ETV Bharat / state

ಸೂರ್ಯಗ್ರಹಣ: ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಆತ್ಮಲಿಂಗ ದರ್ಶನಕ್ಕೆ ಅವಕಾಶ! - ಖೇತು ಗ್ರಸ್ತ ಸೂರ್ಯಗ್ರಹಣ

ಖೇತು ಗ್ರಸ್ತ ಸೂರ್ಯಗ್ರಹಣ ಮಧ್ಯೆಯೂ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಆತ್ಮಲಿಂಗ ದರ್ಶನಕ್ಕೆ ಹಾಗೂ ಸ್ಪರ್ಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗೋಕರ್ಣ ಮಹಾಬಲೇಶ್ವರ
ಗೋಕರ್ಣ ಮಹಾಬಲೇಶ್ವರ
author img

By

Published : Oct 24, 2022, 9:21 PM IST

ಕಾರವಾರ: ಖೇತು ಗ್ರಸ್ತ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳನ್ನು ಗ್ರಹಣ ಕಾಲದಲ್ಲಿ ಬಂದ್ ಮಾಡಲಾಗುತ್ತದೆ. ಆದರೆ ಕುಮಟಾದ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಗ್ರಹಣ ಕಾಲದಲ್ಲಿಯೂ ಆತ್ಮಲಿಂಗ ದರ್ಶನಕ್ಕೆ ಹಾಗೂ ಸ್ಪರ್ಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ದೇವಸ್ಥಾನದ ಆಡಳಿತ ಮಂಡಳಿ ಮಂಗಳವಾರ ಗ್ರಹಣದ ಮಧ್ಯ ಕಾಲದಿಂದ ಮುಕ್ತಾಯದವರೆಗೆ ಭಕ್ತರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನದಂತೆ ಬೆಳಿಗ್ಗೆ 6:30ರಿಂದ 9:30ರವರೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಬಳಿಕ ಸಂಜೆ 4 ಗಂಟೆಯಿಂದ ಗ್ರಹಣ ಕಾಲ ಮುಗಿಯುವರೆಗೆ ಸಂಜೆ 6.04ರವರೆಗೆ ಸ್ಪರ್ಶ ದರ್ಶನದ ಅವಕಾಶ ಮಾಡಿಕೊಡಲಾಗಿದೆ.

ಆದರೆ ಗ್ರಹಣ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ದೇವಸ್ಥಾನದಲ್ಲಿ ಅಮೃತಾನ್ನ ಪ್ರಸಾದ ಮತ್ತು ರಾತ್ರಿ ಪ್ರಸಾದ ಭೋಜನ ಇರುವುದಿಲ್ಲ. ಭಕ್ತರು ಸಹಕರಿಸುವಂತೆ ದೇವಸ್ಥಾನ ಮಂಡಳಿ ಕೋರಿದೆ.

ಸೂರ್ಯ ಗ್ರಹಣ ಹಿನ್ನೆಲೆ ರಾಜ್ಯದ ಬಹುತೇಕ ದೇವಾಲಯಗಳಲ್ಲಿ ನಾಳೆ ದರ್ಶನ ಇರುವುದಿಲ್ಲ.

(ಓದಿ: ಸೂರ್ಯಗ್ರಹಣ: ನಾಳೆ ಭಕ್ತರಿಗೆ ಹಾಸನಾಂಬೆ ದರ್ಶನ ಭಾಗ್ಯವಿಲ್ಲ )

ETV Bharat Logo

Copyright © 2024 Ushodaya Enterprises Pvt. Ltd., All Rights Reserved.