ಕಾರವಾರ: ರಸ್ತೆ ವ್ಯವಸ್ಥೆ ಇಲ್ಲದ್ದರಿಂದ ರೋಗಿಯನ್ನು 5 ಕಿಲೋ ಮೀಟರ್ ದೂರ ಜೋಲಿಯಲ್ಲೇ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ.
ಇದನ್ನೂ ಓದಿ: ಬೈಕ್ಗೆ ಬಿಎಂಟಿಸಿ ಬಸ್ ಡಿಕ್ಕಿ: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಹೆಡ್ ಕಾನ್ಸ್ಟೇಬಲ್ ಬಲಿ
ವರೀಲಬೇಣಾ ಗ್ರಾಮದ ನೂರಾ ಪೊಕ್ಕ ಗೌಡ(70) ಎಂಬುವವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಬೇಕಾಗಿತ್ತು. ವರೀಲಬೇಣಾ ಕುಗ್ರಾಮವಾಗಿದ್ದು ರಸ್ತೆ ಸಂಪರ್ಕ ಸರಿಯಾಗಿಲ್ಲ. ಹೀಗಾಗಿ, 5 ಕಿ.ಮೀ ದೂರದ ಅಂಕೋಲಾ ಪಟ್ಟಣಕ್ಕೆ ರೋಗಿಯನ್ನು ಜೋಲಿಯಲ್ಲಿ ಕೂರಿಸಿ ಕಾಡಿನ ದಟ್ಟ ಹಾದಿಯಲ್ಲಿ ಕುಟುಂಬದವರು ಕರೆತರಬೇಕಾಯಿತು.
ಗುಡ್ಡಗಾಡು ಪ್ರದೇಶವಾದ್ದರಿಂದ ಇಲ್ಲಿಗೆ ಆಂಬ್ಯುಲೆನ್ಸ್ ಬರುವುದು ಸಾಧ್ಯವಿಲ್ಲ. ಹೀಗಾಗಿ ಹೊತ್ತೊಯ್ದೇ ಸಾಗಬೇಕಾದ ಅನಿವಾರ್ಯತೆ ಇತ್ತು. ಜಿಲ್ಲೆಯ ಹಲವು ಭಾಗದಲ್ಲಿ ನಗರ ಸಮೀಪವಿದ್ದರೂ ಸಹ ರಸ್ತೆಗಳು ಸಮರ್ಪಕವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಬೇಕೆಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.