ETV Bharat / state

ಭಟ್ಕಳ ಕುಂಟವಾಣಿಯಲ್ಲಿ ಚಿರತೆ ಕಳೇಬರ ಪತ್ತೆ: ಮದ್ದು ಹಾಕಿ ಕೊಂದಿರುವ ಶಂಕೆ

ಭಟ್ಕಳ ತಾಲೂಕಿನ ಮಾರುಕೇರಿ ಪಂಚಾಯತಿ ವ್ಯಾಪ್ತಿಯ ಸರ್ವೇ ನಂ. 18 ರ ಅರಣ್ಯ ಜಾಗದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಚಿರತೆ ಮರಿಯ ಶವ ಪತ್ತೆಯಾಗಿದೆ.

leopard cub death
ಚಿರತೆ ಮರಿ ಸಾವು
author img

By

Published : Dec 11, 2019, 6:36 PM IST

ಭಟ್ಕಳ: ತಾಲೂಕಿನ ಮಾರುಕೇರಿ ಪಂಚಾಯತಿ ವ್ಯಾಪ್ತಿಯ ಸರ್ವೇ ನಂ. 18 ರ ಅರಣ್ಯ ಜಾಗದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಚಿರತೆ ಮರಿಯ ಶವ ಪತ್ತೆಯಾಗಿದೆ.

ಸಾವನ್ನಪ್ಪಿರುವ ಚಿರತೆ ಮರಿ

ಸಾವನ್ನಪ್ಪಿದ್ದ ಚಿರತೆ ಮರಿ ಅಂದಾಜು 1.5 ಅಥವಾ 2 ವರ್ಷದಾಗಿದೆ. ಮಂಗಳವಾರ ತಡರಾತ್ರಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸತ್ತ ಪ್ರಾಣಿಯ ವಾಸನೆ ಸ್ಥಳೀಯರ ಗಮನಕ್ಕೆ ಬಂದಿದ್ದು, ರಾತ್ರಿಯೇ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಚಿರತೆ ಮರಿಯ ಮರಣೋತ್ತರ ಪರೀಕ್ಷೆಯ ಹಿನ್ನೆಲೆ ರಾತ್ರಿಯಿಡೀ ಅರಣ್ಯ ಸಿಬ್ಬಂದಿ ಕಾದು ಬುಧವಾರ ಬೆಳಗ್ಗೆ ಪಶು ಇಲಾಖೆ ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಈ ವೇಳೆ ಸತ್ತ ಚಿರತೆ ಮರಿಯು ಸಂಪೂರ್ಣ ಕೊಳೆತಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸದೇ ಸ್ಥಳದಲ್ಲಿಯೇ ಚಿರತೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುಟ್ಟಿದ್ದಾರೆ.

ಈ ಬಗ್ಗೆ ವಲಯ ಅರಣ್ಯ ಇಲಾಖೆ ಅಧಿಕಾರಿ ಸವಿತಾ ದೇವಾಡಿಗ ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ತನಿಖೆಯನ್ನು ಎಸಿಎಫ್ ಸುದರ್ಶನ್​ ನಡೆಸುತ್ತಿದ್ದು, ಕಾಡು ಪ್ರಾಣಿಯಾದ ಹಿನ್ನೆಲೆ ವೈಲ್ಡ್ ಲೈಫ್​ ಕಾಯ್ದೆಯಡಿಯಲ್ಲಿ ತನಿಖೆ ನಡೆಸಲಿದ್ದಾರೆ. ಸದ್ಯಕ್ಕೆ ಚಿರತೆ ಮರಿಯ ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲದ ಕಾರಣ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.

ಸಹಜವೋ, ಅನುಮಾನಾಸ್ಪದವೋ.? ಸಾಕಷ್ಟು ತಿಂಗಳಿನಿಂದ ಮಾರುಕೇರಿ, ಕೋಣಾರ, ಹಾಡುವಳ್ಳಿ ವ್ಯಾಪ್ತಿಯಲ್ಲಿ ಚಿರತೆಯ ಓಡಾಟಕ್ಕೆ ಸ್ಥಳೀಯರು ಕಂಗಾಲಾಗಿದ್ದರು. ಕೆಲವು ಕಡೆ ದನಕರುಗಳ ಮೇಲೆ ಚಿರತೆ ದಾಳಿ ನಡೆಸಿ ಸಾಯಿಸಿರುವ ಘಟನೆಯಿಂದ ಜನರು ಬೇಸತ್ತಿದ್ದರು. ಆದರೆ ಸತ್ತ ಚಿರತೆ ಮರಿ ಮೇಲೆ ಯಾವ ಗಾಯವೂ ಕಂಡುಬಂದಿಲ್ಲ. ಹಾಗಾಗಿ ಇದು ಸಹಜವೋ ಅಸಹಜವೋ ಇನ್ನೂ ಗೊತ್ತಾಗಿಲ್ಲ. ಚಿರತೆಗಳಿಂದ ಬೇಸತ್ತ ರೈತರು ಯಾವುದಾದರೂ ಔಷಧ ಹಾಕಿ ಅದನ್ನು ಕೊಂದಿರಬಹುದಾ ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ.

Intro:ಭಟ್ಕಳ: ತಾಲೂಕಿನ ಮಾರುಕೇರಿ ಪಂಚಾಯತ ವ್ಯಾಪ್ತಿಯ ಸರ್ವೇ ನಂ. 18 ರ ವ್ಯಾಪ್ತಿಯ ಅರಣ್ಯ ಜಾಗದಲ್ಲಿ 3-4 ದಿನ ಹಿಂದೆ ಚಿರತೆ ಮರಿಯೊಂದು ಸತ್ತಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಮಂಗಳವಾರದಂದು ತಡರಾತ್ರಿ ಕೊಳೆತ ಸ್ಥಿತಿಯಲ್ಲಿ ಶವವು ಸ್ಥಳಿಯರಿಗೆ ಪತ್ತೆಯಾಗಿ ಇನ್ನು ತನಕ ಚಿರತೆ ಮರಿ ಸಾವಿಗೆ ಇನ್ನು ನಿಖರ ಕಾರಣ ತಿಳಿದು ಬಂದಿಲ್ಲವಾಗಿದೆ.
Body:ಸಾವನ್ನಪ್ಪಿದ್ದ ಚಿರತೆ ಮರಿ ಅಂದಾಜು 1.5 ಅಥವಾ 2 ವರ್ಷದಾಗಿದೆ. ಆಹಾರ ಹುಡುಕುತ್ತಾ ಬಂದ ಚಿರತೆ ಮರಿ ಸಾವನ್ನಪ್ಪಿರಬಹುದಾಗಿದ್ದು, ಮಂಗಳವಾರದಂದು ತಡರಾತ್ರಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸತ್ತ ಪ್ರಾಣಿಯ ವಾಸನೆಯ ಹಿನ್ನೆಲೆ ಸ್ಥಳಿಯರ ಗಮನಕ್ಕೆ ಬಂದಿದ್ದು, ರಾತ್ರಿಯೇ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ನಂತರ ಚಿರತೆ ಮರಿಯ ಮರಣೋತ್ತರ ಪರೀಕ್ಷೆಯ ಹಿನ್ನೆಲೆ ರಾತ್ರಿಯಿಡಿ ಚಿರತೆ ಮರಿಯನ್ನು ಅರಣ್ಯ ಸಿಬ್ಬಂದಿಗಳು ಕಾದು ಬುಧವಾರದಂದು ಬೆಳಿಗ್ಗೆ ಪಶು ಇಲಾಖೆ ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ.

ಈ ವೇಳೆ ಸತ್ತ ಚಿರತೆ ಮರಿಯೂ ಸಂಪುರ್ಣ ಕೊಳೆತು ಹುಳುಗಳಿಂದಾವೃತವಾಗಿದ್ದ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ಸೂಕ್ತವಲ್ಲದ ಕಾರಣ ಸ್ಥಳದಲ್ಲಿಯೇ ಚಿರತೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುಡಲಾಯಿತು. ಹಾಗೂ ಈ ಬಗ್ಗೆ ವಲಯ ಅರಣ್ಯ ಇಲಾಖೆ ಅಧಿಕಾರಿ ಸವಿತಾ ದೇವಾಡಿಗ ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ತನಿಖೆಯನ್ನು ಎಸಿಎಫ್ ಸುದರ್ಶನ ಅವರು ನಡೆಸುತ್ತಿದ್ದು, ಕಾಡು ಪ್ರಾಣಿಯಾದ ಹಿನ್ನೆಲೆ ವೈಲ್ಡ್ ಲೈಪ್ ಕಾಯ್ದೆಯಡಿಯಲ್ಲಿ ತನಿಖೆ ನಡೆಸಲಿದ್ದಾರೆ.
ಸದ್ಯಕ್ಕೆ ಮರಣ ಹೊಂದಿದ ಚಿರತೆ ಮರಿಯ ಮರಣೋತ್ತರ ಪರೀಕ್ಷೆ ಆಗದ ಹಿನ್ನೆಲೆ ಚಿರತೆಯ ಸಾವಿಗೆ ನಿಖರ ಕಾರಣವೂ ಪತ್ತೆಯಾಗಬೇಕಿದೆ.

ಸಹಜವೋ, ಅನುಮಾನಾಸ್ಪದವೋ.?: ಕಳೆದ ಸಾಕಷ್ಟು ತಿಂಗಳಿನಿಂದ ಮಾರುಕೇರಿ, ಕೋಣಾರ, ಹಾಡುವಳ್ಳಿ ವ್ಯಾಪ್ತಿಯಲ್ಲಿ ಚಿರತೆಯ ಓಡಾಟಕ್ಕೆ ಸ್ಥಳಿಯರು ಕಂಗಾಲಾಗಿದ್ದರು. ಕೆಲವು ಕಡೆ ದನಕರುಗಳ ಮೇಲೆ ದಾಳಿ ನಡೆಸಿ ಸಾಯಿಸಿರುವುದು ಘಟನೆಯಿಂದ ಜನರು ಬೇಸತ್ತಿದ್ದಾರೆ. ಆದರೆ ಸತ್ತ ಚಿರತೆ ಮರಿಯ ಘಟನೆಯಲ್ಲಿ ಯಾವುದೇ ಗಾಯವಾಗಲಿ ಕಂಡು ಬಂದಿಲ್ಲವಾಗಿದ್ದು ಸತ್ತ ಚಿರತೆ ಮರಿಯ ಸಾವು ಸಹಜವೋ ಅಥವಾ ಚಿರತೆಯ ದಾಳಿಯಿಂದ ಬೇಸತ್ತ ಅಲ್ಲಿನ ರೈತಾಪಿ ಜನರು ಯಾವುದಾದರು ಚಿರತೆ ಸಾವನ್ನಪ್ಪುವಂತಹ ಮದ್ದು ಹಾಕಿರಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದಾಗಿ ಚಿರತೆ ಸಾವು ಸಹಜವೋ ಅಥವಾ ಅನುಮಾನಾಸ್ಪದವೋ ಎಂಬ ಪ್ರಶ್ನೆ ಉದ್ಭವವಾಗಿದೆConclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.