ETV Bharat / state

ಜೋಯಿಡಾ ಕುಗ್ರಾಮದಲ್ಲಿ ವೃದ್ಧೆ ಅಸ್ವಸ್ಥ: 2.5 ಕಿಮೀ ಜೋಳಿಗೆಯಲ್ಲೇ ಹೊತ್ತೊಯ್ದು ಚಿಕಿತ್ಸೆ ಕೊಡಿಸಿದ ಗ್ರಾಮಸ್ಥರು - ಕಾಳಿ ಜಲವಿದ್ಯುತ್ ಯೋಜನೆ

ಸೂಕ್ತ ರಸ್ತೆ ಇಲ್ಲದ ಕಾರಣ ಜೋಯಿಡಾ ತಾಲೂಕಿನ ಸಣಕಾ ಗ್ರಾಮದಲ್ಲಿ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ವೃದ್ಧೆಯನ್ನು ಗ್ರಾಮಸ್ಥರು ಕಂಬಳಿ ಜೋಳಿಗೆಯ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು.

karwar
ವೃದ್ಧೆಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು
author img

By

Published : Jul 5, 2023, 8:44 AM IST

ವೃದ್ಧೆಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು!

ಕಾರವಾರ : ಭಾರತ ಸ್ವಾತಂತ್ರ್ಯಗೊಂಡು 75 ವರ್ಷಗಳೇ ಉರುಳಿವೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಅದೆಷ್ಟೋ ಹಳ್ಳಿಗಳ ಜನರು ಕಳೆದ ಏಳು ದಶಕಗಳಲ್ಲಿ ಒಂದು ರಸ್ತೆ ಸಂಪರ್ಕ ಪಡೆಯಲಾಗದೆ ಇಂದಿಗೂ ಅಗತ್ಯ ಮೂಲಸೌಕರ್ಯವಿಲ್ಲದ ಕುಗ್ರಾಮ ಎಂಬ ಹಣೆಪಟ್ಟಿಯಿಂದ ಬದುಕುವಂತಾಗಿದೆ. ಮಾತ್ರವಲ್ಲ, ಹೆರಿಗೆ ಮತ್ತು ಅನಾರೋಗ್ಯದಂತಹ ಅನೇಕ ಸಂದರ್ಭದಲ್ಲಿ ಜನರನ್ನು ಕಂಬಳಿಗಳನ್ನೇ‌‌ ಜೋಳಿಗೆಯನ್ನಾಗಿ ಮಾಡಿ ಆಸ್ಪತ್ರೆಗೆ ಹೊತ್ತೊಯ್ಯಬೇಕಾದ ಪರಿಸ್ಥಿತಿ ಇದೆ.

ದಟ್ಟ ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆಯ ಅದೆಷ್ಟೋ ಗ್ರಾಮಗಳಿಗೆ ಇಂದಿಗೂ ರಸ್ತೆ ಸಂಪರ್ಕವಿಲ್ಲ. ಅನೇಕ ಹಳ್ಳಿಗಳಿಗೆ ವಾಹನ ಸಂಚಾರವಿಲ್ಲದ ಕಾರಣ ಪಡಬಾರದ ಕಷ್ಟ ಅನುಭವಿಸುವಂತಾಗಿದೆ. ಇಂತಹ ಘೋರ ಯಾತನೆಯಲ್ಲಿರುವ ಜೋಯಿಡಾ ತಾಲೂಕಿನ ಸಣಕಾ ಗ್ರಾಮದಲ್ಲಿ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ವೃದ್ಧೆಯನ್ನು ಕಂಬಳಿ ಜೋಳಿಗೆಯ ಮೂಲಕ ಆಸ್ಪತ್ರೆಗೆ ಸಾಗಿಸಿದ ಜನರು ಚಿಕಿತ್ಸೆ ಕೊಡಿಸಿದ ಘಟನೆ ನಡೆದಿದೆ.

ಜೋಯಿಡಾ ತಾಲೂಕಿನ ಸಣಕಾ ಗ್ರಾಮದಿಂದ ಘೊಡೇಗಾಳಿ ಗ್ರಾಮಕ್ಕೆ ಆಗಮಿಸಲು ಕಾಡಿನ ರಸ್ತೆಯೇ ಆಧಾರ. ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರುಮಯವಾಗಿ ಓಡಾಡಲೂ ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ ಕೆಲವು ದಿನಗಳ ಹಿಂದೆ ಸಣಕಾದ ನಿವಾಸಿ ದ್ರೌಪದಿ ಪಾವು ದೇಸಾಯಿ ಎಂಬ 80 ವರ್ಷದ ಮಹಿಳೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ವೃದ್ಧೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಈ ರಸ್ತೆಯಲ್ಲಿ ಅಂಬ್ಯುಲೆನ್ಸ್ ಬರಲು ಸಾಧ್ಯವಿಲ್ಲದ ಕಾರಣ ಕಂಬಳಿ ಜೋಳಿಗೆಯಲ್ಲಿ ಸುಮಾರು 2.5 ಕಿ.ಮೀ ಹೊತ್ತೊಯ್ದು ಬಳಿಕ ಅಲ್ಲಿಂದ ಖಾಸಗಿ ವಾಹನದ ಮೂಲಕ ದಾಂಡೇಲಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ : ರಸ್ತೆ ಇಲ್ಲದ ಕುಗ್ರಾಮ : ಸ್ಟ್ರೆಚರ್​​ನಲ್ಲೇ ಮೃತದೇಹ ಹೊತ್ತು ಸಾಗಿಸಿದ ಸಂಬಂಧಿಕರು

ರಾಜ್ಯದಲ್ಲೇ ಜೋಯಿಡಾ ಅತಿ ಹಿಂದುಳಿದ ತಾಲೂಕುಗಳಲ್ಲಿ ಒಂದು. ಸಣಕಾ ಘೋಡೆಗಾಳಿ ರಸ್ತೆ ಸುಮಾರು 2.5 ಕಿಮೀ ಇದ್ದು, ಇಲ್ಲಿ ಸುಮಾರು 12 ಮನೆಗಳಲ್ಲಿ 80ಕ್ಕೂ ಅಧಿಕ ಜನರು ವಾಸ ಮಾಡುತ್ತಿದ್ದಾರೆ. ಆದ್ರೆ, ಸರ್ಕಾರದ ಯಾವ ಸವಲತ್ತುಗಳು ಸಮರ್ಪಕವಾಗಿ ಸಿಗದೆ ವಂಚಿತರಾಗಿದ್ದು, ಗ್ರಾಮಕ್ಕೆ ರಸ್ತೆಯನ್ನಾದರೂ ನಿರ್ಮಿಸಿಕೊಡುವಂತೆ ಗ್ರಾಮಸ್ಥರಾದ ಚಂದ್ರಕಾಂತ ನಾಯ್ಕ ಮನವಿ ಮಾಡಿದ್ದಾರೆ.

ಉತ್ತರ ಕನ್ನಡದಲ್ಲಿ ದೇಶಕ್ಕೆ ವಿದ್ಯುತ್ ಪೂರೈಸುವ ಕೈಗಾ ಅಣುಸ್ಥಾವರ, ಕಾಳಿ ಜಲವಿದ್ಯುತ್ ಯೋಜನೆ, ನೌಕಾನೆಲೆಯಂತಹ ಪ್ರತಿಷ್ಠಿತ ಯೋಜನೆಗಳಿವೆ. ಜೋಯಿಡಾ ತಾಲೂಕಿನಲ್ಲೇ 20ಕ್ಕೂ ಅಧಿಕ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಇಲ್ಲವಾಗಿದ್ದು, ಸರ್ಕಾರಗಳು ಮೂಲಭೂತ ವ್ಯವಸ್ಥೆಯನ್ನಾದರೂ ಒದಗಿಸಿಕೊಡುವತ್ತ ಗಮನಹರಿಸಬೇಕು ಎಂದು ಸ್ಥಳೀಯರಾದ ಪ್ರವೀಣ ಆಗ್ರಹಿಸಿದರು.

ಇದನ್ನೂ ಓದಿ : 5 ಕಿ.ಮೀ ದೂರ ಜೋಲಿಯಲ್ಲಿ ಹೊತ್ತು ರೋಗಿಯ ಸಾಗಾಟ; ತುರ್ತುಸೇವೆಗೆ ವರೀಣಬೇಣಾ ಗ್ರಾಮಸ್ಥರ ಪರದಾಟ

ಸ್ವಾತಂತ್ರ್ಯ ಬಂದು ಅನೇಕ ದಶಕಗಳೇ ಉರುಳಿದರೂ ಸಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಗ್ರಾಮಗಳು ಇನ್ನೂ ಜೀವಂತವಾಗಿರೋದು ನಿಜಕ್ಕೂ ದುರಂತವೇ ಸರಿ. ಇನ್ನಾದರೂ ಈ ಬಗ್ಗೆ ಸರ್ಕಾರಗಳು ಗಮನಹರಿಸಿ ಗ್ರಾಮಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲಿ ಎನ್ನುವುದು ಸಾರ್ವಜನಿಕರ ನಿರೀಕ್ಷೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.