ಕಾರವಾರ: ಅಪರಿಚಿತ ವ್ಯಕ್ತಿಯ ಶವವೊಂದು ಕುಮಟಾ ತಾಲೂಕಿನ ಗೋಕರ್ಣದ ಜಟಾಯು ತೀರ್ಥದ ಬಳಿ ನಗ್ನಾವಸ್ಥೆಯಲ್ಲಿ ಪತ್ತೆಯಾಗಿದೆ.
ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು, ಮುಖ ಸಂಪೂರ್ಣ ಕೊಳೆತು ಗುರುತು ಪತ್ತೆಯಾಗದ ಸ್ಥಿತಿಯಲ್ಲಿದೆ. ಇಲ್ಲಿನ ಜಟಾಯು ತೀರ್ಥದ ಬಳಿ ಗಾಳ ಹಾಕಲು ಕುಳಿತಿದ್ದ ವ್ಯಕ್ತಿಯೊಬ್ಬ ಸಮುದ್ರದ ಅಲೆಯಲ್ಲಿ ತೇಲಿ ಬರುತ್ತಿದ್ದ ಮೃತದೇಹ ಕಂಡು ತಕ್ಷಣ ಗೋಕರ್ಣ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದ.
ಅಷ್ಟರಲ್ಲಾಗಲೇ ಶವ ದಡಕ್ಕೆ ಬಂದು ಬಿದ್ದಿತ್ತು. ನಂತರ ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಗುರುತು ಪತ್ತೆಯಾದಲ್ಲಿ ಗೋಕರ್ಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಕೋರಿದ್ದಾರೆ.