ಭಟ್ಕಳ(ಉತ್ತರ ಕನ್ನಡ): ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.
ಬಂಧಿತ ಆರೋಪಿ ಅಬ್ದುಲ್ ಹನಾನ್ ಮೊಹ್ಮದ ಜಾಫರ್ ಕಡದಾರಿ ಎಂದು ತಿಳಿದು ಬಂದಿದೆ. ಕಳೆದ ಆಗಸ್ಟ್ 20 ರಂದು ಅಜಾದ್ ನಗರದ 1 ಕ್ರಾಸ್ ಸಮೀಪ ಕೊಕ್ತಿ ನಗರದಲ್ಲಿ ಮಾರುತಿ ಗ್ರೇ ಬಣ್ಣದ ಕಾರಿನಲ್ಲಿ ಬಂದು ಬಾಲಕನನ್ನು ಅಪಹರಣ ಮಾಡಿದ್ದರು. ಬಳಿಕ ಪೊಲೀಸರು ಗೋವಾದ ಕಲ್ಲಂಗೋಟ್ ಬೀಚ್ ಸಮೀಪ ಬಾಲಕನನ್ನು ಪತ್ತೆ ಹಚ್ಚಿ ಭಟ್ಕಳಕ್ಕೆ ವಾಪಸ್ ಕರೆ ತರಲಾಗಿತ್ತು.
ಪ್ರಕರಣ್ಕೆ ಸಂಬಂಧಿಸಿದಂತೆ ಮೊದಲು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಭಟ್ಕಳ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು. ಇದೀಗ ಅಪಹರಣದ ಮಾಸ್ಟರ್ ಮೈಂಡ್ ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂದಿಸಿದ್ದು. ಇನ್ನೋರ್ವ ಆರೋಪಿ ಬಾಲಕನ ತಾತ ಸೌದಿ ಅರಿಬ್ಬಿಯಾದಲ್ಲಿ ತಲೆ ಮರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಶಾಲಾ ಬಾಲಕಿಯೊಂದಿಗೆ ಓಡಿ ಹೋದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್!