ಶಿರಸಿ(ಉತ್ತರಕನ್ನಡ): ತಾಲೂಕಿನ ಸಿಮೆಂಟ್ ಪೈಪ್ಸ್ ಉತ್ಪಾದನಾ ಘಟಕದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಕೇವಲ 24 ಗಂಟೆಯಲ್ಲಿ ಬಂಧಿಸಿದ್ದಾರೆ.
ಕಾಳಂಗಿಯ ಸಂತೋಷ ಸದಾನಂದ ಕಲ್ಲಮಟ್ಟರ್ (22), ಈರೇಶ ಬಸವರಾಜ ರಂಗಾಪುರ (26) ಹಾಗೂ ಶಿವಕುಮಾರ ಷಣ್ಮುಖ ಕಲ್ಲಮಟ್ಟರ್ (20) ಬಂಧಿತ ಆರೋಪಿಗಳು. ಸೆಪ್ಟೆಂಬರ್ 15 ರಂದು ತಾಲೂಕಿನ ಇಸಳೂರು ಗ್ರಾಮದ ಶ್ರೀನಿಕೇತನ ಶಾಲೆಯ ಹತ್ತಿರವಿರುವ ಅಶ್ವಿನಿ ಸಿಮೆಂಟ್ ಪೈಪ್ಸ್ ಉತ್ಪಾದನಾ ಘಟಕದಲ್ಲಿದ್ದ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಘಟಕದ ಮಾಲೀಕ ಆದರ್ಶ ಶೆಟ್ಟರ್ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು, 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
ಬಂಧಿತರಿಂದ 34 ಸಾವಿರ ಮೌಲ್ಯದ ಎಲೆಕ್ಟ್ರಿಕ್ ಮೋಟಾರ್, 18 ಸಾವಿರ ಬೆಲೆಯ ಎಲೆಕ್ಟ್ರಿಕ್ ಮೋಟಾರ್, 14 ಸಾವಿರ ಮೌಲ್ಯದ ಕಬ್ಬಿಣದ ರಾಡ್ ಕತ್ತರಿಸುವ ಮೋಟಾರ್ ಹಾಗೂ 12 ಸಾವಿರ ಮೌಲ್ಯದ ಕಬ್ಬಿಣದ ಪುಲ್ಲಿ ಚೈನ್ ಬ್ಲಾಕ್ಗಳ್ನು ವಶಪಡಿಸಿಕೊಳ್ಳಲಾಗಿದೆ.