ನಾಯ್ಕ ಹಾಗೂ ಪವರ ಮೇನಗಳು ಮೊದಲಾದವರು ಉಪಸ್ಥಿತರಿದ್ದರು.Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.