ETV Bharat / state

ಕಾಡಿನಲ್ಲಿ ಹುದುಗಿಸಿಟ್ಟಿದ್ದ ಬರೊಬ್ಬರಿ 6.70 ಲಕ್ಷ ಮೌಲ್ಯದ ಮದ್ಯ ವಶಕ್ಕೆ!

author img

By

Published : Jan 19, 2021, 3:15 PM IST

ಗೋವಾದಲ್ಲಿ ಮದ್ಯದ ದರ ಕಡಿಮೆ‌ ಇದೆ. ಅದನ್ನು ಅಕ್ರಮವಾಗಿ ಕಾರವಾರ ಮೂಲಕ ತಂದು ಕರ್ನಾಟಕದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ..

Rs 6.70 lakh worth alcohol has been seized by police in karwar
ಕಾಡಿನಲ್ಲಿ ಹುದುಗಿಸಿಟ್ಟಿದ್ದ ಬರೊಬ್ಬರಿ 6.70 ಲಕ್ಷ ಮೌಲ್ಯದ ಮದ್ಯ ವಶಕ್ಕೆ

ಕಾರವಾರ : ಮಾಜಾಳಿ ಬಳಿಯ ಅರಣ್ಯದಲ್ಲಿ ಹುದುಗಿಸಿಟ್ಟಿದ್ದ ಬರೊಬ್ಬರಿ 6.70 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಗೋವಾ ರಾಜ್ಯದ ಪರವಾನಿಗೆ ಹೊಂದಿದ್ದ 1,423 ಲೀಟರ್ ಮದ್ಯ ಹಾಗೂ 228 ಲೀಟರ್ ಬಿಯರ್​ನ ಕಾಡಿನಲ್ಲಿ ಅಡಗಿಸಿಡಲಾಗಿತ್ತು. ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗೋವಾದಲ್ಲಿ ಮದ್ಯದ ದರ ಕಡಿಮೆ‌ ಇದೆ. ಅದನ್ನು ಅಕ್ರಮವಾಗಿ ಕಾರವಾರ ಮೂಲಕ ತಂದು ಕರ್ನಾಟಕದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.