ಶಿರಸಿ : 5.06 ಕೋಟಿ ರೂ. ವೆಚ್ಚದಲ್ಲಿ ಶಿರಸಿಯಲ್ಲಿ ನಿರ್ಮಾಣವಾಗಿ ಬಹುದಿನಗಳಿಂದ ಉದ್ಘಾಟನೆಗೆ ಕಾಯುತ್ತಿದ್ದ ಪೊಲೀಸ್ ಸಿಬ್ಬಂದಿ ವಸತಿ ಕಟ್ಟಡಗಳು ಕೊನೆಗೂ ಸಿಬ್ಬಂದಿಗೆ ಹಂಚಿಕೆಯಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ನಿಗಮದ ವತಿಯಿಂದ ಇಲ್ಲಿನ ಝೂ ಸರ್ಕಲ್ ಬಳಿ ನಿರ್ಮಾಣವಾಗಿದ್ದ ಶಿರಸಿ ವ್ಯಾಪ್ತಿಯ ಪೊಲೀಸರ ವಸತಿ ಕಟ್ಟಡ ಈಗ 24 ಪೊಲೀಸ್ ಕಾನ್ಸ್ಟೇಬಲ್ಗಳು ಹಾಗೂ 2 ಪಿಎಸ್ಐಗಳಿಗೆ ಲಭ್ಯವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಮನೆಗಳನ್ನು ಹಂಚಿಕೆ ಮಾಡಿ, ಸರಳವಾಗಿ ಗೃಹ ಪ್ರವೇಶ ಮಾಡಲಾಗಿದೆ.
ಡಿಎಸ್ಪಿ ನೇತೃತ್ವದಲ್ಲಿ ಗೃಹ ಹಂಚಿಕೆ ಕಾರ್ಯ ನಡೆದಿದ್ದು, ಶಿರಸಿ ನಗರದ ಮಾರುಕಟ್ಟೆ, ನಗರ ಹಾಗೂ ಗ್ರಾಮೀಣ ಠಾಣೆಗಳಿಗೆ ತಲಾ 8 ಮನೆಗಳಂತೆ 24 ಮನೆಗಳನ್ನು ಹಂಚಿಕೆ ಮಾಡಲಾಗಿದೆ.