ETV Bharat / state

ಬಾಲಕನ ಬಾಳು ಕತ್ತಲಾಗಿಸಿದ ಆ ಘಟನೆ... ಬೇಕಿದೆ ನೆರವಿನ ಹಸ್ತ - kannadanews

ಬ್ರಿಯಾನ್ ಟೆಲಿಸ್ ಎಂಬ ಬಹುಮುಖ ಪ್ರತಿಭೆಯುಳ್ಳ  ಈ ಬಾಲಕ ಅಪಘಾತದಲ್ಲಿ ಎಡಗಾಲಿನ ಪಾದ ಕಳೆದುಕೊಂಡು ಹಾಸಿ ಹಿಡಿದಿದ್ದಾನೆ. ಈತನಿಗೆ  ಕೃತಕ ಕಾಲು ಹಾಕಿಸಲು ಮತ್ತು  ಶಿಕ್ಷಣಕ್ಕೆ ಸಹಾಯಸ್ತ ನೀಡುವಂತೆ ಪೋಷಕರು ಕೇಳಿಕೊಂಡಿದ್ದಾರೆ.

ಬಾಲಕನಿಗೆ ಬೇಕಿದೆ ನೆರವಿನ ಹಸ್ತ
author img

By

Published : Jun 18, 2019, 1:15 PM IST

ಕಾರವಾರ: ಆತ ಆಟ, ಪಾಠದಲ್ಲಿ ಸದಾ ಮುಂದಿರುವ ಬಾಲಕ. ಜತೆಗೆ ನೃತ್ಯ, ಸಂಗೀತವೂ ಆತನ ಉಸಿರು. ಆದರೆ, ಎರಡು ತಿಂಗಳ ಹಿಂದೆ ನಡೆದ ಘಟನೆಯೊಂದು ಆತನ ಜೀವನವನ್ನೇ ಕತ್ತಲಾಗಿಸಿದ್ದು, ಬಡ ತಂದೆತಾಯಿಗಳಿಗೆ ಬರಸಿಡಿಲು ಬಡಿದಂತಾಗಿದೆ.

ಬಾಲಕನಿಗೆ ಬೇಕಿದೆ ನೆರವಿನ ಹಸ್ತ

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಾಗದ ಬಾಲಕ ಬ್ರಿಯಾನ್ ಟೆಲಿಸ್ ಬಹುಮುಖ ಪ್ರತಿಭೆ. ಓದಿನಲ್ಲಿ ಮತ್ತು ಇತರ ಚಟುವಟಿಕೆಯಲ್ಲಿ ಸದಾ ಮುಂದು. ಈತ ಒಂಬತ್ತನೇ ತರಗತಿಯಲ್ಲಿ ಶೇ. 80 ರಷ್ಟು ಅಂಕಗಳಿಸಿದ್ದ. ಆದರೆ, ಅಂದೊಂದು ದಿನ ಸ್ನೇಹಿತರೊಂದಿಗೆ ಆಟವಾಡಲು ತೆರಳಿದಾಗ ಅಪಘಾತದಲ್ಲಿ ಎಡಗಾಲಿನ ಪಾದ ಛಿದ್ರವಾಗಿತ್ತು. ಕೊನೆಗೆ ಮಂಗಳೂರಿಗೆ ತೆರಳಿದಾಗ ವೈದ್ಯರ ಸೂಚನೆಯಂತೆ ಪಾದವನ್ನೇ ತೆಗೆಯಲಾಗಿದೆ. ಹೀಗಾಗಿ ಆತ ಹಾಸಿಗೆ ಹಿಡಿದಿದ್ದಾನೆ. ಎದ್ದು ಕೂರಲು ಕೂಡ ಸಾಧ್ಯವಾಗುತ್ತಿಲ್ಲ. ಶಾಲೆಗೆ ಹೋಗಲಾಗದೇ ಕುಗ್ಗಿರುವ ಈತ, ಯಾರೊಂದಿಗೂ ಹೆಚ್ಚು ಮಾತನಾಡುತ್ತಿಲ್ಲ. ಮಗನ ಸ್ಥಿತಿ ತುಂಬಾ ಕಷ್ಟವಾಗಿದೆ ಎನ್ನುತ್ತಾರೆ ಬಾಲಕನ ತಂದೆ ಸಿವರಿನ್ ಟೆಲಿಸ್.

ಈ ನಡುವೆ ಮಗನ ಆರೈಕೆ ಮಾಡಲು ತಾಯಿ ಒದ್ದಾಡುತ್ತಿದ್ದಾರೆ. ಅತ್ತ ಬಾಲಕನ ತಂದೆಗೆ ಕೆಲಸವೂ ಇಲ್ಲ. ಹಾಗಾಗಿ ತಾನೇ ಕೆಲಸ ಮಾಡಿ ಮನೆ ನಡೆಸಬೇಕಿದೆ. ಮಗನ ಸ್ಥಿತಿ ಹೀಗಾಗಿದ್ದು, ಜೀವನ ಸಂಕಷ್ಟಕ್ಕೀಡಾಗಿದೆ ಎನ್ನುವುದು ತಾಯಿಯ ಅಳಲು. ಬಹುಮುಖ ಪ್ರತಿಭೆಗೆ ಆತ್ಮಸ್ಥೈರ್ಯದ ಜತೆಗೆ ಬಡತನದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವಿನ ಅವಶ್ಯಕತೆ ಇದೆ. ಈಗಾಗಲೇ ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿದ್ದು, ಇನ್ನು ಕೃತಕ ಕಾಲು ಮತ್ತು ಮಗನ ಮುಂದಿನ ಶಿಕ್ಷಣಕ್ಕೆ ಸಹಾಯ ಬೇಕಿದೆ. ನೆರವು ನೀಡಲು ಇಚ್ಚಿಸುವವರು ಕಾರವಾರ ತಾಲೂಕಿನ ಹಳಗಾದ ಕೆನರಾ ಬ್ಯಾಂಕ್ ಶಾಖೆಯ ತಾಯಿ ಪ್ರೀತಿ ಸಿವರಿನ್ ಟೆಲಿಸ್ ಹೆಸರಿನಲ್ಲಿರುವ ಖಾತೆ ಸಂಖ್ಯೆ 0674101012313, ಐಎಫ್ಎಸ್ಸಿ ಸಂ CNRB0000674 ಹಣ ಸಂದಾಯ ಮಾಡಬಹುದು. ಅವರನ್ನು ಮೊ. ಸಂ 9481914971 ಗೆ ಸಂಪರ್ಕಿಸಬಹುದು.

Intro:ಬಾಲಕನ ಬಾಳು ಕತ್ತಲಾಗಿಸಿದ ಆ ಘಟನೆ... ಬೇಕಿದೆ ನೆರವಿನ ಹಸ್ತ
ಕಾರವಾರ: ಆತ ಆಟ, ಪಾಠದಲ್ಲಿ ಸದಾ ಮುಂದಿರುವ ಬಾಲಕ. ಜತೆಗೆ ನೃತ್ಯ,ಸಂಗೀತವೂ ಆತನಿಗೆ ಉಸಿರು. ಆದರೆ ಎರಡು ತಿಂಗಳ ಹಿಂದೆ ನಡೆದ ಘಟನೆಯೊಂದು ಆತನ ಜೀವನವನ್ನೆ ಕತ್ತಲಾಗಿಸಿದ್ದು, ಬಡ ತಂದೆತಾಯಿಗಳಿಗೆ ಬರಸಿಡಿಲು ಬಡಿದಂತಾಗಿದೆ.
ಹೌದು, ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಹಳಾಗದ ಬಾಲಕ ಬ್ರಿಯಾನ್ ಟೆಲಿಸ್ ಬಹುಮುಖ ಪ್ರತಿಭೆ. ಓದಿನಲ್ಲಿ ಮತ್ತು ಇತರ ಚಟುವಟಿಕೆಯಲ್ಲಿ ಸದಾ ಮುಂದಿರುವ ಈತ ಒಂಬತ್ತನೇ ತರಗತಿಯಲ್ಲಿ ಶೇ. ೮೦ ರಷ್ಟು ಅಂಕಗಳಿಸಿದ್ದ. ಆದರೆ ಅಂದೊಂದು ದಿನ ಸ್ನೇಹಿತರೊಂದಿಗೆ ಆಟವಾಡಲು ತೆರಳಿದಾಗ ಅಪಘಾತದಲ್ಲಿ ಕಾರು ಹರಿದು ಎಡಗಾಲಿನ ಪಾದ ಛಿದ್ರವಾಗಿತ್ತು. ಕೊನೆಗೆ ಮಂಗಳೂರಿಗೆ ತೆರಳಿದಾಗ ವೈದ್ಯರ ಸೂಚನೆಯಂತೆ ಪಾದವನ್ನೆ ತೆಗೆಯಲಾಗಿದೆ.
ಇದರಿಂದ ಎರಡು ತಿಂಗಳಿಂದ ಮಗ ಹಾಸಿಗೆ ಹಿಡಿದಿದ್ದಾನೆ. ಎದ್ದು ಕೂರಲು ಕೂಡ ಸಾಧ್ಯವಾಗುತ್ತಿಲ್ಲ. ಶಾಲೆಗೆ ಒಂದು ದಿನವೂ ತೆರಳಿಲ್ಲ. ಇದೆಲ್ಲವನ್ನು ನೆನೆದು ಸದಾ ಕಣ್ಣೀರು ಹಾಕುತ್ತಿದ್ದಾನೆ. ಮಾನಸಿಕವಾಗಿ ಸಾಕಷ್ಟು ಕುಗ್ಗಿರುವ ಈತ ಯಾರೊಂದಿಗೂ ಹೆಚ್ಚು ಮಾತನಾಡುತ್ತಿಲ್ಲ. ಮಗನ ಸ್ಥಿತಿ ತುಂಬಾ ಕಷ್ಟವಾಗಿದೆ ಎನ್ನುತ್ತಾರೆ ಬಾಲಕನ ತಂದೆ ಸಿವರಿನ್ ಟೆಲಿಸ್.
ಇನ್ನು ಮನೆಯಲ್ಲಿ ಶೌಚಾಲಯವಿಲ್ಲ. ಮಗನಿಗೆ ಓಡಾಡಲು ಸಾಧ್ಯವಿಲ್ಲದ ಕಾರಣ ಅಜ್ಜಿ ಮನೆಯಲ್ಲಿ ಇಡಲಾಗಿದೆ. ಪತಿಗೆ ಮೂರ್ಚೆಬರುವುದರಿಂದ ಕೆಲಸದಿಂದ ತೆಗೆದುಹಾಕಲಾಗಿದೆ. ಇದೀಗ ನಾನೊಬ್ಬಳೆ ದುಡಿಯುತ್ತಿದ್ದೇನೆ. ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಸಂಕಷ್ಟದಲ್ಲಿದ್ದೇವೆ. ಅಲ್ಲದೆ ಓದಿನಲ್ಲಿ ಚುರುಕಾಗಿದ್ದ ಮಗನಿಗೆ ಈ ಸ್ಥಿತಿ ಬಂದಿದೆ. ದಯಮಾಡಿ ಮಗನ ಶಿಕ್ಷಣಕ್ಕೆ ಮತ್ತು ನಮ್ಮ ಸಾಲ ತೀರಿಸಲು ಧನ ಸಹಾಯದ ಅವಶ್ಯಕತೆ ಇದ್ದು, ಸರ್ಕಾರ ಸಹಾಯ ಮಾಡಬೇಕು.‌ ಮಗನ ಶಿಕ್ಷಣಕ್ಕೆ ನೆರವು ನೀಡಬೇಕು ಎಂದು ತಾಯಿ ಪ್ರೀತಿ ಮನವಿ ಮಾಡಿದ್ದಾರೆ.
ಮನೆಗೆ ಬಂದು ಪಾಠ:
೧೦ನೇ ತರಗತಿಗೆ ತೆರಳಬೇಕಿದ್ದ ಬ್ರಿಯಾನ್ ಘಟನೆಯಿಂದಾಗಿ ಹಾಸಿಗೆಯಲ್ಲಿಯೇ ದಿನ ಕಳೆಯುತ್ತಿದ್ದಾನೆ. ಆದರೆ ಉಳಗಾದ ಮಹಾಸತಿ ಪ್ರೌಢಶಾಲೆಗೆ ದಾಖಲು ಮಾಡಲಾಗಿದೆ. ಶಾಲೆಗೆ ಘಟನೆ ಬಗ್ಗೆ ತಿಳಿಸಲಾಗಿದೆ. ಸದ್ಯ ಪಕ್ಕದ ಮನೆಯವರೇ ಆದ ಉಳಗಾದ ಶಿವಾಜಿ ಕಾನ್ವೆಂಟ್ ಶಾಲೆಯ ಶಿಕ್ಷಕ ರಾಮದಾಸ್ ನಾಯ್ಕ ಬಿಡುವಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯವನ್ನು ಮನೆಗೆ ಬಂದು ಪಾಠ ಮಾಡುತ್ತಿದ್ದಾರೆ. ಆದರೆ ಉಳಿದ ವಿಷಯ ಹಾಗೆ ಇದ್ದು ಏನು ಮಾಡುವುದು ತಿಳಿಯುತ್ತಿಲ್ಲ ಎನ್ನುತ್ತಾರೆ ಬಾಲಕನ ತಾಯಿ ಪ್ರೀತಿ.
ಆರ್ಥಿಕ ನೆರವು ಬೇಕಿದೆ:
ಬಹುಮುಖ ಪ್ರತಿಭೆಗೆ ಆತ್ಮಸ್ಥೈರ್ಯದ ಜತೆಗೆ ಬಡತನದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವಿನ ಅವಶ್ಯಕತೆ ಇದೆ. ಈಗಾಗಲೇ ಚಿಕಿತ್ಸೆಗಾಗಿ ಸಾಕಷ್ಟು ಕರ್ಚು ಮಾಡಿದ್ದು, ಇನ್ನು ಕೃತಕ ಕಾಲು ಮತ್ತು ಮಗನ ಮುಂದಿನ ಶಿಕ್ಷಣಕ್ಕೆ ಸಹಾಯ ಬೇಕಿದೆ. ನೆರವು ನೀಡಲು ಇಚ್ಚಿಸುವವರು ಕಾರವಾರ ತಾಲ್ಲೂಕಿನ ಹಳಗಾದ ಕೆನರಾ ಬ್ಯಾಂಕ್ ಶಾಖೆಯ ತಾಯಿ ಪ್ರೀತಿ ಸಿವರಿನ್ ಟೆಲಿಸ್ ಹೆಸರಿನಲ್ಲಿರುವ ಖಾತೆ ಸಂಖ್ಯೆ 0674101012313, ಐಎಫ್ಎಸ್ಸಿ ಸಂ CNRB0000674 ಹಣ ಸಂದಾಯ ಮಾಡಬಹುದು. ಅವರನ್ನು ಮೊ. ಸಂ 9481914971 ಸಂಪರ್ಕಿಸಬಹುದು.
ಒಟ್ಟಿನಲ್ಲಿ ಆಡಿಬೆಳೆಯಬೇಕಿದ್ದ ಬಹುಮುಖ ಪ್ರತಿಭೆ ತನ್ನದಲ್ಲದ ತಪ್ಪಿಗೆ ಹಾಸಿಗೆ ಹಿಡಿದಿದ್ದು, ಆತನ ಜೀವನವೇ ಕತ್ತಲಾದಂತಾಗಿದೆ. ಸರ್ಕಾರ ಈತನ ಶಿಕ್ಷಣಕ್ಕೆ ಹಾಗೂ ಬಡತನದಲ್ಲಿರುವ ಆತನ ಕುಟುಂಬ ನೆರವಿನ ಹಸ್ತ ನೀಡಬೇಕಿದೆ.
ಬೈಟ್ ೧ ಸಿವರಿನ್ ಟೆಲಿಸ್, ಬಾಲಕನ ತಂದೆ
ಬೈಟ್ ೨ ಪ್ರೀತಿ ಬಾಲಕನ ತಾಯಿ
ಬೈಟ್ ೩ ರಾಘು ನಾಯ್ಕ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ

Body:ಕ

Conclusion:ಕ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.