ಭಟ್ಕಳ: ಕೋವಿಡ್ ಸೋಂಕಿತರನ್ನು ಚಿಕಿತ್ಸೆಗಾಗಿ ಜನನಿಬಿಡ ಪ್ರದೇಶವಾದ ಸೋನಾರಕೇರಿ ಸರ್ಕಾರಿ ಹಾಸ್ಟೆಲ್‌ನಲ್ಲಿ ಇರಿಸದಂತೆ ಸ್ಥಳೀಯರು ಭಟ್ಕಳ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ವಿ.ಟಿ. ರಸ್ತೆ ಸೋನಾರಕೇರಿಯಲ್ಲಿ ಇರುವ ಸರ್ಕಾರಿ ಹಾಸ್ಟೆಲ್, ಭಟ್ಕಳದ ಮಧ್ಯ ಭಾಗದಲ್ಲಿದೆ. ಸುತ್ತಲೂ ಶಾಲೆ, ಅಂಗಡಿ ಮಳಿಗೆಗಳು, ಬ್ಯಾಂಕ್, ಸರ್ಕಾರಿ ಕಚೇರಿ, ಮನೆಗಳಿದ್ದು ವ್ಯಾಪಕ ಸಾರ್ವಜನಿಕ ಓಡಾಟವಿದೆ. ಕೋವಿಡ್ ಸೋಂಕಿತರನ್ನು ಹಾಸ್ಟೆಲ್‌ನಲ್ಲಿ ಇರಿಸುವುದರಿಂದ ಸ್ಥಳೀಯರಿಗೆ ತೊಂದರೆ ಆಗಲಿದೆ. ಜನನಿಬಿಡ ಪ್ರದೇಶದಲ್ಲಿರುವ ಹಾಸ್ಟೆಲ್‌ನಲ್ಲಿ ಚಿಕಿತ್ಸೆ ನೀಡುವ ಬದಲು ದೂರದ ಯಾವುದಾರೂ ಕಟ್ಟಡದಲ್ಲಿಟ್ಟು ಚಿಕಿತ್ಸೆ ನೀಡಬೇಕೆಂದು ಕೋರಿದ್ದಾರೆ.