ಕಾರವಾರ:ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಕಾಲುಜಾರಿ ಬಿದ್ದು ರೈಲ್ವೆ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಕಾರವಾರ ತಾಲೂಕಿನ ಶಿರವಾಡದ ರೈಲು ನಿಲ್ದಾಣದಲ್ಲಿ ನಡೆದಿದೆ.
ಕುಮಟಾ ಬರ್ಗಿಯ ಸೂರ್ಯಶೇಖರ್ ಕಾರಂತ ಮೃತಪಟ್ಟ ರೈಲ್ವೆ ಸಿಬ್ಬಂದಿ. ಶಿರವಾಡ ರೈಲ್ವೆ ನಿಲ್ದಾಣದಿಂದ ಹೊರಟಿದ್ದ ಕಾರವಾರ– ಬೆಂಗಳೂರು ರೈಲು ಚಲಿಸುತ್ತಿದ್ದ ವೇಳೆ ಓಡಿ ಹೋಗಿ ಹತ್ತಲು ಪ್ರಯತ್ನಿಸಿದಾಗ ಆಯತಪ್ಪಿ ರೈಲಿನಡಿ ಬಿದ್ದಿದ್ದರು.
ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.