ETV Bharat / state

ಕಾರವಾರ: ಸಮುದ್ರಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ

ಶಿವರಾತ್ರಿ ಪ್ರಯುಕ್ತ ಗೋಕರ್ಣಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ಮೂಲದ ನಾಲ್ವರು ಪ್ರವಾಸಿಗರು ಸಮುದ್ರ ಸ್ನಾನಕ್ಕೆ ಇಳಿದು ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಲೈಫ್ ಗಾರ್ಡ್ ಸಿಬ್ಬಂದಿ, ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.

Protection of four tourists in gokarna
ಸಮುದ್ರ ಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ
author img

By

Published : Mar 11, 2021, 3:16 PM IST

ಕಾರವಾರ (ಉತ್ತರಕನ್ನಡ): ಶಿವರಾತ್ರಿಯ ನಿಮಿತ್ತ ಸಮುದ್ರ ಸ್ನಾನಕ್ಕೆ ಇಳಿದು ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.

ಶಿವರಾತ್ರಿ ಪ್ರಯುಕ್ತ ಗೋಕರ್ಣಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ಮೂಲದ 15 ಪ್ರವಾಸಿಗರು, ಶಿವನ ದರ್ಶನಕ್ಕೂ ಮೊದಲು ಸಮುದ್ರ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ನೀರಿನಲ್ಲಿ ಈಜಾಡುತ್ತಿರುವಾಗ ಭೂಪೇಂದ್ರ ಸಿಂಗ್ (48), ಶಿವಸಿಂಗ್ ರಜಪೂತ್ (52), ಯುವರಾಜ್ (45), ಯೋಗೇಂದ್ರ ರಜಪೂತ್ (38) ಎಂಬುವವರು ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು.

ಓದಿ: ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿ‌ಗೆ ಕೊಡಬೇಕು: ಶ್ರೀಮಂತ ಪಾಟೀಲ

ತಕ್ಷಣ ಈ ಬಗ್ಗೆ ತಿಳಿದ ಲೈಫ್ ಗಾರ್ಡ್​ಗಳಾದ ರಾಜು ಅಂಬಿಗ, ಮಾರುತಿ ವಿಶ್ವಾಸ್, ಶೇಖರ್ ಎಂಬುವವರು ನಾಲ್ವರನ್ನೂ ರಕ್ಷಣೆ ಮಾಡಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.