ETV Bharat / state

ಶಾಲೆಗೆ ಮಕ್ಕಳನ್ನು ಒತ್ತಾಯದಿಂದ ಕರೆತರುವ ಪದ್ಧತಿ ಇಲ್ಲ: ಸಚಿವ ಶಿವರಾಮ್ ಹೆಬ್ಬಾರ್

ಶಾಲೆಗೆ ಬರುವ ಮಕ್ಕಳಿಗೆ ಪಾಲಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯವಾಗಿದ್ದು, ಯಾವ ಮಕ್ಕಳನ್ನೂ ಒತ್ತಾಯದಿಂದ ಇಲ್ಲವೇ, ಒತ್ತಡ ಹೇರಿ ಕರೆತರುವ ಪ್ರಶ್ನೆಯೇ ಇಲ್ಲ ಎಂದು ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

author img

By

Published : Dec 20, 2020, 3:59 PM IST

ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಕಾರವಾರ: ಜನವರಿ 1 ರಿಂದ ಶಾಲೆಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಆದ್ರೆ ಮಕ್ಕಳನ್ನು ಒತ್ತಾಯದಿಂದ ಕರೆತರುವ ಪದ್ಧತಿ ಇಲ್ಲ. ಪಾಲಕರಿಂದ ಒಪ್ಪಿಗೆ ಪತ್ರ ಪಡೆದು ಬಂದವರಿಗೆ ಪಾಠ ಮಾಡಲಾಗುತ್ತದೆ ಎಂದು ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನವರಿ 1 ರಿಂದ ಶಾಲೆ ಪ್ರಾರಂಭಿಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಆದರೆ ಶಾಲೆಗೆ ಬರುವ ಮಕ್ಕಳಿಗೆ ಪಾಲಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯವಾಗಿದ್ದು, ಯಾವ ಮಕ್ಕಳನ್ನೂ ಒತ್ತಾಯದಿಂದ ಇಲ್ಲವೇ, ಒತ್ತಡ ಹೇರಿ ಕರೆತರುವ ಪ್ರಶ್ನೆಯೇ ಇಲ್ಲ. ಯಾವ ಪಾಲಕರು ತಮ್ಮ ಮಕ್ಕಳು ಓದಬೇಕು ಎಂದುಕೊಂಡಿದ್ದಾರೋ ಅವರು ಕಳುಹಿಸಬಹುದು ಎಂದರು.‌

ಓದಿ: ನಾಳೆಯಿಂದ ಖಾಸಗಿ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆ ಬಂದ್: ಆನ್​ಲೈನ್​ ಕ್ಲಾಸ್​ ಇಲ್ಲ

ಮಕ್ಕಳಿಗೆ ಶಾಲೆ ಇಲ್ಲದ ಕಾರಣ ಸಾಕಷ್ಟು ತೊಂದರೆಯಾಗಿದೆ. ಆದರೆ ಇದೀಗ ಸರ್ಕಾರ ಶಾಲೆ ಆರಂಭಿಸುತ್ತಿರುವುದು ಉತ್ತಮ ನಿರ್ಣಯವಾಗಿದೆ. ಮುಂದೆ ಶಾಲೆಗೆ ಹೋಗಿ ಮಕ್ಕಳು ತೊಂದರೆಯಾಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಸಚಿವ ಹೆಬ್ಬಾರ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.