ಕಾರವಾರ: ಮಾಸ್ಕ್ ಧರಿಸದೆ ಆಹ್ವಾನ ಪತ್ರಿಕೆ ಹಿಡಿದು ಮದುವೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವನಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಎಚ್ಚರಿಸಿದ ಘಟನೆ ಕಾರವಾರದ ಸುಭಾಷ್ ಸರ್ಕಲ್ನಲ್ಲಿ ನಡೆದಿದೆ.
ವೀಕೆಂಡ್ ಕರ್ಫ್ಯೂ ಹಿನ್ನೆಲೆ ನಗರವೇ ಸ್ತಬ್ಧಗೊಂಡಿರುವ ವೇಳೆ ಮದುವೆ ಆಹ್ವಾನ ಪತ್ರಿಕೆ ಹಿಡಿದು ಮದುವೆಗೆ ತೆರಳುತ್ತಿರುವುದಾಗಿ ವ್ಯಕ್ತಿಯೋರ್ವ ಪೊಲೀಸರ ಎದುರು ಆಗಮಿಸಿದ್ದ. ಈ ವೇಳೆ ಪೊಲೀಸರು ತಡೆದು ವಿಚಾರಿಸಿದಾಗ ಮದುವೆಗೆ ತೆರಳುತ್ತಿರುವುದಾಗಿ ಕಾರ್ಡ್ ತೋರಿಸಿದ್ದ.
ಪೊಲೀಸರು ಮಾಸ್ಕ್ ಎಲ್ಲಿ ಎಂದು ಕೇಳಿದಾಗ ಕಥೆ ಹೇಳಲು ಪ್ರಾರಂಭಿಸಿದ್ದರಿಂದ ಲಾಠಿ ಎತ್ತಿದ್ದಾರೆ. ಅಲ್ಲದೆ ಮಾಸ್ಕ್ ಧರಿಸುವಂತೆ ಸೂಚಿಸಿ ಲಾಠಿ ಬೀಸಿದ್ದಾರೆ. ಇದರಿಂದ ಹೆದರಿದ ವ್ಯಕ್ತಿ ಅಲ್ಲಿಂದ ವಾಪಸ್ ತೆರಳಿದ್ದಾನೆ.