ಶಿರಸಿ: ಮುಖ್ಯಮಂತ್ರಿ ಯಡಿಯೂರಪ್ಪ ಹೀರೋ. ಸಿದ್ದರಾಮಯ್ಯ ವಿಲನ್, ಕುಮಾರಸ್ವಾಮಿ ಸೈಡ್ ಆ್ಯಕ್ಟರ್ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ 24 ಜನ ಹಿಂದೂ ಕಾರ್ಯಕರ್ಯರು ಸತ್ತಾಗ ಕಣ್ಣಲ್ಲಿ ನೀರು ಬರಲಿಲ್ಲ. ಮುಖ್ಯಮಂತ್ರಿ ಸ್ಥಾನ ಹಾರಿಸಿದಾಗ ಸಿದ್ದರಾಮಯ್ಯರಿಗೆ ಕಣ್ಣಲ್ಲಿ ನೀರು ಬಂತು. ಕಾಂಗ್ರೆಸ್ನವರು ಈ ರಾಜ್ಯದಲ್ಲಿ ಸಮಾಜವನ್ನು ಒಡೆದವರು. ಮಠ ಮಂದಿರವನ್ನು ಹಾಳು ಮಾಡಿದವರು. ಸಮಾಜದಲ್ಲಿ ಅಕ್ರೋಶ ಸೃಷ್ಟಿಮಾಡಿದವರು ಎಂದು ಕಿಡಿಕಾರಿದರು.