ETV Bharat / state

ಇಡಗುಂಜಿಯಲ್ಲಿ ನೆಲೆಸಿದ್ದಾನೆ ಪಂಚಕಜ್ಜಾಯ ಪ್ರಿಯ ಬಾಲ ಗಣಪ... ಇದರ ಮಹಿಮೆ ಏನು ಗೊತ್ತಾ? - Karavara news

ಬಾಲ ವಿನಾಯಕ ಶ್ರೀ ಕ್ಷೇತ್ರ ಇಡಗುಂಜಿಯಲ್ಲಿ ನೆಲೆ ನಿಂತಿದ್ದು, ಜಗತ್ತಿನಲ್ಲಿ ಬೇರೆ ಎಲ್ಲೂ ಇಂತಹ ವಿಶೇಶ ಗಣೇಶ ಮೂರ್ತಿ ನೋಡಲು ಸಿಗವುದಿಲ್ಲ. ಇಂತಹ ಸನ್ನಿಧಿಯಲ್ಲಿ ವೀರಾಜಮಾನನಾಗಿರುವ ಪಂಚಕಜ್ಜಾಯ ಪ್ರಿಯ ಬಾಲ ಗಣಪ ಬೇಡಿ ಬಂದ ಭಕ್ತರ ಸರ್ವ ಸಂಕಷ್ಟ ನಿವಾರಿಸುತ್ತಿದ್ದು, ಕೋಟ್ಯಂತರ ಭಕ್ತರ ಪಾಲಿಗೆ ಆರಾಧ್ಯ ದೈವವಾಗಿದೆ.

Special celebration of Gowri ganesha festival
ಶ್ರೀ ಕ್ಷೇತ್ರ ಇಡಗುಂಜಿಯಲ್ಲಿ ನೆಲೆಸಿರುವ ಕಜ್ಜಾಯಪ್ರಿಯ ಬಾಲ ಗಣಪ
author img

By

Published : Aug 22, 2020, 1:19 PM IST

Updated : Aug 22, 2020, 8:48 PM IST

ಕಾರವಾರ: ಜಗತ್ತಿನೆಲ್ಲೆಡೆ ಏಕದಂತ ಚತುರ್ಭುಖ ಗಣಪನನ್ನ ಪೂಜಿಸುವುದು ಸಾಮಾನ್ಯ. ಆದರೆ ಎರಡು ದಂತ, ಎರಡೇ ಕೈಗಳನ್ನು ಹೊಂದಿ, ಮೂಷಿಕ ವಾಹನವೇ ಇಲ್ಲದ ಬಾಲ ವಿನಾಯಕ ಶ್ರೀ ಕ್ಷೇತ್ರ ಇಡಗುಂಜಿಯಲ್ಲಿ ನೆಲೆ ನಿಂತಿದ್ದು, ಜಗತ್ತಿನಲ್ಲಿ ಬೇರೆ ಎಲ್ಲೂ ನೋಡಲು ಸಿಗವುದಿಲ್ಲ. ಇಂತಹ ಸನ್ನಿಧಿಯಲ್ಲಿ ವೀರಾಜಮಾನನಾಗಿರುವ ಪಂಚಕಜ್ಜಾಯ ಪ್ರಿಯ ಬಾಲ ಗಣಪ ಬೇಡಿ ಬಂದ ಭಕ್ತರ ಸರ್ವ ಸಂಕಷ್ಟ ನಿವಾರಿಸುತ್ತಿದ್ದು, ಕೋಟ್ಯಂತರ ಭಕ್ತರ ಪಾಲಿಗೆ ಆರಾಧ್ಯ ದೈವವಾಗಿದೆ.

ಹೌದು, ಮೊದಲ ಪೂಜಿಪ, ಪಾರ್ವತಿಸುತ ಬಾಲ ಗಣಪನ ಈ ದೇವಾಲಯ ಇರುವುದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿಯಲ್ಲಿ. ಕರಾವಳಿ ಹಾಗೂ ಮಲೆನಾಡಿನ ನಿಸರ್ಗ ಸಿರಿಯ ಮಧ್ಯೆ ನೆಲೆ ನಿಂತಿರುವ ಈ ಬಾಲ ಗಣಪನಿಗೆ ಪುರಾಣ ಇತಿಹಾಸವೂ ಇದೆ. ಜಗತ್ತಿನಾದ್ಯಂತ ಇರುವ ಗಣಪತಿ ಜಾಗೃತ ಸನ್ನಿದಿಗೆ ಹೋಲಿಸಿದಲ್ಲಿ ಇಡಗುಂಜಿ ಬಾಲ ಗಣಪತಿ ದೇವಸ್ಥಾನಕ್ಕೆ ಅಗ್ರಸ್ಥಾನವಿದೆ. ಬಾಲ ಗಣಪತಿಯೇ ಇಲ್ಲಿನ ವಿಶೇಷ. ಶರಾವತಿ ತೀರದಲ್ಲಿ ಇಡಾ ಎಂದರೆ ಆನೆ, ಕುಂಜ ಎಂದರೆ ಸಸ್ಯರಾಶಿಯ ದಟ್ಟಡವಿ. ಅದೇ ಕುಂಜಾವನವಾಗಿ ಇಡಾಕುಂಜ ಎಂಬ ಹೆಸರಿನಿಂದ ಮಾರ್ಪಾಡಾಗಿ ಇದೀಗ ಇಡಗುಂಜಿ ಎಂದೇ ಸುಪ್ರಸಿದ್ಧಿಯಾಗಿದೆ.

ಶ್ರೀ ಕ್ಷೇತ್ರ ಇಡಗುಂಜಿಯಲ್ಲಿ ನೆಲೆಸಿರುವ ಕಜ್ಜಾಯಪ್ರಿಯ ಬಾಲ ಗಣಪ

ಅಮಂಗಲವನ್ನ ನಿವಾರಣೆ ಮಾಡಿ ಮಂಗಲವನ್ನು ಅನುಗ್ರಹಿಸುವ ಶಕ್ತಿ ಇರುವ ಗಣಪತಿ. ಎಲ್ಲರ ಕಷ್ಟಗಳನ್ನ ನಿವಾರಿಸುತ್ತಿದ್ದಾನೆ. ಸಂಕಷ್ಟಿ ಹಾಗೂ ಚತುರ್ಥಿ ದಿನದಂದು ವಿಶೇಷವಾಗಿ ಪೂಜೆ ಸಲ್ಲಿಸಲಾಗುತ್ತದೆ. ಅಂದು ಪಂಚಕಜ್ಜಾಯ ನೈವೇದ್ಯ ಅರ್ಪಣೆ, ಸತ್ಯನಾರಾಯಣ ವ್ರತದ ಕಥೆ, ಸತ್ಯ ಗಣಪತಿ ಕಥೆ, ಅಷ್ಟದ್ರವ್ಯಪೂರ್ವಕ ಗಣಹೋಮ ಮತ್ತು ಪಂಚಕಜ್ಜಾಯದ ಹೇಳಿಕೆ ಮಾಡಿಕೊಳ್ತಾರೆ.

ಪೌರಾಣಿಕ ಹಿನ್ನೆಲೆ:

ತಪೋ ಮುನಿಗಳಾದ ವಾಲಖಿಲ್ಯ ಋಷಿಗಳ ತಪಸ್ಸಿಗಾದ ವಿಘ್ನಗಳ ನಿವಾರಣೆಗಾಗಿ ನಾರದ ಮುನಿಗಳ ಸಲಹೆಯಂತೆ ವಾಲಖಿಲ್ಯ ಋಷಿಗಳು ಶ್ರೀ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿದರು. ಆರಾಧಿಸಿ ತಪಸಿದ್ಧಿ ಪಡೆದರೆಂಬುದು ಪೌರಾಣಿಕ ಹಿನ್ನೆಲೆಯಾಗಿದೆ. ವಾಲಖಿಲ್ಯ ಋಷಿಗಳಿಗೆ ತಪಸ್ಸಿಗೆ ಭಂಗವಾದ ಸಂದರ್ಭದಲ್ಲಿ ನಾರದ ಮುನಿಗಳ ಸಂಪರ್ಕ ಪಡೆದು ಕೈಲಾಸದಲ್ಲಿರುವ ಬಾಲ ಗಣಪನನ್ನು ಇಡಗುಂಜಿಗೆ ತರುವ ಪ್ರಯತ್ನ ನಡೆಯುತ್ತದೆ. ನಾರದ ಮುನಿ ಕೈಲಾಸಕ್ಕೆ ಹೋದ ಶಿವ-ಪಾರ್ವತಿಯರ ಮಗ ಗಣಪತಿ ಆಟವಾಡುತ್ತಿರುತ್ತಾನೆ. ಆದ್ರೆ ಶಿವ-ಪಾರ್ವತಿಯರ ಮನವೊಲಿಸಿ ಬಾಲ ಗಣಪನನ್ನು ಇಡಗುಂಜಿಗೆ ಕಳುಹಿಸುವಂತೆ ಮನವಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಪಾರ್ವತಿ ಒಪ್ಪುವುದಿಲ್ಲ. ಆನೆಗಳ ಬೀಡಾಗಿರುವ ಇಡಕುಂಜಕ್ಕೆ ಕಳುಹಿಸಲು ಒಪ್ಪುವುದಿಲ್ಲ. ಆಗ ನಾರದ ಮುನಿಗಳು ಕೈಲಾಸದಲ್ಲೇ ಒಂದು ರಾತ್ರಿ ತಂಗಿ, ಬಾಲ ಗಣಪ ಏಕಾಂತದಲ್ಲಿರುವ ಸಂದರ್ಭದಲ್ಲಿ ಪಂಚಕಜ್ಜಾಯ ನೀಡುತ್ತಾರೆ. ಪಂಚಕಜ್ಜಾಯದ ಸವಿಯನ್ನುಂಡ ಬಾಲ ಗಣಪ ಇನ್ನಷ್ಟು ಪಂಚಕಜ್ಜಾಯ ಬೇಕು ಎಂದಾಗ ನಾರದ ಮುನಿ, ಎಷ್ಟು ಬೇಕಾದರೂ ಪಂಚಕಜ್ಜಾಯ ಕೊಡುತ್ತೇನೆ. ಇಡಗುಂಜಿಗೆ ಬರುವಂತೆ ಪುಸಲಾಯಿಸುತ್ತಾರೆ. ಪಂಚಕಜ್ಜಾಯದ ಸವಿಗೆ ಆಕರ್ಷಿತನಾದ ಬಾಲ ಗಣಪ ಇಡಗುಂಜಿಗೆ ಬರುತ್ತಾನೆ.

ಆನಂತರ ಶಿವ-ಪಾರ್ವತಿಯರು ಇಡೀ ಜಗತ್ತಿನಲ್ಲಿ ಹುಡುಕಿದರೂ ಬಾಲ ಗಣಪ ಕಾಣಸಿಗುವುದಿಲ್ಲ. ನಂತರ ಇಡಗುಂಜಿಗೆ ಬಂದ ಸಂದರ್ಭದಲ್ಲಿ ಬಾಲ ಗಣಪ ಸಂತೋಷದಿಂದಿರುವುದನ್ನು ಕಂಡ ಶಿವ-ಪಾರ್ವತಿ, ನಾರದ ಮುನಿಗೆ ನೀನು ಪುತ್ರ ವಿರಹ ಕರುಣಿಸಿದೆ ಎಂದು ಹೇಳುತ್ತಾರೆ. ಆಗ ನಾರದ ಸರ್ವಶಕ್ತಿಯುಳ್ಳ ಮಕ್ಕಳು ಪೋಷಕರಿಂದ ದೂರವಿದ್ದರೆ ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದು ಮನವೊಲಿಸುವ ಪ್ರಯತ್ನ ಮಾಡುತ್ತಾರೆ. ಯಾವತ್ತು ಇಡಗುಂಜಿಯಲ್ಲಿ ಪಂಚಕಜ್ಜಾಯದ ಸೇವನೆ ಬಾಲ ಗಣಪನಿಗೆ ಆಗುವುದಿಲ್ಲವೋ ಅಂದು ಬಾಲ ಗಣಪ ಕೈಲಾಸಕ್ಕೆ ವಾಪಸ್​ ಬರುತ್ತಾನೆ ಎಂದು ನಾರದ ಮುನಿಗಳು ಹೇಳುತ್ತಾರೆ. ಆದ್ರೆ ನೀವು ಕೂಡ ಇಲ್ಲಿಯೇ ಇರಿ ಎಂದು ನಾರದ ಮುನಿ ಶಿವ-ಪಾರ್ವತಿಯರಿಗೆ ಹೇಳುತ್ತಾರೆ. ಆಗ ಅವರು ಇಲ್ಲಿಯೇ ಸಾನ್ನಿಧ್ಯ ವಹಿಸಿದ್ದಾರೆಂಬ ಪ್ರತೀತಿ ಇದೆ. ಅಂದಿನಿಂದ ಇಂದಿನವರೆಗೂ ಬಾಲ ಗಣಪ ಇಡಗುಂಜಿಯಲ್ಲಿಯೇ ನೆಲೆನಿಂತಿದ್ದಾನೆಂಬ ನಂಬಿಕೆಯಲ್ಲಿ ನಿತ್ಯವೂ ಶ್ರೀ ಕ್ಷೇತ್ರ ಇಡಗುಂಜಿಯ ದೇವಸ್ಥಾನದಲ್ಲಿ ಪಂಚಕಜ್ಜಾಯವನ್ನು ಸಮರ್ಪಿಸಲಾಗುತ್ತಿದೆ. ಬಹಳಷ್ಟು ಸಾಧಕರಿಗೆ ವಿಘ್ನ ಬಂದಾಗ ಕಾರ್ಯಸಿದ್ಧಿಗೆ ಇಡಗುಂಜಿ ದೇವಸ್ಥಾನಕ್ಕೆ ಮೊರೆ ಹೋಗಿದ್ದಾರೆ. ಆಳರಸರು ಇಡಗುಂಜಿ ಗಣಪತಿಗೆ ಆರಾಧಿಸಿ, ಧತ್ತಿ ಭೂಮಿ ಉಂಬಳಿ ನೀಡಿದ ಇತಿಹಾಸ ಕೂಡ ಇದೆ.

ಇನ್ನು ಶ್ರೀ ಕ್ಷೇತ್ರ ಇಡಗುಂಜಿ ಗಣೇಶನ ಪ್ರತಿಮೆ, ಕಪ್ಪು ಶಿಲೆಯ ವಿಗ್ರಹದಿಂದ ಸುಂದರವಾಗಿ ಕೆತ್ತಲ್ಪಟ್ಟಿದೆ. ಈ ಶಿಲೆಗೆ ಅಂದಾಜು ಎರಡು ಸಾವಿರ ವರ್ಷಗಳ ಪ್ರಾಚೀನ ಇತಿಹಾಸವಿದೆ. ಪೀಠದ ಮೇಲೆ ನಿಂತಿರುವ ಗಣಪ ಆಭರಣ ಭೂಷಿತನಾಗಿದ್ದಾನೆ. ಜಗತ್ತಿನಾದ್ಯಂತ ಏಕದಂತ ಚತುರ್ಬುಜ ಗಣಪನ್ನು ಪೂಜಿಸುವುದು ವಾಡಿಕೆ. ಆದರೆ ಇಡಗುಂಜಿಯ ದೇವಸ್ಥಾನದಲ್ಲಿರುವುದು ಬಾಲ ಗಣಪತಿ. ಎರಡು ದಂತಗಳನ್ನು ಹಾಗೂ ಎರಡು ಕೈಗಳನ್ನು ಹೊಂದಿರುವುದು ವಿಶೇಷವಾಗಿದೆ. ಎಲ್ಲಾ ಕಡೆ ಗಣಪನ ಉದರಕ್ಕೆ ನಾಗ ಸುತ್ತಿಕೊಂಡಿದ್ದರೆ, ಇಡಗುಂಜಿಯ ಬಾಲ ಗಣಪನಿಗೆ ಉದರಕ್ಕೆ ಏನೂ ಇಲ್ಲ. ದ್ವಿಭುಜ, ದ್ವಿದಂತ, ನಾಗಾಭರಣ ರಹಿತ ಗಣಪ ಈತನಾಗಿದ್ದಾನೆ. ಜಗತ್ತಿನ ಬೇರೆಡೆ ಈ ರೀತಿಯ ಗಣಪನನ್ನು ನೋಡಲು ಸಾಧ್ಯವಿಲ್ಲ. ಬಲಗೈಯಲ್ಲಿ ಪದ್ಮ, ಎಡಗೈಯಲ್ಲಿ ಮೋದಕ ತುಂಬಿದ ಪಾತ್ರೆಯನ್ನು ಹಿಡಿದುಕೊಂಡಿರುವ ಬಾಲ ಗಣಪನ ಸೊಂಡಿಲು ಎಡಮುರಿಯಲ್ಲಿದೆ.

ಪಂಚಕಜ್ಜಾಯದ ಆಸೆಗಾಗಿಯೇ ಇಡಗುಂಜಿಗೆ ಬಂದ ಬಾಲ ಗಣಪನಿಗೆ ಯಾವ ದಿನ ಪಂಚಕಜ್ಜಾಯ ಅರ್ಪಣೆಯಾಗುವುದಿಲ್ಲವೋ ಅಂದೇ ಬಾಲ ಗಣಪ ಕೈಲಾಸಕ್ಕೆ ವಾಪಸ್​ ಹೋಗುತ್ತಾನೆಂಬ ಪ್ರತೀತಿ ಇದೆ. ಹೀಗಾಗಿ ಇಲ್ಲಿ ಪ್ರತಿದಿನ ನಡೆಯುವ ಪೂಜಾ ಕಾರ್ಯಗಳಲ್ಲಿ ಗಣೇಶನಿಗೆ ಪಂಚಕಜ್ಜಾಯ ಸಮರ್ಪಣೆಯಾಗುತ್ತದೆ. ಪಂಚಕಜ್ಜಾಯಕ್ಕೆ ವಿಶೇಷ ಅರ್ಥ ಕೂಡ ಇದೆ. ಪಂಚಕಜ್ಜಾಯದ ಮೂಲಕ ಭಕ್ತಿಯ ಸಮರ್ಪಣೆಯಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಪಂಚಕಜ್ಜಾಯವನ್ನು ಸಮರ್ಪಿಸಿ, ನಂತರ ಅದನ್ನು ಉಳಿದ ಜನರಿಗೆ ಹಂಚುತ್ತಾರೆ. ಅವರು ಸಹ ಪಂಚಕಜ್ಜಾಯದ ಸವಿಯನ್ನುಂಡು ಇಡಗುಂಜಿಗೆ ಭಕ್ತಿ ಸಮರ್ಪಿಸಲು ಬರುತ್ತಾರೆ. ಸಾಮಾನ್ಯವಾಗಿ ಸಂಕಷ್ಟಿ, ವಿನಾಯಕ ಶಾಂತಿ, ಮಹಾಚೌತಿ, ಸಂಕ್ರಾಂತಿ ರಥಸಪ್ತಮಿ ಮುಂತಾದ ವಿಶೇಷ ದಿವಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಸೇವೆ ಸಲ್ಲಿಸುವುದು ವಿಶೇಷವಾಗಿದೆ.

ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ದೇವರ ದರ್ಶನಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇಂದು ದಿನ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ, ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ವೇಳೆ ದೇವಾಲಯದ ಸಾಂಪ್ರದಾಯಿಕ ಮಹಾಪೂಜೆ ಹೊರತುಪಡಿಸಿ ಉಳಿದ ಯಾವುದೇ ಸೇವೆಗೂ ಭಕ್ತರಿಗೆ ಅವಕಾಶವಿರುವುದಿಲ್ಲ ಎಂದು ಈಗಾಗಲೇ ಆಡಳಿತ ಮಂಡಳಿ ತಿಳಿಸಿದೆ‌.

Last Updated : Aug 22, 2020, 8:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.