ETV Bharat / state

ಲೈಫ್ ಜಾಕೆಟೂ ಇಲ್ಲ, ಸೆಫ್ಟಿ ಪರಿಕರವೂ ಇಲ್ಲ... ಘೋರ ದುರಂತದ ಬಳಿಕವೂ ನಿಲ್ಲದ ಚೆಲ್ಲಾಟ! - ಕಾರವಾರದ ಬೇಳೂರು

ಯಾವುದೇ ಸುರಕ್ಷಾ ಪರಿಕರ ಬಳಸದೇ ಒಂದೇ ದೋಣಿಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣ ಮಾಡಿದ ಘಟನೆ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಲೈಫ್ ಜಾಕೆಟೂ ಇಲ್ಲ ಸೆಫ್ಟಿ ಪರಿಕರವೂ ಇಲ್ಲ... ಘೋರ ದುರಂತದ ಬಳಿಕವೂ ನಿಲ್ಲದ ಚೆಲ್ಲಾಟ
author img

By

Published : Oct 13, 2019, 5:42 AM IST

ಕಾರವಾರ: ಲೈಫ್​ ಜಾಕೆಟ್ ಸೇರಿದಂತೆ ಯಾವುದೇ ಸುರಕ್ಷಾ ಪರಿಕರ ಬಳಸದೇ ಒಂದೇ ದೋಣಿಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣ ಮಾಡಿದ ಘಟನೆ ಕಾರವಾರದ ಕಾಳಿನದಿಯಲ್ಲಿ ನಡೆದಿದೆ.

ಕಾರವಾರದ ಬೇಳೂರಿನ ಸತ್ಯ ಸಾಯಿ ನಿಕೇತನ ಶಾಲೆ ಜರ್ಸಿ ಧರಿಸಿದ ವಿದ್ಯಾರ್ಥಿಗಳನ್ನು ಮರಳು ತುಂಬುವ ಬೋಟ್​ನಲ್ಲಿ ಕಾಳಿ ದ್ವೀಪಕ್ಕೆ ಕರೆದುಕೊಂಡು ಹೋಗಿದ್ದರು ಎನ್ನಲಾಗುತ್ತಿದೆ. ಆದರೆ, ತುಂಬಿ ಹರಿಯುವ ನದಿಯಲ್ಲಿ ಅಸುರಕ್ಷತವಾಗಿ ಮಕ್ಕಳನ್ನು ಕರೆದುಕೊಂಡು ಹೋಗಿರುವುದಕ್ಕೆ ಶಿಕ್ಷಕಕರು ಹಾಗೂ ದೋಣಿ ಮಾಲೀಕರ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದೆ.

ವರ್ಷದ ಹಿಂದೆಯಷ್ಟೆ ಕೂರ್ಮಗಡ ದ್ವೀಪದ ಬಳಿ ನಡೆದ ಬೋಟ್ ದುರಂತದ ಬಳಿಕ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಜನರನ್ನು ನದಿ ಮಧ್ಯೆ ಕರೆದುಕೊಂಡು ಹೋಗುವ ಪ್ರತಿ ಬೋಟ್​ಗಳಿಗೂ ಸುರಕ್ಷಾ ಪರಿಕರ, ಲೈಸೆನ್ಸ್ ಜೊತೆಗೆ ಲೈಫ್ ಜಾಕೆಟ್ ಕಡ್ಡಾಯ ಗೊಳಿಸಿತ್ತು. ಅಲ್ಲದೆ, ಈ ಬಗ್ಗೆ ಮೀನುಗಾರಿಕಾ ಇಲಾಖೆಗೂ ಎಚ್ಚರಿಸಿತ್ತು. ಇಷ್ಟಾದರೂ ಮೀನುಗಾರರು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಮಕ್ಕಳನ್ನು ಮತ್ತು ಶಿಕ್ಷಕರನ್ನು ನದಿಯಲ್ಲಿ ಕರೆದುಕೊಂಡು ಹೋಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಏನು ಅರಿಯದ ಮಕ್ಕಳನ್ನು ಮರಳು ತುಂಬುವ ಬೋಟ್​ನಲ್ಲಿ ತುಂಬಿಕೊಂಡು ಹೋಗಲಾಗಿದೆ. ವರ್ಷದ ಹಿಂದೆ ಬಹುದೊಡ್ಡ ದುರಂತ ನಡೆದರು ಇವರೆಲ್ಲಾ ಇನ್ನು ಎಚ್ಚೆತ್ತುಕೊಂಡಿಲ್ಲ. ಕೂಡಲೇ ಒಳನಾಡು ಜಲಸಾರಿಗೆ ಇಲಾಖೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮುಂದೆ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ ಆಗ್ರಹಿಸಿದ್ದಾರೆ.

Intro:Body:ಲೈಫ್ ಜಾಕೆಟೂ ಇಲ್ಲ ಸೆಫ್ಟಿ ಪರಿಕರವೂ ಇಲ್ಲ... ಘೋರ ದುರಂತದ ಬಳಿಕವೂ ನಿಲ್ಲದ ಚೆಲ್ಲಾಟ

ಕಾರವಾರ: ಲೈಪ್ ಜಾಕೆಟ್ ಸೇರಿದಂತೆ ಯಾವುದೇ ಸುರಕ್ಷಾ ಪರಿಕರ ಬಳಸದೇ ಒಂದೇ ದೋಣಿಯಲ್ಲಿ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣ ಮಾಡಿದ ಘಟನೆ ಕಾರವಾರದ ಕಾಳಿನದಿಯಲ್ಲಿ ನಡೆದಿದೆ.
ಕಾರವಾರದ ಬೇಳೂರಿನ ಸತ್ಯ ಸಾಯಿ ನಿಕೇತನ ಶಾಲೆ ಜರ್ಸಿ ಧರಿಸಿದ ವಿದ್ಯಾರ್ಥಿಗಳನ್ನು ಮರಳು ತುಂಬುವ ಬೋಟ್ ನಲ್ಲಿ ಕಾಳಿನದಿಯಲ್ಲಿ ಕಾಳಿ ದ್ವೀಪಕ್ಕೆ ಕರೆದುಕೊಂಡು ಹೋಗಿದ್ದರು ಎನ್ನಲಾಗುತ್ತಿದೆ.
ಆದರೆ ತುಂಬಿ ಹರಿಯುವ ನದಿಯಲ್ಲಿ ಅಸುರಕ್ಷತವಾಗಿ ಮಕ್ಕಳನ್ನು ತುಂಬಿಕೊಂಡು ತೆರಳಿರುವ ಶಿಕ್ಷಕಕರು ಹಾಗೂ ದೋಣಿ ಮಾಲಿಕರ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದೆ.
ಅಲ್ಲದೆ ವರ್ಷದ ಹಿಂದೆ ಕೂರ್ಮಗಡ ದ್ವೀಪದ ಬಳಿ ನಡೆದ ಬೋಟ್ ದುರಂತದ ಬಳಿಕ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಜನರನ್ನು ನೀರ ಮದ್ಯ ಕರೆದುಕೊಂಡು ಹೋಗುವ ಪ್ರತಿ ಬೋಟ್ ಗಳಿಗೆ ಸುರಕ್ಷಾ ಪರಿಕರ, ಲೈಸೆನ್ಸ್ ಜತೆಗೆ ಲೈಫ್ ಜಾಕೆಟ್ ಕಡ್ಡಾಯ ಗೊಳಿಸಿತ್ತು. ಅಲ್ಲದೆ ಈ ಬಗ್ಗೆ ಮೀನುಗಾರಿಕಾ ಇಲಾಖೆ ಕೂಡ ಎಚ್ಚರಿಸಿತ್ತು. ಇಷ್ಟಾದರೂ ಮೀನುಗಾರರು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಮಕ್ಕಳನ್ನು ಮತ್ತು ಶಿಕ್ಷಕರನ್ನು ನದಿಯಲ್ಲಿ ಕರೆದುಕೊಂಡು ಹೋಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಏನು ಅರಿಯದ ಮಕ್ಕಳನ್ನು ದನದ ರಿತಿ ಮರಳು ತುಂಬುವ ಬೋಟ್ ನಲ್ಲಿ ತುಂಬಿಕೊಂಡು ಹೋಗಲಾಗಿದೆ. ವರ್ಷದ ಹಿಂದೆ ಬಹುದೊಡ್ಡ ದುರಂತ ನಡೆದರು ಇನ್ನು ಎಚ್ಚೆತ್ತುಕೊಂಡಿಲ್ಲ. ಕೂಡಲೇ ಈ ಬಗ್ಗೆ ಒಳನಾಡು ಜಲಸಾರಿಗೆ ಇಲಾಖೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಗಳು ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ ಮುಂದೆ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ ಆಗ್ರಹಿಸಿದ್ದಾರೆ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.