ಕಾರವಾರ: 8 ವರ್ಷಗಳ ಹಿಂದೆ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸ್ವತ್ತು ಸಹಿತ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.
ತಾಲೂಕಿನ ಕಾಸರಕೋಡ ರೋಷನ್ ಮೊಹಲ್ಲಾದ ವೆಂಕಟೇಶ್ ಶಾನಬಾಗ್ ಎಂಬುವರ ಮನೆಯಲ್ಲಿ 2012 ರಲ್ಲಿ ಕಳ್ಳತನವಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಭಟ್ಕಳ ಮೂಲದ ಹಾಲಿ ಹಾನಗಲ್ ನಿವಾಸಿಯಾಗಿದ್ದ ಆರೋಪಿ ಮಕ್ಬೂಲ್ ಅಹ್ಮದ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಜೊತೆಗೆ ಆರೋಪಿಯಿಂದ ಸುಮಾರು ರೂ.60 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಬೇಧಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ ಹಾಗೂ ಡಿವೈಎಸ್ಪಿ ಡಾ.ಶಿವಾನಂದ ಚಲವಾದಿ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀಧರ ಎಸ್.ಆರ್ ನೇತೃತ್ವದಲ್ಲಿ ಅಪರಾಧ ವಿಭಾಗದ ಪಿಎಸ್ಐ ಸಾವಿತ್ರಿ ನಾಯಕ, ಸಿಬ್ಬಂದಿ ಕೃಷ್ಣ ಗೌಡ, ರಮೇಶ ಲಮಾಣಿ, ಮಹಾವೀರ, ಉದಯ ಮಗದೂರ್, ರಯೀಸ್ ಭಗವಾನ್, ಅನಿಲ ಲಮಾಣಿ ಹಾಗೂ ಜಿಲ್ಲಾ ವೈಜ್ಞಾನಿಕ ನೆರವು ಘಟಕದ ಎ.ಎಸ್.ಐ ರಾಮಚಂದ್ರ ಹೆಗಡೆ, ಸಿ.ಹೆಚ್.ಸಿ ರಮೇಶ ಬೋರ್ಕರ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.