ETV Bharat / state

ವಿ.ಪ. ಸದಸ್ಯರಾಗಿ ಬುಡಕಟ್ಟು ಜನಾಂಗದ ಶಾಂತಾರಾಮ ಸಿದ್ಧಿ ನಾಮ ನಿರ್ದೇಶನ - uttar kannada district news

ವಿಧಾನ ಪರಿಷತ್ ಸದಸ್ಯರಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬುಡಕಟ್ಟು ಜನಾಂಗದ ಶಾಂತಾರಾಮ ಬುದ್ನಾ ಸಿದ್ಧಿ ಆಯ್ಕೆಯಾಗಿದ್ದಾರೆ.

Shantarama Siddhi elected to the vidhana parishath
ಶಾಂತಾರಾಮ ಸಿದ್ಧಿ
author img

By

Published : Jul 22, 2020, 6:20 PM IST

Updated : Jul 22, 2020, 10:42 PM IST

ಶಿರಸಿ : ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಹಾಗೂ ಪರಿಸರ ಉಳಿವಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಸಿದ್ಧಿ ಜನಾಂಗದ ಶಾಂತಾರಾಮ ಸಿದ್ಧಿ ಅವರನ್ನು ರಾಜ್ಯ ಸರ್ಕಾರ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಮೂಲಕ ವಿಶಿಷ್ಟ ಗೌರವ ಸಲ್ಲಿಸಿದೆ.

ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ ವ್ಯಾಪ್ತಿಯ ಪುರ‍್ಲೇಮನೆಯ ಶಾಂತಾರಾಮ ಸಿದ್ಧಿ ಬುಧವಾರ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಆದೇಶ ಹೊರಡಿಸಿದ್ದಾರೆ.

1965ರಲ್ಲಿ ಹಿತ್ಲಳ್ಳಿಯ ಸಿದ್ಧಿ ಸಮುದಾಯದ ಬಡ ಕುಟುಂಬದಲ್ಲಿ ಜನಿಸಿದ ಶಾಂತಾರಾಮ ಸಿದ್ಧಿ ಅವರು ಕಷ್ಟದ ನಡುವೆಯೂ ಛಲದಿಂದ ಶಿಕ್ಷಣ ಪಡೆಯಲು ಮುಂದಾದರು. ಹಿತ್ಲಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಅಂಕೋಲಾದ ಕೆನರಾ ವೆಲ್‌ಫೇರ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಪಿಯುಸಿ ಅಭ್ಯಸಿಸಿದರು. ಕಾರವಾರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುವ ಮೂಲಕ ಸಿದ್ಧಿ ಸಮುದಾಯದ ಪ್ರಥಮ ಪದವೀಧರ ಎನಿಸಿಕೊಂಡರು.

ವನವಾಸಿ ಕಲ್ಯಾಣ ಸಂಸ್ಥೆಯ ಪ್ರಮುಖರಾಗಿದ್ದ ಪ್ರಕಾಶ ಕಾಮತ್ ಅವರ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡರು. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಸಿದ್ಧಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ, ವಿಶಿಷ್ಟವಾಗಿರುವ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಲು ಶ್ರಮಿಸುವ ಅವರ ಆಸೆಯನ್ನು ಸಾಕಾರಗೊಳಿಸುವಲ್ಲಿ ವನವಾಸಿ ಕಲ್ಯಾಣ ಸಹಕಾರಿಯಾಯಿತು. ಸಿದ್ಧಿ ಸಮುದಾಯದವರನ್ನು ಮತಾಂತರಗೊಳಿಸುವುದನ್ನು ತಡೆಯಲು ಜಾಗೃತಿ ಕಾರ್ಯಕ್ರಮ, ಶೈಕ್ಷಣಿಕ ಅರಿವು ಮೂಡಿಸುವುದು, ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಜನತೆಗೆ ತಿಳಿ ಹೇಳಿ, ಅದನ್ನು ತಲುಪಿಸುವ ಮೂಲಕ ಸಾಮಾಜಿಕ ಜಾಗೃತಿಯಲ್ಲಿ ತೊಡಗಿಕೊಂಡರು.

ಸಿದ್ಧಿ ಸಮುದಾಯದಂತೆ ಹಿಂದುಳಿದ ಬುಡಕಟ್ಟು ಸಮುದಾಯಗಳಾದ ದನಗರ ಗೌಳಿ, ಕುಣಬಿ, ಕುಂಬ್ರಿ ಮರಾಠಿ ಸಮುದಾಯದವರ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೂ ವನವಾಸಿ ಕಲ್ಯಾಣದ ಮೂಲಕ ಶ್ರಮಿಸುತ್ತಿರುವ ಶಾಂತಾರಾಮ ಸಿದ್ಧಿ ಚಿಪಗೇರಿ ಹಾಗೂ ದಾಂಡೇಲಿಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ವತಃ ನಿರ್ವಹಿಸುತ್ತಿದ್ದಾರೆ.

ಶಾಂತಾರಾಮ 31 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದು, ಪ್ರಸ್ತುತ ವನವಾಸಿ ಕಲ್ಯಾಣದ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಹಿತರಕ್ಷಾ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಸಂಘಟಕರಾಗಿ, ವಾಗ್ಮಿಯಾಗಿ ಗುರುತಿಸಿಕೊಂಡಿದ್ದಾರೆ. ಪತ್ನಿ ಸುಶೀಲಾ ಅವರು ಶಾಂತಾರಾಮ ಅವರ ಸಾಮಾಜಿಕ ಕಾರ್ಯಗಳಲ್ಲಿ ಸಹಕರಿಸುತ್ತಾರೆ. ಸಾಮಾಜಿಕ ಸೇವೆಗಾಗಿ ಹಲವು ಗೌರವ ಸನ್ಮಾನಗಳು ಶಾಂತಾರಾಮ ಅವರನ್ನು ಅರಸಿ ಬಂದಿವೆ.

Last Updated : Jul 22, 2020, 10:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.