ETV Bharat / state

ಅಧಿಕಾರಿಗಳ ಎದುರು ವಿಷ ಸೇವಿಸಿದ್ದ ಶಿರಸಿ ತಾಲೂಕಿನ ರೈತ ಸಾವು

ಜುಲೈ 17ರಂದು ಅಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡು ಕಾಲುವೆ ಒಡೆಯಲು ಬುಲ್ಡೋಜರ್ ತಂದಿದ್ದರೆಂದು ಆರೋಪಿಸಲಾಗಿದೆ. ನೈಸರ್ಗಿಕ ಕಾಲುವೆ ಸರಿಪಡಿಸೋ ಬದಲು ಸರ್ವೆ ನಂಬರ್ 13ರಲ್ಲಿ ನೀರು ಬಿಟ್ಟರೆ ಸುಬ್ರಾಯ ಹೆಗಡೆಯವರ ತೋಟ, ಬೆಳೆಗೆ ಹಾನಿಯಾಗುತ್ತಿತ್ತು..

sirsi-farmer-death
ರೈತ ಸಾವು
author img

By

Published : Jul 21, 2020, 5:44 PM IST

ಶಿರಸಿ : ಕಂದಾಯ ಅಧಿಕಾರಿಗಳು ಹಾಗೂ ಕೆಲ ಜಮೀನುದಾರರು ಕಾನೂನು‌ ಬಾಹಿರವಾಗಿ ನಡೆದುಕೊಂಡು ತನ್ನ ಜಮೀನಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಲೂಕಿನ ಗುಡ್ನಾಪುರ ಹೊಸಗದ್ದೆಯ ರೈತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸುಬ್ರಾಯ ಹೆಗಡೆ (62) ಮೃತ ರೈತ. ಜುಲೈ 17ರಂದು ವಿಷ ಕುಡಿದ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬನವಾಸಿ ಗುಡ್ನಾಪುರ ಹೊಸಗದ್ದೆಯಲ್ಲಿ ನೈಸರ್ಗಿಕವಾಗಿ ಕೆರೆಕಟ್ಟೆ ಕಾಲುವೆ ನೀರು ಹರಿಯುತ್ತಿತ್ತು. ಈ ಕಾಲುವೆ ನೀರು ಸರ್ವೆ ನಂಬರ್ 14ರ ಬಳಿ ಪ್ರಸ್ತುತ ಹರಿದು ಹೋಗುತ್ತಿದೆ. ಆದರೆ, ಗ್ರಾಮ ನಕಾಶೆಯಲ್ಲಿ ಸರ್ವೆ ನಂಬರ್ 13ರ ಮೂಲಕ, ಸರ್ವೆ ನಂಬರ್ 14ಕ್ಕೆ ಬಿಡುವ ನೀಲ ನಕ್ಷೆ ಸಿದ್ಧಪಡಿಸಲಾಗಿತ್ತು. ಈ ಬಗ್ಗೆ ಆದೇಶ ನೀಡಿರುವ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ, ಉಭಯ ಸರ್ವೆ ನಂಬರ್​ಗಳಲ್ಲಿ ಯಾವುದೇ ಬೆಳೆಗಳಿಗೆ ಹಾನಿಯಾಗದಂತೆ ಕಾಲುವೆ ರಿಸ್ಟೋರ್ ಹಾಗೂ ರಿನೋವೇಟ್ ಮಾಡಲು ಸೂಚನೆ ನೀಡಿತ್ತು.

ಆದರೆ, ಸ್ಥಳೀಯರ ಒತ್ತಡದ ಮೇರೆಗೆ ಸುಬ್ರಾಯ ಹೆಗಡೆ ಅವರ ಜಮೀನಿನಲ್ಲೇ ಅಧಿಕಾರಿಗಳು ನೀರು ಬಿಡಲು ಮುಂದಾಗಿದ್ದರೆಂಬ ಆರೋಪ ಎದುರಾಗಿದ್ದು, ಈ ಬಗ್ಗೆ ಜುಲೈ 16ರಂದು ತಹಶೀಲ್ದಾರ್, ಉಪ ತಹಶೀಲ್ದಾರ್, ಪಿಡಿಒ, ಶಾನುಭೋಗ ಜತೆ ಪಕ್ಕದ ಜಮೀನಿನವರಾದ ಗಣಪತಿ ಭಟ್, ಸುಬ್ರಹ್ಮಣ್ಯ ಪಂಡಿತ್, ಮಧುಕೇಶ್ವರ್ ಭಟ್ ಹಾಗೂ 30ಕ್ಕೂ ಹೆಚ್ಚು ಜನರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದರು ಎಂದು ಪೊಲೀಸ್ ದೂರಿನಲ್ಲಿ ಸುಬ್ರಾಯ ಹೆಗಡೆ ಪತ್ನಿ ಹೇಳಿದ್ದಾರೆ.

ಬಳಿಕ ಜುಲೈ 17ರಂದು ಅಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡು ಕಾಲುವೆ ಒಡೆಯಲು ಬುಲ್ಡೋಜರ್ ತಂದಿದ್ದರೆಂದು ಆರೋಪಿಸಲಾಗಿದೆ. ನೈಸರ್ಗಿಕ ಕಾಲುವೆ ಸರಿಪಡಿಸೋ ಬದಲು ಸರ್ವೆ ನಂಬರ್ 13ರಲ್ಲಿ ನೀರು ಬಿಟ್ಟರೆ ಸುಬ್ರಾಯ ಹೆಗಡೆಯವರ ತೋಟ, ಬೆಳೆಗೆ ಹಾನಿಯಾಗುತ್ತಿತ್ತು. ಅಧಿಕಾರಿಗಳ ವರ್ತನೆ, ತೋಟ ಕಳೆದುಕೊಳ್ಳೋ ನೋವಿನಲ್ಲಿ ಜುಲೈ 17ರಂದು ಸುಬ್ರಾಯ ಹೆಗಡೆ ಎಲ್ಲರ ಎದುರಲ್ಲೇ ವಿಷ ಸೇವಿಸಿದ್ದರು ಎನ್ನಲಾಗಿದೆ. ರೈತನನ್ನು ರಕ್ಷಿಸುವ ಬದಲು ಸ್ಥಳದಿಂದ ಅಧಿಕಾರಿಗಳು ಹಾಗೂ ಸ್ಥಳೀಯರು ಕಾಲ್ಕಿತ್ತಿದ್ದರು ಅನ್ನೋ ಆರೋಪವೂ ಕೇಳಿ ಬಂದಿದೆ.

ಈ ಬಗ್ಗೆ ಜುಲೈ 18ರಂದು ಬನವಾಸಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯರ ವಿರುದ್ಧ ದೂರು ದಾಖಲಾಗಿದೆ. ಸುಬ್ರಾಯ ಹೆಗಡೆ ಸಾವಿನ‌ ಬಳಿಕ ಎಫ್‌ಐಆರ್ ದಾಖಲಾಗಿದೆ. ಆದರೆ, ಮೃತ ಸುಬ್ರಾಯ ಹೆಗಡೆ ಕುಟುಂಬದ ಆರೋಪವನ್ನು ತಳ್ಳಿ ಹಾಕಿರುವ ಉಪ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಕಾಲುವೆ ನೀರು ತನ್ನ ಜಮೀನಿನಲ್ಲಿ ಹರಿಸಲು ಜಮೀನು ಮಾಲೀಕರು ಒಪ್ಪಿದ್ದರು. ಸರ್ವೆ ನಂಬರ್ 13ರಲ್ಲಿ ಗುರುತು ಹಾಕಿದ್ದೇವೆ ಹೊರತು ಇತರ ಯಾವುದೇ ಕಾಮಗಾರಿ ನಡೆಸಿಲ್ಲ. ಗ್ರಾಮ ನಕಾಶೆ ಹಾಗೂ ಕೋರ್ಟ್ ಆದೇಶವಷ್ಟೇ ಪಾಲಿಸಿದ್ದೇವೆ. ಎಲ್ಲಾ ಮಾತುಕತೆ ಶಾಂತ ರೀತಿ ನಡೆದಿದ್ದು, ಮೃತರ ಕುಟುಂಬಸ್ಥರು ಮಾಡಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.