ETV Bharat / state

ಪರೇಶ್ ಮೇಸ್ತಾ ಪ್ರಕರಣ: ಸಿಬಿಐ ಬಿ ರಿಪೋರ್ಟ್ ಬಗ್ಗೆ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಕೆ - ಈಟಿವಿ ಭಾರತ ಕನ್ನಡ ನ್ಯೂಸ್

ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ಬಿ‌ ರಿಪೋರ್ಟ್ ಸಲ್ಲಿಸಿದ ಹಿನ್ನೆಲೆ ಹೊನ್ನಾವರದ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಪರೇಶ್​ ಮೇಸ್ತಾ ಕುಟುಂಬದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.

paresh-mestha-death-case-objection-from-family-regarding-cbi-b-report
ಪರೇಶ್ ಮೇಸ್ತಾ ಪ್ರಕರಣ: ಸಿಬಿಐ ಬಿ ರಿಪೋರ್ಟ್ ಬಗ್ಗೆ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಕೆ
author img

By

Published : Nov 16, 2022, 3:17 PM IST

ಕಾರವಾರ : ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ಬಿ‌ ರಿಪೋರ್ಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಹೊನ್ನಾವರದ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರಾದ ಪರೇಶ್ ಮೇಸ್ತಾ ಕುಟುಂಬದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಹೊನ್ನಾವರದ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರಾದ ವಕೀಲ ನಾಗರಾಜ ನಾಯಕ, ಬಿ ರಿಪೋರ್ಟ್ ಹಾಕಿದ ಹಿನ್ನೆಲೆಯಲ್ಲಿ ತಮಗೆ ತಕರಾರಿಗೆ ಅವಕಾಶ ಮಾಡಿಕೊಡುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ. ಅದರಂತೆ ವರದಿಗೆ ಸಮ್ಮತಿಯಿಲ್ಲದ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಕೆಗೆ ನ್ಯಾಯಾಲಯ ಕೂಡ ಡಿಸೆಂಬರ್ 21 ರಂದು ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದೆ.

ಪರೇಶ್ ಮೇಸ್ತಾ ಪ್ರಕರಣ: ಸಿಬಿಐ ಬಿ ರಿಪೋರ್ಟ್ ಬಗ್ಗೆ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಕೆ

ಪರೇಶ್ ಮೇಸ್ತಾ ಪ್ರಕರಣ: 2017ರ ಡಿಸೆಂಬರ್ 6 ರಂದು ನಾಪತ್ತೆಯಾಗಿದ್ದ ಯುವಕ ಪರೇಶ್ ಮೇಸ್ತಾ ಡಿಸೆಂಬರ್ 8 ರಂದು ಪಟ್ಟಣದ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಯುವಕನ ಸಾವಿನ‌ ಕುರಿತು ಶಂಕೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.

ಸುದೀರ್ಘ 4 ವರ್ಷಗಳ ತನಿಖೆ ನಡೆಸಿ ಕಳೆದ ಅಕ್ಟೋಬರ್ 6 ರಂದು ಬಿ ರಿಪೋರ್ಟ್ ಸಲ್ಲಿಸಿತ್ತು. ಆದರೆ, ಸಿಬಿಐ ಬಿ ರಿಪೋರ್ಟ್ ಬಳಿಕ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಅವರಿಗೆ ನೋಟೀಸ್ ನೀಡಿ ನ್ಯಾಯಾಲಯದ ಮುಂದೆ ಹಾಜರಾಗಿ ವರದಿ ಕುರಿತು ಅಭಿಪ್ರಾಯ ಸಲ್ಲಿಕೆಗೆ ಸೂಚಿಸಲಾಗಿತ್ತು.

ಅದರಂತೆ ಸಿಬಿಐ ಸಲ್ಲಿಸಿದ ವರದಿಗೆ ಒಪ್ಪಿಗೆಯಿಲ್ಲ ಎಂದ ಪರೇಶ ಮೇಸ್ತಾ ಕುಟುಂಬ ವಕೀಲರಾದ ನಾಗರಾಜ ನಾಯಕ ಅವರ ಮೂಲಕ ಹೊನ್ನಾವರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರಾಗಿ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಪರೇಶ್ ಮೇಸ್ತಾ ಸಾವು ಪ್ರಕರಣ ಮರು ತನಿಖೆ ಬಗ್ಗೆ ಸಿಎಂ ಭರವಸೆ: ಕೋಟಾ ಶ್ರೀನಿವಾಸ ಪೂಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.