ETV Bharat / state

ಪತ್ನಿ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ ಪತಿ: ಕೊಲೆಗಾರನ ಬಂಧಿಸಿದ ಪೊಲೀಸರು

author img

By

Published : Apr 22, 2021, 10:42 PM IST

ಪತ್ನಿಯನ್ನು ಕೊಲೆ ಮಾಡಿ ಆಕೆ ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟಿದ್ದ ಆರೋಪಿಯನ್ನು ಕಾರವಾರದ ಪೊಲೀಸರು ಬಂಧಿಸಿದ್ದಾರೆ.

police-arrested-a-accused-who-came-to-the-police-station-and-plotted-a-suicide-story
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

ಕಾರವಾರ: ಪತ್ನಿಯ ಕುತ್ತಿಗೆಗೆ ಟವೆಲ್ ಬಿಗಿದು ಕೊಲೆ ಮಾಡಿ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ಕಥೆ ಕಟ್ಟಿದ್ದ ಪತಿಯಿಂದಲೇ ಪೊಲೀಸರು ಸತ್ಯ ಬಾಯ್ಬಿಡಿಸಿರುವ ಘಟನೆ ಕುಮಟಾದಲ್ಲಿ ನಡೆದಿದೆ.

ತಾಲೂಕಿನ ಕತಗಾಲದ ಉಪ್ಪಿನಪಟ್ಟಣದಲ್ಲಿ ಮಂಜುನಾಥ ಶಾನಭಾಗ ತನ್ನ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿದ್ದ. ಆತನ ಮಗಳು ಅನಾರೋಗ್ಯಕ್ಕೆ ಒಳಗಾಗಿದ್ದಳು.‌ ಆಪರೇಶನ್ ಸಂಬಂಧ ಪತಿ-ಪತ್ನಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗ್ತಿದೆ. ಇದೇ ರೀತಿ ಮಂಗಳವಾರ(20)ದ ರಾತ್ರಿಯೂ ಜಗಳವಾಗಿ ಸಿಟ್ಟಿಗೆದ್ದ ಪತಿ ಮಂಜುನಾಥ ತನ್ನ ಪತ್ನಿ ಮಮತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಪೊಲೀಸ್ ಠಾಣೆಗೆ ಬಂದು ಆತ್ಮಹತ್ಯೆ ಕಥೆ ಕಟ್ಟಿದ ಪತಿಯನ್ನೇ ಬಂಧಿಸಿದ ಪೊಲೀಸರು

ಈ ವಿಷಯ ಬೆಳಕಿಗೆ ಬರದಂತೆ ಮಾಡಲು ಕುತ್ತಿಗೆಗೆ ಟವೆಲ್ ಕಟ್ಟಿ, ನೇಣು ಹಾಕಿಕೊಂಡಿದ್ದಾಳೆ ಎಂದು ಸುದ್ದಿ ಹರಡಿದ್ದಾನೆ. ಅಲ್ಲದೆ ಈ ಬಗ್ಗೆ ಪೊಲೀಸ್ ಠಾಣೆಗೂ ತೆರಳಿ ಪತ್ನಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ.

ದೂರು ದಾಖಲಿಸಿದ ನಂತರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದ ಪೊಲೀಸರು ಅನುಮಾನಗೊಂಡು ಸ್ಥಳೀಯರನ್ನು ವಿಚಾರಿಸಿದ್ದಾರೆ. ಕೊನೆಗೆ ಮೃತದೇಹದಲ್ಲಿನ ಗುರುತುಗಳಿಂದ ಪತಿಯ ಬಗ್ಗೆ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇದಾದ ನಂತರ ಆರೋಪಿಯನ್ನು ಬಂಧಿಸಿದ್ದಾರೆ.

ಸ್ಥಳಕ್ಕೆ ಕುಮಟಾ ಸಿಪಿಐ ಶಿವಪ್ರಕಾಶ ನಾಯ್ಕ, ಪಿಎಸ್​ಐ ಆನಂದಮೂರ್ತಿ, ರವಿ ಗುಡ್ಡಿ, ಸುಧಾ ಅಘನಾಶಿನಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಓದಿ: 400 ಕೋಟಿ ರೂ. ವೆಚ್ಚದಲ್ಲಿ ಕೋಟಿ ಲಸಿಕೆ ಖರೀದಿಗೆ ಸಿಎಂ ಅನುಮೋದನೆ!​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.