ಶಿರಸಿ : ನಾನು ನನ್ನ ಮನೆ ಹಾಗೂ ಕಚೇರಿಯಲ್ಲಿ ಜನರಿಗೆ ಅಥವಾ ಜನಪ್ರತಿನಿಧಿಗಳಿಗೆ ಸದಾ ಲಭ್ಯವಿರುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.
ಸಚಿವ ಆನಂದ್ ಸಿಂಗ್ ಸಮಯ ಕೇಳಿದ್ದರ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಊರಲ್ಲಿ ಇದ್ದಾಗ ಸ್ಥಳೀಯರಿಗೆ ಸಿಗುತ್ತೇನೆ. ಅದೇ ರೀತಿ ಬೆಂಗಳೂರಿನಲ್ಲಿ ಇದ್ದಾಗ ಯಾರ್ಯಾರಿಗೆ ಅಗತ್ಯ ಇದೆಯೋ ಅವರು ಬಂದು ಭೇಟಿ ಆಗಬಹುದು ಎಂದರು.
ನನ್ನ ಭೇಟಿಗೆ ಅವಕಾಶ ಕೇಳಿದವರಿಗೆ ನಿಶ್ಚಿತವಾಗಿಯೂ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು. ಸಚಿವ ಆನಂದ್ ಸಿಂಗ್ ಅವಕಾಶ ಕೇಳಿದ್ದಾರೋ, ಇಲ್ಲವೋ ಎಂಬುದರ ಕುರಿತು ಸ್ಪಷ್ಟ ಅಭಿಪ್ರಾಯ ತಿಳಿಸಲು ನಿರಾಕರಿಸಿದರು.