ETV Bharat / state

ಬಿಜೆಪಿ ಲೂಟಿ ತಡೆದು ನಿಮ್ಮ ಸಂಪತ್ತನ್ನು ನೀವೇ ಬಳಸಲು ಬದಲಾವಣೆ ತನ್ನಿ: ಪ್ರಿಯಾಂಕಾ ಗಾಂಧಿ - election news

ಕಾಂಗ್ರೆಸ್​​​ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಂದು ದಾಂಡೇಲಿಯಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಪರ ಮತಯಾಚಿಸಿದರು.

priyanka-gandi-campaigned-for-congress-candidate-in-uttara-kannada
ಬಿಜೆಪಿ ಲೂಟಿ ತಡೆದು ನಿಮ್ಮ ಸಂಪತ್ತನ್ನು ನೀವೇ ಬಳಸಲು ಬದಲಾವಣೆ ತನ್ನಿ: ಪ್ರಿಯಾಂಕ ಗಾಂಧಿ
author img

By

Published : Apr 29, 2023, 10:56 PM IST

Updated : Apr 30, 2023, 4:01 PM IST

ಬಿಜೆಪಿ ಲೂಟಿ ತಡೆದು ನಿಮ್ಮ ಸಂಪತ್ತನ್ನು ನೀವೇ ಬಳಸಲು ಬದಲಾವಣೆ ತನ್ನಿ: ಪ್ರಿಯಾಂಕಾ ಗಾಂಧಿ

ಕಾರವಾರ (ಉತ್ತರ ಕನ್ನಡ): ಬಿಜೆಪಿ ಲೂಟಿಯನ್ನು ತಡೆದು ನಿಮ್ಮ ಸಂಪತ್ತನ್ನು ನೀವೇ ಬಳಸಿಕೊಳ್ಳುವಂತಾಗಲು ರಾಜ್ಯದಲ್ಲಿ ಸರ್ಕಾರ ಬದಲಾಯಿಸಬೇಕಿದೆ ಎಂದು ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು. ದಾಂಡೇಲಿಯ ಡಿಎಫ್‌ಎ ಮೈದಾನದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯವನ್ನು ಸಧೃಡಗೊಳಿಸಲು ಬದಲಾವಣೆ ಅವಶ್ಯಕವಾಗಿದೆ. ಯಾವ ಪಕ್ಷ ಜನಪರವಾಗಿದೆ, ಯಾವುದು ವಿರುದ್ಧವಾಗಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಮತಹಾಕುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದ ಅವರು ದಾಂಡೇಲಿ ಇದು ಮಿನಿ ಇಂಡಿಯಾ ಆಗಿದೆ. ಇಲ್ಲಿ ಎಲ್ಲ ಎಲ್ಲಾ ಸಮುದಾಯದ ಜನ ಒಗ್ಗಟ್ಟಾಗಿ ಬಾಳುತ್ತಿರುವುದಕ್ಕೆ ಸಂತೋಷವಿದೆ. ಬಿಜೆಪಿಯವರು ಚುನಾವಣೆಯಲ್ಲಿ ಜನರ ದಾರಿ ತಪ್ಪಿಸಿ ಯಾವ ವಿಷಯ ಮುನ್ನೆಲೆಗೆ ತರಬೇಕು ಎಂಬುದನ್ನು ಕಾಯುತ್ತಿರುತ್ತಾರೆ. ಆದರೆ ಜನರಿಗೆ ಯಾರು ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಯಾರು ಸ್ವಾರ್ಥಕ್ಕಾಗಿ ಮಾತನಾಡ್ತಾರೆ ಎಂಬುದು ತಿಳಿದಿದೆ ಎಂದು ಹೇಳಿದರು.

ರಾಜ್ಯದ ಆಡಳಿತ ಚುಕ್ಕಾಣಿ ನಮಗೆ ನೀಡಿ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಕಳೆದ ಮೂರುವರೆ ವರ್ಷದಿಂದ ರಾಜ್ಯದಲ್ಲಿ ಯಾರ ಸರಕಾರವಿತ್ತು..? ಇಂದು ಆಹಾರ, ಶಿಕ್ಷಣ ಪ್ರತಿಯೊಂದರ ಬೆಲೆ ಗಗನಕ್ಕೇರಿದೆ. ಸರ್ಕಾರಿ ಕಚೇರಿಗಳಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಇಂದಿಗೂ ಖಾಲಿಯಾಗಿವೆ. ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಬೆಳೆದ ಬೆಳೆಗಳಿಗೂ ಜಿಎಸ್‌ಟಿ ಹಾಕಲಾಗುತ್ತಿದೆ. ಬೇಕಾದ ಕೆಲವೆಡೆ ಆಸ್ಪತ್ರೆಗಳೆ ಇಲ್ಲ. ಕಾಂಗ್ರೆಸ್ ಸರ್ಕಾರ ಜನರಿಗೆ ಉಚಿತ ಅಕ್ಕಿ ನೀಡುವ ಯೋಜನೆ ಪ್ರಾರಂಭಿಸಿದ್ದರೇ ಇದೀಗ ಕನಿಷ್ಠ ಗುಣಮಟ್ಟದ ಅಕ್ಕಿ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಇಂದು 40 ಪರ್ಸಂಟ್ ಸರ್ಕಾರವಿದ್ದು, ಜನರನ್ನು ಲೂಟಿ ಮಾಡುತ್ತಿದೆ. ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದೆ. ನಾವು ಭ್ರಷ್ಟಾಚಾರ, ಲೂಟಿ ಓಪನ್ ಆಗಿಯೇ ನಡೆಸುವುದಾಗಿ ಬಿಜೆಪಿ ಮುಖಂಡರು ಹೇಳುತ್ತಾರೆ. ಆದರೆ ಬಿಜೆಪಿಯವರು ಲೂಟಿ ಮಾಡಿದ ಹಣದಿಂದಲೇ ಅದೆಷ್ಟೋ ರಸ್ತೆ, ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ನಿರ್ಮಾಣ ಮಾಡಬಹುದಿತ್ತು ಎಂದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇಂದಿಗೂ ಅದೆಷ್ಟೋ ಹಿರಿಯರೂ ಭೇಟಿಯಾದಾಗ ಇದನ್ನೆ ನೆನೆಪು ಮಾಡಿಕೊಳ್ಳುತ್ತಾರೆ. ನಾನು ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತೇನೆ. ನನ್ನಂತೆ ಜನಸಾಮಾನ್ಯರು ಕೂಡಾ ಯೋಚನೆ ಮಾಡುತ್ತಾರೆ. ಆದ್ದರಿಂದ ಪ್ರಸ್ತುತ ಚುನಾವಣೆಯಲ್ಲಿ ಯಾರಿಂದ ಬೆಲೆ ಏರಿಕೆ, ಭ್ರಷ್ಟಾಚಾರ ಕಡಿಮೆಯಾಗುತ್ತದೆ, ಉದ್ಯೋಗ, ಭವಿಷ್ಯ ದೊರೆಯುತ್ತದೆ ಎಂದು ನಿರ್ಧರಿಸಿ ಮತ ಚಲಾಯಿಸುವಂತೆ ಮನವಿ ಮಾಡಿದರು.

ನಾರಾಯಣ ಗುರು, ಬಸವಣ್ಣ ಹುಟ್ಟಿದ ನಾಡಿನ ಜನರು ಸತ್ಯದ ಮಾರ್ಗದಲ್ಲಿ ಸಾಗಿ, ನೈಜತೆ ಅರಿತುಕೊಳ್ಳಬೇಕಿದೆ. ನಮ್ಮನ್ನು ಸಂಘರ್ಷಕ್ಕೆ ತಳ್ಳಿ ಇನ್ನೊಬ್ಬರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಮಹಿಳೆಯರಿಗಾಗಿ 24 ಯೋಜನೆಯ ಆಶ್ವಾಸನೆ ನೀಡಿತ್ತು. ಆದರೆ ಕೇವಲ 2 ಮಾತ್ರ ಜಾರಿಗೊಳಿಸಿದೆ ಎಂದು ಹೇಳಿದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಹಳಿಯಾಳದಲ್ಲಿ ಆರ್.ವಿ.ದೇಶಪಾಂಡೆ ಗೆಲ್ಲಿಸುವಂತೆ ಮತಯಾಚನೆ ನಡೆಸಿದರು.

ಇದನ್ನೂ ಓದಿ: ಆಡಿಯೋ ವೈರಲ್​ ಕೇಸ್​ : ಅಕ್ರಮಗಳ ವಿರುದ್ಧ ಕ್ರಮಕೈಗೊಳ್ಳಲು ಚುನಾವಣಾ ಆಯೋಗ ಸೂಚನೆ

Last Updated : Apr 30, 2023, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.