ಶಿರಸಿ(ಉತ್ತರ ಕನ್ನಡ) : ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರ್ಯಾರಿಗೆ ಬೈತಾರೆ ಅನ್ನೋದು ಸ್ವತಃ ಅವರಿಗೇ ಗೊತ್ತಾಗ್ತಿಲ್ಲ. ಇದಕ್ಕೆ ಕಾರಣ ಅವರ ಹತಾಶ ಸ್ಥಿತಿ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವ್ಯಂಗ್ಯವಾಡಿದ್ದಾರೆ.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ನಾವೇ ವಿಜಯ ಸಾಧಿಸುತ್ತೇವೆ. ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ವಿಜಯ ದಶಮಿ ಮುಗಿಯಲಿ ಎಂದು ಸುಮ್ಮನಿದ್ದೆವು. ಇಂದಿನಿಂದ ಪ್ರಚಾರದಲ್ಲಿ ಸಚಿವರ ದಂಡೇ ಇರಲಿದೆ ಎಂದರು.
ಇದನ್ನೂ ಓದಿ: ಪೊಲೀಸರನ್ನು ಕೇಸರೀಕರಣ ಮಾಡಿರುವುದಕ್ಕೆ ಆಕ್ಷೇಪಿಸಿದ್ದೇನೆ ಅಷ್ಟೇ: ಸಿದ್ದರಾಮಯ್ಯ