ETV Bharat / state

ಶಿರಸಿ ಜಿಲ್ಲೆ ರಚನೆಗೆ ಹಕ್ಕೋತ್ತಾಯ: ತಮಟೆ ಬಾರಿಸಿ ಜನಜಾಗೃತಿ ! - gandhi birthday celebration

ಶಿರಸಿಯನ್ನು ಜಿಲ್ಲೆಯಾಗಿ ರಚನೆ ಮಾಡಬೇಕು ಎಂಬ ಬೇಡಿಕೆಯ ಕಾವು ತೀವ್ರಗೊಂಡಿದ್ದು, ಇಂದು ನಗರದಲ್ಲಿ ಜಾಗಟೆ ಬಾರಿಸುವ ಮೂಲಕ ಶಿರಸಿಯನ್ನ ಜಿಲ್ಲೆಯನ್ನಾಗಿಸುವ ಕುರಿತು ಜನಜಾಗೃತಿ ಮೂಡಿಸಲಾಯ್ತು.

people demand to make to  sirsi  a new district
ಶಿರಸಿ ಜಿಲ್ಲೆ ರಚನೆಗೆ ಹಕ್ಕೋತ್ತಾಯ
author img

By

Published : Oct 2, 2020, 6:32 PM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯನ್ನು ಇಬ್ಭಾಗ ಮಾಡಿ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಶಿರಸಿ ಜಿಲ್ಲೆಯನ್ನು ರಚನೆ ಮಾಡಬೇಕು ಎಂಬ ಕೂಗು ಹೆಚ್ಚಾಗಿದೆ. ಇದರ ಭಾಗವಾಗಿ ಶಿರಸಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಜಾಗಟೆ ಬಾರಿಸುವ ಮೂಲಕ ಜನಜಾಗೃತಿ ಚಳವಳಿ ನಡೆಸಿದರು.

ಶಿರಸಿ ಜಿಲ್ಲೆ ರಚನೆಗೆ ಹಕ್ಕೋತ್ತಾಯ
ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆ ಅತ್ಯಂತ ವಿಶಾಲವಾಗಿದೆ. ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲೆಯನ್ನು ಒಡೆದು, ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚನೆ ಮಾಡಬೇಕು ಎನ್ನುವುದು ಇಲ್ಲಿಯ ಜನರ ಬೇಡಿಕೆಯಾಗಿದೆ. ಆದರೆ, ಜನರಲ್ಲಿ ಹೆಚ್ಚಿನ ಜಾಗೃತಿಯ ಅಗತ್ಯವಿದ್ದು, ಹೆಚ್ಚಿನ ಜನ ಬೆಂಬಲದ ಸಿಗಬೇಕಿದೆ.ಇದರಿಂದ ಶಿರಸಿ ನಗರದ ಬಿಡಕಿ ಬೈಲ್ ನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತಮಟೆ ಬಾರಿಸಿ ಶಿರಸಿ ಜಿಲ್ಲೆಗೆ ಎಲ್ಲರೂ ಕೈ ಜೋಡಿಸಬೇಕು ಎಂಬ ಕರೆ ನೀಡಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೋಯಿಡಾ, ಹಳಿಯಾಳ, ದಾಂಡೇಲಿ ತಾಲೂಕುಗಳನ್ನು ಸೇರಿಸಿ ಶಿರಸಿ ಜಿಲ್ಲೆ ರಚನೆ ಮಾಡಬೇಕು ಎಂಬ ಬೇಡಿಕೆಯಿದೆ. ಸದ್ಯ ಕಾರವಾರ ಜಿಲ್ಲಾ ಕೇಂದ್ರವಾಗಿದ್ದು, ಬಹುತೇಕ ಘಟ್ಟದ ಮೇಲಿನ ತಾಲೂಕುಗಳಿಗೆ 100 ಕ್ಕೂ ಅಧಿಕ ಕಿ.ಮೀ. ಓಡಾಟ ಮಾಡಬೇಕಾಗುತ್ತದೆ. ಇದರಿಂದಾಗಿ ಸರ್ಕಾರಿ ಕೆಲಸಗಳಿಗೆ ತೊಂದರೆ ಆಗುತ್ತಿದ್ದು, ಶಿರಸಿ ‌ಜಿಲ್ಲೆ ರಚನೆ ಮಾಡಿ ಜಿಲ್ಲಾ ಕೇಂದ್ರ ಮಾಡಿದರೆ ಎಲ್ಲರಿಗೂ ಅನುಕೂಲ ಎಂಬ ಒತ್ತಾಯ ಕೇಳಿ ಬರುತ್ತಿದೆ. ‌ಕಳೆದ ಕೆಲ ದಿನಗಳ ಹಿಂದೆ ಶಿರಸಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿತ್ತು.

ಈಗ ತಮಟೆ ಬಾರಿಸುವ ಮೂಲಕ ಜನಜಾಗೃತಿ ಮೂಡಿಸಲಾಗಿದ್ದು, ಜಿಲ್ಲೆ ರಚನೆಯ ಹಕ್ಕೋತ್ತಾಯಕ್ಕಾಗಿ ಅಕ್ಟೋಬರ್ 14 ರಂದು ಪಂಜಿನ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಜಿಲ್ಲೆ ರಚನೆಯ ಕಾವು ತೀವ್ರಗೊಂಡಿದ್ದು, ಸರ್ಕಾರ ಜನರ ಕೂಗು ಕೇಳಿಸಿಕೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.