ETV Bharat / state

ಭಟ್ಕಳದ Aadhaar, ಬೆಂಗಳೂರು ರೇಷನ್​ ಕಾರ್ಡ್​, ಹೈದರಾಬಾದ್​ನ Voter ID.. ಬಗೆದಷ್ಟು ರೋಚಕ ಪಾಕ್​ ಮಹಿಳೆಯ ಕಥೆ! - ಬಂಧಿತ ಪಾಕಿಸ್ತಾನಿ ಮಹಿಳೆ

ಭಟ್ಕಳದಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ತಾನ ಮೂಲದ ಮಹಿಳೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ತನಿಖೆ ವೇಳೆ ಪೊಲೀಸರೇ ಆಶ್ಚರ್ಯಪಡುವಂತಹ ಕೆಲವೊಂದು ವಿಷಯಗಳು ಬೆಳಕಿಗೆ ಬಂದಿವೆ.

Bhatkal illegal Pakistani woman
ಪಾಕಿಸ್ತಾನ ಮಹಿಳೆ ಅಕ್ರಮ ವಾಸ
author img

By

Published : Jul 5, 2021, 10:52 AM IST

Updated : Jul 5, 2021, 11:32 AM IST

ಭಟ್ಕಳ(ಉತ್ತರ ಕನ್ನಡ): ಭಾರತದ ಪೌರತ್ವದ ಇಲ್ಲದೆ ಅಕ್ರಮವಾಗಿ ಭಟ್ಕಳದಲ್ಲಿ ವಾಸವಾಗಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಇತ್ತೀಚೆಗೆ ಪತ್ತೆ ಹಚ್ಚಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಮಹಿಳೆಗೆ ನಕಲಿ ದಾಖಲೆಗಳನ್ನು ಮಾಡಿಕೊಟ್ಟವರ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.

ಭಟ್ಕಳದ ನವಾಯತ್ ಕಾಲೋನಿಯಲ್ಲಿ 2015 ರಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ ( 32 ವರ್ಷ) ಅನ್ನು ಪೊಲೀಸರು ಜೂನ್ 9 ರಂದು ಬಂಧಿಸಿದ್ದರು. ಪಾಕಿಸ್ತಾನದ ಪೌರತ್ವ ಹೊಂದಿದ್ದ ಈಕೆ, ಕಳ್ಳ ಮಾರ್ಗದ ಮೂಲಕ ಭಟ್ಕಳಕ್ಕೆ ಆಗಮಿಸಿ ವಾಸವಾಗಿದ್ದಳು ಎನ್ನಲಾಗ್ತಿದೆ.

Police investigating Bhatkal Pakistani woman case
ಬಂಧಿತ ಮಹಿಳೆ

ನವಾಯತ್ ಕಾಲೋನಿಯ ಜಾವೀದ್ ಮೊಹಿದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿದ್ದ ಈಕೆ, 2014ರಲ್ಲಿ 3 ತಿಂಗಳು ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದು ಹಿಂತಿರುಗಿದ್ದಳು. ಪುನಃ 2016ರ ಆರಂಭದಲ್ಲಿ ಕಳ್ಳ ಮಾರ್ಗವಾಗಿ ಭಾರತಕ್ಕೆ ನುಸುಳಿ ಬಂದು ತನ್ನ ಗಂಡನ ಮನೆಯಾದ ನವಾಯತ್​ ಕಾಲೋನಿಯಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.

ಈಕೆ ಸುಳ್ಳು ದಾಖಲೆಗಳನ್ನು ನೀಡಿ ಸ್ಥಳೀಯ ಸಂಸ್ಥೆಗಳಿಂದ ರೇಷನ್ ಕಾರ್ಡ್, ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಳು ಎಂಬುದು ಪೊಲೀಸ್ ದಾಳಿಯ ವೇಳೆ ತಿಳಿದು ಬಂದಿತ್ತು. ನಕಲಿ ದಾಖಲೆಗಳ ಸಮೇತ ಮಹಿಳೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೂ ಹಾಜರುಪಡಿಸಿದ್ದರು. ಸದ್ಯ, ಮಹಿಳೆ ನ್ಯಾಯಾಂಗ ಬಂಧನದಲ್ಲಿ ಇದ್ದಾಳೆ.

ಮೂರು ದಾಖಲೆಗೆ ಮೂರು ವಿಳಾಸ!

ಪ್ರಕರಣದಲ್ಲಿ, ಭಾರತದ ಪೌರತ್ವ ಪಡೆಯದಿದ್ದರೂ ಮಹಿಳೆ ಹೇಗೆ ಪ್ರಮುಖ ದಾಖಲೆಗಳನ್ನು ಪಡೆದುಕೊಂಡಳು ಎಂಬ ಬಗ್ಗೆ ತನಿಖೆಗೆ ಇಳಿದ ಪೊಲೀಸರಿಗೆ ಸಾಕಷ್ಟು ಅಚ್ಚರಿದಾಯಕ ಸಂಗತಿಗಳು ಗೊತ್ತಾಗಿವೆ. ಮಹಿಳೆ ಬಳಿ ಇದ್ದ ಆಧಾರ್ ಕಾರ್ಡ್​ನಲ್ಲಿ ಭಟ್ಕಳದ ವಿಳಾಸವಿದ್ದರೆ, ಚುನಾವಣಾ ಗುರುತಿನ ಚೀಟಿಯಲ್ಲಿ ಹೈದರಾಬಾದ್​ನ ವಿಳಾಸದವಿದೆ. ರೇಷನ್ ಕಾರ್ಡ್​ನಲ್ಲಿ ಬೆಂಗಳೂರಿನ ವಿಳಾಸ ಇರೋದು ಪೊಲೀಸರಿಗೆ ದಿಗಿಲು ಬಡಿಸಿದೆ.

ಪೌರತ್ವ ಇಲ್ಲದೆ ದಾಖಲೆ ಹೇಗೆ ಸಿಕ್ತು?

ಅಧಿಕಾರಿಗಳ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಬೇರೆ ಬೇರೆ ಕಡೆಗಳ ವಿಳಾಸ ನೀಡಿ ಈಕೆಗೆ ದಾಖಲೆಗಳನ್ನು ಮಾಡಿಕೊಳ್ಳಲಾಗಿದೆ. ಪೌರತ್ವ ಇಲ್ಲದಿದ್ದರೂ ಮೂರೂ ಪ್ರಮುಖ ದಾಖಲೆಗಳನ್ನು ಹೇಗೆ ಮಾಡಿಕೊಡಲಾಯಿತು ಎಂಬ ಪ್ರಶ್ನೆ ಕಾಡತೊಡಗಿದೆ. ಹೀಗಾಗಿ, ಇದರ ಹಿಂದೆ ವ್ಯವಸ್ಥಿತ ಜಾಲವೊಂದು ಕಾರ್ಯನಿರ್ವಹಿಸುತ್ತಿದೆಯೇ? ಎನ್ನುವ ಬಗ್ಗೆ ಪೊಲೀಸರು ತನಿಖೆಗೆ ಇಳಿದಿದ್ದಾರೆ.

ಮೂರೂ ದಾಖಲೆಗಳು ಬೇರೆ ಬೇರೆ ವಿಳಾಸದಲ್ಲಿ ಇರಲು ಕಾರಣವಾದರೂ ಏನು? ಎಂಬ ವಿಚಾರದ ಬಗ್ಗೆಯೂ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ತಾಲೂಕಿನ ಅನೇಕರನ್ನು ಈ ಸಂಬಂಧ ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಎಸ್ಪಿ

ಪಾಕಿಸ್ತಾನಿ ಮಹಿಳೆಗೆ ದಾಖಲೆಗಳನ್ನು ಸೃಷ್ಟಿ ಮಾಡಿಕೊಟ್ಟ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

ದೇಶದ ಪೌರತ್ವ ಪಡೆಯದೆ ಅಕ್ರಮವಾಗಿ ಪಾಕಿಸ್ತಾನಿ ಮಹಿಳೆ ವಾಸವಿದ್ದ ಪ್ರಕರಣವನ್ನು ಜಿಲ್ಲಾ ಪೊಲೀಸರು ಬೇಧಿಸಿದ ನಂತರ, ಮಹಿಳೆ ಬಳಿ ಇದ್ದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಮೂರು ಕಡೆ ದಾಖಲೆಗಳನ್ನ ಮಾಡಿಕೊಂಡಿರುವುದು ತಿಳಿದು ಬಂದಿದೆ. ದಾಖಲೆಗಳನ್ನು ಸ್ಥಳೀಯವಾಗಿ ಮಾಡಿಕೊಟ್ಟವರು ಯಾರು ಎನ್ನುವುದರ ಬಗ್ಗೆ ತನಿಖೆ ನಡೆದಿದ್ದು, ಇದೊಂದು ಕ್ರಿಮಿನಲ್ ಅಪರಾಧವಾಗಿದೆ ಎಂದಿದ್ದಾರೆ.

ದೇಶದ ಭದ್ರತೆಯ ನಿಟ್ಟಿನಲ್ಲಿ ಈ ಪ್ರಕರಣ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಶೀಘ್ರದಲ್ಲಿಯೇ ಅಕ್ರಮವಾಗಿ ದಾಖಲೆಗಳನ್ನು ಮಾಡಿಕೊಟ್ಟವರನ್ನು ವಶಕ್ಕೆ ಪಡೆಯಲಿದ್ದೇವೆ ಎಂದು ಎಸ್ಪಿ ತಿಳಿಸಿದ್ದಾರೆ.

Last Updated : Jul 5, 2021, 11:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.