ETV Bharat / state

ಸಂಗೀತ ಪ್ರತಿಭೆ ಮೂಲಕ ಭಾವೈಕ್ಯತೆ ಮೆರೆದು ರಾಜ್ಯಕ್ಕೆ ಕೀರ್ತಿ ತಂದ ರಿಫಾ ತಾಜ್: ವಿಡಿಯೋ

ಅನ್ಯಧರ್ಮಿಯಳಾದ ಈಕೆ ಹಣೆಗೆ ವಿಭೂತಿ ಹಾಗೂ ಕುಂಕುಮ ಇಟ್ಟು, ಜಾನಪದ ಶೈಲಿಯ ಸೀರೆ, ಕುಪ್ಪಸ ತೊಟ್ಟು ಪ್ರದರ್ಶನ ನೀಡಿದ್ದಾಳೆ. ಅದಲ್ಲೂ 'ಶರಣೆಂಬೆ ಶಿವನಿಗೇ, ಶರಣೆಂಬೆ ಹರನಿಗೆ' ಅನ್ನೋ ಭಕ್ತಿ ಪ್ರಧಾನ ಬಿಸೋ ಕಲ್ಲಿನ ಹಾಡನ್ನು ಸುಲಲಿತವಾಗಿ ಅಷ್ಟೇ ಭಕ್ತಿ ಪರವಶಳಾಗಿ ಹಾಡಿರುವುದು ಭಾವೈಕ್ಯತೆಗೆ ಉದಾಹರಣೆಯಾಗಿದೆ.

Rifa Taj achieved in the field of folk music
ಸಂಗೀತ ಪ್ರತಿಭೆ ಮೂಲಕ ಭಾವೈಕ್ಯತೆ ಮೆರೆದು ರಾಜ್ಯಕ್ಕೆ ಕೀರ್ತಿ ತಂದ ರಿಫಾ ತಾಜ್
author img

By

Published : Jan 19, 2021, 9:12 AM IST

ಶಿರಸಿ: ಸಂಗೀತಕ್ಕೆ ಯಾವುದೇ ಜಾತಿ, ಧರ್ಮವಿಲ್ಲ. ಎಲ್ಲರಲ್ಲೂ ಭಾವೈಕ್ಯತೆ ಬೆಳೆಸುವ ಕಲೆ. ಅದಕ್ಕೆ ಉದಾಹರಣೆ ಎಂಬಂತೆ ಜಿಲ್ಲೆಯ ಸಿದ್ದಾಪುರದ ಬಾಲಕಿಯೊಬ್ಬಳು‌ ಅನ್ಯಧರ್ಮಿಯಳಾಗಿದ್ದರೂ ಹಣೆಯಲ್ಲಿ ವಿಭೂತಿ ಹಾಗೂ ಕುಂಕುಮವನ್ನಿಟ್ಟು ಜಾನಪದ ಶೈಲಿಯ ಸೀರೆ, ಕುಪ್ಪುಸ ತೊಟ್ಟು, ಎದುರುಗಡೆ ಬಿಸೋ ಕಲ್ಲನ್ನಿಟ್ಟು ಹಾಡು ಹೇಳುತ್ತಾ ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಹಾಗೂ ಜಿಲ್ಲೆಯನ್ನು ಪ್ರತಿನಿಧಿಸಿದ್ದಾಳೆ‌.

ಸಂಗೀತ ಪ್ರತಿಭೆ ಮೂಲಕ ಭಾವೈಕ್ಯತೆ ಮೆರೆದು ರಾಜ್ಯಕ್ಕೆ ಕೀರ್ತಿ ತಂದ ರಿಫಾ ತಾಜ್

ಈಕೆಯ ಹೆಸರು ರಿಫಾ ತಾಜ್, ಸಿದ್ದಾಪುರ ತಾಲೂಕಿನ ಕಾನಗೋಡಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ. 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಬಾಲಕಿ ಕಲೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ಈಗಾಗಲೇ ರಾಷ್ಟ್ರಮಟ್ಟದಲ್ಲಿ ರಾಜ್ಯ ಹಾಗೂ ಜಿಲ್ಲೆಯನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಮಕ್ಕಳಿಗಾಗಿಯೇ ನಡೆಸುವ ಕಲೋತ್ಸವ ಸ್ಪರ್ಧೆಯಲ್ಲಿ, ಬೀಸೋ ಕಲ್ಲಿನ ಪದ ಅನ್ನೋ ಜಾನಪದ ಪ್ರಕಾರದಲ್ಲಿ ಜಿಲ್ಲೆ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ತನ್ನ ಪ್ರದರ್ಶನವನ್ನು ನೀಡಿದ್ದಾಳೆ. ರಾಷ್ಟ್ರ ಮಟ್ಟದ ಪ್ರದರ್ಶನಗಳು ನಡೆದಿದ್ದು, ಜನವರಿ 22ರ ನಂತರ ಫಲಿತಾಂಶ ಪ್ರಕಟವಾಗಲಿದೆ.

ಈ ಸುದ್ದಿಯನ್ನೂ ಓದಿ: ವ್ಯಾಕ್ಸಿನ್ ವಿಚಾರದಲ್ಲಿ ವೈದ್ಯರ ಅಸಮಾಧಾನ: ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ಯಾಕೆ..?

ಮೊದ ಮೊದಲು ಇದನ್ನು ಕಲಿಯಲು ಬಹಳ ಕಷ್ಟವಾಗ್ತಿತ್ತು. ಆದ್ರೆ ಸಂಗೀತ ಶಿಕ್ಷಕರ ಹಾಗೂ ಪಾಲಕರ ಸಹಕಾರದೊಂದಿಗೆ ಇದನ್ನು ಕಲಿತು ಈಗ ರಾಷ್ಟ್ರ ಮಟ್ಟಕ್ಕೆ ಹೋಗಿರುವುದು ಬಹಳ ಸಂತಸ ತಂದಿದೆ ಎನ್ನುತ್ತಾರೆ ರಿಫಾ ತಾಜ್. ಈ ಸ್ಪರ್ಧೆ ಆನ್ಲೈನ್ ಮೂಲಕ ನಡೆಯೋದ್ರಿಂದ ವಿದ್ಯಾರ್ಥಿಗಳು ನೀಡಿದ ಪ್ರದರ್ಶನವನ್ನು ಪದೇ ಪದೆ ಅವಲೋಕಿಸಿ ತೀರ್ಪನ್ನು ನೀಡಲಾಗುತ್ತದೆ. ಇದೀಗ ವಿದ್ಯಾರ್ಥಿನಿಯ ಈ ಸಾಧನೆಯನ್ನು ಶಾಲೆಯ ಶಿಕ್ಷಕ ವೃಂದ ಅಭಿನಂದಿಸಿದೆ.

ಭಾವೈಕ್ಯತೆ ಮೆರೆದು ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪತಾಕೆಯನ್ನು ಹಾರಿಸುತ್ತಿರೋ ಈ ಬಾಲಕಿ ರಾಷ್ಟ್ರಮಟ್ಟದಲ್ಲೂ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಳ್ಳಲಿ ಎನ್ನೋದು ಎಲ್ಲರ ಆಶಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.