ETV Bharat / state

ಮುಂಡಗೋಡಿಯ ಚಿಗಳ್ಳಿ ಚೆಕ್​ ಡ್ಯಾಂ ಒಡೆದು ಅಪಾರ ಹಾನಿ - ಕೃಷಿ ಭೂಮಿಗೆ ಹಾನಿ

ಅರೆ ಮಲೆನಾಡು ಮುಂಡಗೋಡಿ ಚಿಗಳ್ಳಿಯಲ್ಲಿರುವ ಚೆಕ್ ಡ್ಯಾಂ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಅಲ್ಲದೇ 500 ಎಕರೆಗೂ ಅಧಿಕ ಕೃಷಿ ಭೂಮಿಗೆ ನೀರು ನುಗ್ಗಿದ್ದು, ಒಟ್ಟು 5 ಸಾವಿರ ಎಕರೆ ಕೃಷಿ ಭೂಮಿಗೆ ಹಾನಿಯಾಗುವ ಆತಂಕ ಎದುರಾಗಿದೆ.

ಚಿಗಳ್ಳಿಡ್ಯಾಂ ಒಡೆದು ಕೃಷಿ ಕ್ಷೇತ್ರ ನೀರು ಪಾಲು
author img

By

Published : Aug 12, 2019, 8:00 PM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆಯಾಗುತ್ತಿರುವ ಪರಿಣಾಮ ಅರೆ ಮಲೆನಾಡು ಮುಂಡಗೋಡಿ ಚಿಗಳ್ಳಿಯಲ್ಲಿರುವ ಚೆಕ್ ಡ್ಯಾಂ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಕೃಷಿ ಭೂಮಿಗೆ ಹಾನಿಯಾಗಿದೆ.

ಹಳ್ಳ-ಕೊಳ್ಳದ ನೀರು ಶೇಖರಿಸುವ ಸಲುವಾಗಿ ಚೆಕ್ ಡ್ಯಾಂ ನಿರ್ಮಾಣ ಆಗಿದ್ದು, 20 ಮೀಟರ್ ಎತ್ತರ, 830 ಮೀಟರ್ ಅಗಲ, 165 ಹೆಕ್ಟೇರ್ ವಿಸ್ತಾರ ಹೊಂದಿದೆ. 25 ಸ್ಕ್ವೇರ್​​ ಮೀಟರ್ ಕ್ಯಾಚ್​​ಮೆಂಟ್ ಏರಿಯಾ ಹೊಂದಿದ್ದು, 6800 ಕ್ಯೂಸೆಕ್​​ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದು ಒಡೆದ ಪರಿಣಾಮವಾಗಿ ಈಗಾಗಲೇ 500 ಎಕರೆಗೂ ಅಧಿಕ ಕೃಷಿ ಪ್ರದೇಶಕ್ಕೆ ನೀರು ನುಗ್ಗಿದ್ದು, ಒಟ್ಟು 5 ಸಾವಿರ ಎಕರೆ ಕೃಷಿ ಭೂಮಿಗೆ ಹಾನಿಯಾಗುವ ಆತಂಕ ಎದುರಾಗಿದೆ.

ಮುಂಡಗೋಡಿಯ ಚಿಗಳ್ಳಿ ಚೆಕ್​ ಡ್ಯಾಂ ಒಡೆದು ಅಪಾರ ಹಾನಿ

ಮುಂಡಗೋಡಿನ ಮುಗಸಾಲಿ, ಚುಗಳದಳಿ, ಗಣೇಶಪುರ, ಕಾತೂರ, ಹನುಮಾಪುರ, ನಾಗನೂರು ಸೇರಿದಂತೆ 6ಕ್ಕೂ ಅಧಿಕ ಗ್ರಾಮಗಳು ಡ್ಯಾಂ ನೀರನ್ನು ನಂಬಿಕೊಂಡು ಬದುಕುತ್ತಿದ್ದು, 5 ಸಾವಿರ ಎಕರೆ ಕೃಷಿ ಭೂಮಿಗೆ ಈ ನೀರೇ ಆಧಾರ. ಅಲ್ಲದೇ 10 ವರ್ಷಗಳ ನಂತರ ಡ್ಯಾಂ ಭರ್ತಿಯಾಗಿದ್ದು, ಈ ಬಾರಿಯೇ ಡ್ಯಾಂ ಒಡೆದು ನೀರು ಖಾಲಿಯಾಗಿದೆ ಎಂದು ಸ್ಥಳೀಯರು ವಿವರಿಸಿದ್ದಾರೆ.

ಮುಂಡಗೋಡ ಭಾಗಕ್ಕೆ ಚಿಗಳ್ಳಿ ಡ್ಯಾಂ ಜೀವನಾಧಾರವಾಗಿತ್ತು. ಇದು ಒಡೆದ ಪರಿಣಾಮ ರೈತರಿಗೆ ಸಮಸ್ಯೆಯಾಗಿದೆ. ನೀರು ಇಳಿದ ನಂತರ ಹಾನಿಯ ಕುರಿತು ಸಮಗ್ರ ಮಾಹಿತಿ ಪಡೆದು ಪರಿಹಾರ ನೀಡುವ ಕಾರ್ಯ ಮಾಡಲಾಗುತ್ತದೆ ಎಂದು ಸ್ಥಳ ಪರಿಶೀಲನೆ ನಡೆಸಿದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.

Intro:
ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆಯಾಗುತ್ತಿರುವ ಪರಿಣಾಮ ಅರೆ ಮಲೆನಾಡು ಮುಂಡಗೋಡಿ ಚಿಗಳ್ಳಿಯಲ್ಲಿರುವ ಚೆಕ್ ಡ್ಯಾಮ್ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿಗೆ ಹಾನಿಯಾಗಿದೆ.

ಹಳ್ಳ ಕೊಳ್ಳದಿಂದ ತುಂಬಿದ ನೀರು ಶೇಕರಿಸುವ ಚೆಕ್ ಡ್ಯಾಮ್ ನಿರ್ಮಾಣ ಆಗಿದ್ದು 20 ಮೀಟರ್ ಎತ್ತರ, 830 ಮೀಟರ್ ಅಗಲ165 ಹೆಕ್ಟೇರ್ ಜಾಗದಲ್ಲಿ ವಿಸ್ತಾರ ಹೊಂದಿದೆ. 25 ಸ್ವೇರ್ ಮೀಟರ್ ಕ್ಯಾಚ್ ಮೆಂಟ್ ಏರಿಯಾ ಹೊಂದಿದ್ದು 6800ಕ್ಯೂಸೆಕ್ಸ್ ನೀರನ್ನು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದು ಒಡೆದ ಪರಿಣಾಮವಾಗಿ ಈಗಾಗಲೇ ೫೦೦ ಎಕರೆಗೂ ಅಧಿಕ ಕೃಷಿ ಪ್ರದೇಶಕ್ಕೆ ನೀರು ನುಗ್ಗಿದ್ದು, ಒಟ್ಟೂ ೫ ಸಾವಿರ ಎಕರೆ ಕೃಷಿ ಭೂಮಿಗೆ ಹಾನಿಯಾಗುವ ಆತಂಕ ವ್ಯಕ್ತವಾಗಿದೆ.

೧೯೭೮ ರಂದು ನಿರ್ಮಾಣ ಮಾಡಲಾಗಿರುವ ಚೆಕ್ ಡ್ಯಾಂ ನೀರನ್ನು ಕೃಷಿ ಚಟುವಟಿಕೆಗಳಿಗಾಗಿ ಮಾತ್ರ ಉಪಯೋಗಿಸುತಿದ್ದು, ೨೦೦೭ ಅ.೧೪ ರಂದು ಒಡೆದಿತ್ತು. ಈಗಲೂ ಅದೇ ಸ್ಥಳದಲ್ಲಿ ಡ್ಯಾಂ ಒಡೆದಿದ್ದು,
ಮಣ್ಣಿನ ದಿಬ್ಬದಿಂದ ಒಡ್ಡನ್ನು ನಿರ್ಮಿಸಿ ಕಟ್ಟಿದ್ದಾಗಿದೆ.
ಈ ಬಾರಿ ಮಳೆ ಹೆಚ್ಚಾದ್ದರಿಂದ ಒತ್ತಡ ಹೆಚ್ಚಾಗಿ ಒಂದು ಭಾಗದಲ್ಲಿ ಬಿರುಕುಬಿಟ್ಟು ಒಡೆದಿದೆ.

Body:ಮುಂಡಗೋಡಿನ ಮುಗಸಾಲಿ, ಚುಗಳದಳಿ,ಗಣೇಶಪುರ, ಕಾತೂರ, ಹನುಮಾಪುರ, ನಾಗನೂರು ಸೇರಿದಂತೆ ೬ ಕ್ಕೂ ಅಧಿಕ ಗ್ರಾಮಗಳು ಡ್ಯಾಂ ನೀರನ್ನು ನಂಬಿಕೊಂಡು ಬದುಕುತ್ತಿದ್ದು, ೫ ಸಾವಿರ ಎಕರೆ ಕೃಷಿ ಪ್ರದೇಶಗಳಿಗೆ ಜೀವ ನದಿಯಾಗಿದೆ. ಅಲ್ಲದೇ ೧೦ ವರ್ಷಗಳ ನಂತರ ಡ್ಯಾಂ ಭರ್ತಿಯಾಗಿದ್ದು, ಈ ಬಾರಿಯೇ ಡ್ಯಾಂ ಒಡೆದು ನೀರು ಖಾಲಿಯಾಗಿದೆ ಎಂದು ಸ್ಥಳೀಯರು ವಿವರಿಸಿದ್ದಾರೆ.
ಬೈಟ್ (೧) : ರಾಮಕೃಷ್ಣ ಎಮ್., ಸ್ಥಳೀಕ.

ಮುಂಡಗೋಡ ಭಾಗಕ್ಕೆ ಚಿಗಳ್ಳಿ ಡ್ಯಾಂ ಜೀವ ನದಿಯಾಗಿದ್ದು, ಇದು ಒಡೆದ ಪರಿಣಾಮ ರೈತರಿಗೆ ಸಮಸ್ಯೆಯಾಗಿದೆ. ನೀರು ಇಳಿದ ನಂತರ ಹಾನಿಯ ಕುರಿತು ಸಮಗ್ರ ಮಾಹಿತಿ ಪಡೆದು ಪರಿಹಾರ ನೀಡುವ ಕಾರ್ಯ ಮಾಡಲಾಗುತ್ತದೆ ಎಂದು ಸ್ಥಳ ಪರಿಶೀಲನೆ ನಡೆಸಿದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.

ಬೈಟ್ (೨) ಶಿವರಾಮ ಹೆಬ್ಬಾರ್ ,ಮಾಜಿ ಶಾಸಕ.

ಅಡಿಕೆ ತೋಟ, ಮುಸುಕಿನ ಜೋಳ, ಶುಂಠಿ, ಭತ್ತ ಸೇರಿದಂತೆ ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿದೆ. ಸಾಲ ಮಾಡಿ ಮಾಡಿದ ವರ್ಷದ ಬೆಳೆ ಕೈಗೆ ಸಿಗದಂತಾಗಿದೆ. ರೈತರು ಸಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಹಾರ ನೀಡುವ ಕಾರ್ಯ ಆದಷ್ಟು ಶೀಘ್ರದಲ್ಲಿ ಮಾಡಬೇಕು ಎಂದು ರೈತ ಶಿವಲಿಂಗಯ್ಯ ಆಗ್ರಹಿಸಿದ್ದಾರೆ.

ಬೈಟ್ (೩) : ಶಿವಲಿಂಗಯ್ಯ, ರೈತ

ಒಟ್ಟಾರೆಯಾಗಿ ಚಿಗಳ್ಳಿ ಡ್ಯಾಂ ಒಡೆದ ಪರಿಣಾಮ ರೈತರ ದಿನದ ಕೂಳು ಕಸಿದಂತಾಗಿದ್ದು, ಬೇಸಿಗೆಯಲ್ಲಿ ನೀರಿಗೆ ಪರದಾಡಬೇಕು ಎಂಬ ಚಿಂತೆ ಈಗಿಂದಲೇ ಕಾಡುತ್ತಿದೆ. ಮಣ್ಣಿನ ಒಡ್ಡಿನ ಬದಲಿಗೆ ಶಾಶ್ವತ ಕಾಂಕ್ರೀಟ್ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕಾದ ಅಗತ್ಯವಿದ್ದು, ತಾತ್ಕಾಲಿಕವಾಗಿ ಇರುವ ನೀರನ್ನು ಉಳಿಸಿಕೊಳ್ಳಲು ಡ್ಯಾಂ ಕೊರತೆಯನ್ನು ಮುಚ್ಚುವ ಅಗತ್ಯವೂ ಕಾಣುತ್ತಿದೆ.

...........
ಸಂದೇಶ ಭಟ್ ಶಿರಸಿ. Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.