ETV Bharat / state

ಪಿಎಸ್​ಐ ಹೆಸರಲ್ಲಿ ನಕಲಿ ಫೇಸ್​​ಬುಕ್​ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟ ಖದೀಮರು

ಇತ್ತೀಚಿಗೆ ಖ್ಯಾತನಾಮರ ಹೆಸರಿನಲ್ಲಿ ನಕಲಿ ಫೇಸ್​​​​ಬುಕ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಕಾರವಾರದ ಪಿಎಸ್​​ಐ ಹೆಸರಲ್ಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಸಂಗ ಬೆಳಕಿಗೆ ಬಂದಿದೆ.

opening-a-fake-facebook-account-in-the-name-of-psi
ಪಿಎಸ್​ಐ ಹೆಸರಲ್ಲಿ ನಕಲಿ ಫೇಸ್​​ಬುಕ್​ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟ ಖದೀಮರು
author img

By

Published : Sep 3, 2020, 7:50 PM IST

ಕಾರವಾರ (ಉ.ಕ): ಪಿಎಸ್ಐ ಹೆಸರಿನಲ್ಲೇ ನಕಲಿ ಫೇಸ್​​​​​​ಬುಕ್​​ ಖಾತೆ ತೆರೆದು ವಂಚನೆಗೆ ಮುಂದಾಗಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ. ಕಾರವಾರದ ಗ್ರಾಮೀಣ ಠಾಣೆ ಪಿಎಸ್ಐ ರೇವಣ್ಣ ಜೀರನಕಳಗಿ ಹೆಸರಲ್ಲಿ ನಕಲಿ ಫೇಸ್​​​ಬುಕ್​​ ಖಾತೆ ಸೃಷ್ಟಿಸಿ ಆ ಮೂಲಕ ಅವರ ಸ್ನೇಹಿತರೊಂದಿಗೆ ಚಾಟ್ ಮಾಡಿದ ಖದೀಮರು ತುರ್ತು ಅವಶ್ಯಕತೆ ಇದೆ ಎಂದು 20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.

ಅಲ್ಲದೆ ಫೋನ್‌ಪೇ, ಗೂಗಲ್‌ಪೇಗೆ ಹಣ ಹಾಕುವಂತೆಯೂ ತಿಳಿಸಿದ್ದರು. ಆದರೆ ಈ ವೇಳೆ ಅನುಮಾನಗೊಂಡ ಪಿಎಸ್ಐ ಸ್ನೇಹಿತರು ನೇರವಾಗಿ ಕರೆ ಮಾಡಿ ಕೇಳಿದಾಗ ನಕಲಿ ಖಾತೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಈ ಬಗ್ಗೆ ದೂರು ದಾಖಲಿಸಿದ್ದು, ನಕಲಿ ಖಾತೆ ಸೃಷ್ಟಿಸಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.