ETV Bharat / state

ಅಪ್ರಾಪ್ತೆ ಅಪಹರಿಸಿ ಲೈಂಗಿಕ ಕಿರುಕುಳ: ವಿಜಯಪುರ ಮೂಲದ ಆರೋಪಿ ಬಂಧನ - ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ

ಸಾಮಾಜಿಕ ಜಾಲತಾಣವೊಂದರಲ್ಲಿ ಬಾಲಕಿಯ ಪರಿಚಯ ಮಾಡಿಕೊಂಡಿದ್ದ ಶಶಿಕುಮಾರ ಬಾಲಕಿಯ ಸ್ನೇಹ ಸಂಪಾದಿಸಿದ್ದ. ನಂತರ ಬಾಲಕಿಯನ್ನು ಪುಸಲಾಯಿಸಿ ಮುರ್ಡೇಶ್ವರದಿಂದ ಅಪಹರಣ ಮಾಡಿದ್ದ. ತನ್ನ ಮಾವನ ಮನೆಗೆ ಕರೆದೊಯ್ದು ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

police-have-detained-a-man-accused-of-sexually-assaulting-miner
ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ಆರೋಪಿ
author img

By

Published : Feb 6, 2021, 3:13 PM IST

ಭಟ್ಕಳ (ಉ.ಕ): ಅಪ್ರಾಪ್ತೆಯೋರ್ವಳನ್ನು ಪುಸಲಾಯಿಸಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವ್ಯಕ್ತಿಯೋರ್ವನನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರದ ವೀರಭದ್ರೇಶ್ವರ ನಗರ ನಿವಾಸಿ ಶಶಿಕುಮಾರ್ ಮೇತ್ರಿ ಬಂಧಿತ ಆರೋಪಿಯಾಗಿದ್ದಾನೆ.

ಸಾಮಾಜಿಕ ಜಾಲತಾಣವೊಂದರಲ್ಲಿ ಬಾಲಕಿಯ ಪರಿಚಯ ಮಾಡಿಕೊಂಡಿದ್ದ ಶಶಿಕುಮಾರ್​ ಬಾಲಕಿಯ ಸ್ನೇಹ ಸಂಪಾದಿಸಿದ್ದ. ನಂತರ ಬಾಲಕಿಯನ್ನು ಪುಸಲಾಯಿಸಿ ಮುರ್ಡೇಶ್ವರದಿಂದ ಅಪಹರಣ ಮಾಡಿದ್ದ. ತನ್ನ ಮಾವನ ಮನೆಗೆ ಕರೆದೊಯ್ದು ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ನೊಂದ ಬಾಲಕಿ ಫೆ.3ರಂದು ಖುದ್ದಾಗಿ ಠಾಣೆಗೆ ಬಂದು ಆರೋಪಿ ಶಶಿಕುಮಾರ್ ಮೇತ್ರಿ ವಿರುದ್ಧ ದೂರು ನೀಡಿದ್ದಳು. ತನ್ನನ್ನು ಬಲವಂತವಾಗಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಳು.

ಅಪಹರಣದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ವಿಜಯಪುರದಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇದನ್ನೂ ಓದಿ: ಭಟ್ಕಳ; ಕರ್ತವ್ಯನಿರತ ಕಾನ್ಸ್​ಟೇಬಲ್ ಮೇಲೆ ಐವರಿಂದ‌ ಹಲ್ಲೆ: ಮೂವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.