ETV Bharat / state

ನಡುಗಡ್ಡೆ ಜಾತ್ರೆಗೆ ಕಟ್ಟುನಿಟ್ಟಿನ ಕಾನೂನು ; ವಿರಳ ಭಕ್ತರ ನಡುವೆ ನಡೆದ ನರಸಿಂಹ ದೇವರ ಜಾತ್ರೆ - ಕೊರೊನಾ ನಿಯಮದೊಂದಿಗೆ ನರಸಿಂಹ ಜಾತ್ರೆ ಆಚರಣೆ

ಈ ಬಾರಿ ಗೋವಾ, ಮಹಾರಾಷ್ಟ್ರ ಭಾಗದ ಭಕ್ತರು ಆಗಮಿಸಿಲ್ಲ. ಅಲ್ಲದೇ ಕಳೆದೆರಡು ವರ್ಷದ ಹಿಂದೆ ಬೋಟು ದುರಂತ ಸಂಭವಿಸಿ ಪ್ರಾಣ ಹಾನಿ ಉಂಟಾಗಿದ್ದ ಹಿನ್ನೆಲೆ ಜಾತ್ರೆಗೆ ತೆರಳಲು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದೆ. ಸಮುದ್ರದಲ್ಲಿ ಕೋಸ್ಟ್‌ಗಾರ್ಡ್, ಕರಾವಳಿ ಕಾವಲುಪಡೆ ಬೋಟ್‌ಗಳು ಗಸ್ತು ತಿರುಗುತ್ತಿದ್ದವು..

Narasimha fair celebration in UttaraKannada, Narasimha fair celebration with corona rules, Narasimha fair celebration news, ಉತ್ತರಕನ್ನಡದಲ್ಲಿ ನರಸಿಂಹ ದೇವರ ಜಾತ್ರೆ ಆಚರಣೆ, ಕೊರೊನಾ ನಿಯಮದೊಂದಿಗೆ ನರಸಿಂಹ ಜಾತ್ರೆ ಆಚರಣೆ, ನರಸಿಂಹ ಜಾತ್ರೆ ಆಚರಣೆ ಸುದ್ದಿ,
ವಿರಳ ಭಕ್ತರ ನಡುವೆ ನಡೆದ ನರಸಿಂಹ ದೇವರ ಜಾತ್ರೆ
author img

By

Published : Jan 18, 2022, 12:25 PM IST

ಕಾರವಾರ : ಕೊರೊನಾ ಮಾರ್ಗಸೂಚಿಗಳ ಹಿನ್ನೆಲೆ ಮೀನುಗಾರರ ಆರಾಧ್ಯದೈವವಾದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಸರಳವಾಗಿ ನಡೆಯಿತು.

ಕಾರವಾರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ಪ್ರತಿ ವರ್ಷ ನರಸಿಂಹ ದೇವರ ಜಾತ್ರೆ ಜರುಗುತ್ತದೆ. ಈ ಜಾತ್ರೆಗೆ ಕೇವಲ ಮೀನುಗಾರರಷ್ಟೇ ಅಲ್ಲದೇ, ವಿವಿಧೆಡೆಗಳಿಂದಲೂ ಭಕ್ತರು ಆಗಮಿಸುತ್ತಿದ್ದರು. ಬೋಟಿನಲ್ಲಿ ಜಾತ್ರೆಗೆ ತೆರಳುವುದೇ ಒಂದು ವಿಶಿಷ್ಟ ಅನುಭವವಾಗಿತ್ತು.

ವಿರಳ ಭಕ್ತರ ನಡುವೆ ನಡೆದ ಶ್ರೀ ನರಸಿಂಹ ದೇವರ ಜಾತ್ರೆ..

ಆದ್ರೆ, ಈ ಬಾರಿ ಕೊರೊನಾ ಅಬ್ಬರ ಹಿನ್ನೆಲೆ ಜಾತ್ರೆಗಳನ್ನ ನಡೆಸದಂತೆ ಸರ್ಕಾರದ ಆದೇಶವಿದೆ. ಆದರೂ ಈ ಸಾರಿ ಜಾತ್ರೆಗೆ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅದರಲ್ಲೂ ಎರಡು ಡೋಸ್ ಲಸಿಕೆ ಪಡೆದ ನಿಗದಿತ ಸಂಖ್ಯೆಯ ಜನರಿಗೆ ಮಾತ್ರ ಪಾಸ್ ವಿತರಿಸಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಜಾತ್ರೆಗೆ ತೆರಳಲು ಅನುಮತಿ ನೀಡಲಾಗಿತ್ತು. ಹೀಗಾಗಿ, ಭಕ್ತರು ಸಂಖ್ಯೆ ಇಳಿಕೆಯಾಗಿದೆ.

ಪ್ರತಿವರ್ಷ ಜನವರಿ ತಿಂಗಳ ಹುಣ್ಣಿಮೆ ದಿನದಂದು ಕೂರ್ಮಗಡದ ನರಸಿಂಹ ದೇವರ ಜಾತ್ರೆ ನಡೆಯುತ್ತದೆ. ನರಸಿಂಹ ದೇವರಿಗೆ ಬಾಳೆಗೊನೆ ಸೇವೆ ನೀಡುವುದು ವಿಶೇಷ. ದೇವರಲ್ಲಿ ಹರಕೆ ಹೊತ್ತುಕೊಂಡರೆ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಇದೆ. ಅಲ್ಲದೇ ಮೀನುಗಾರರು ಪ್ರತಿವರ್ಷ ಜಾತ್ರೆಗೆ ಆಗಮಿಸಿ ದೇವರಿಗೆ ಬಾಳೆಗೊನೆ ಅರ್ಪಿಸಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂದು ಬೇಡಿಕೊಳ್ಳುತ್ತಾರೆ.

ಈ ಬಾರಿ ಗೋವಾ, ಮಹಾರಾಷ್ಟ್ರ ಭಾಗದ ಭಕ್ತರು ಆಗಮಿಸಿಲ್ಲ. ಅಲ್ಲದೇ ಕಳೆದೆರಡು ವರ್ಷದ ಹಿಂದೆ ಬೋಟು ದುರಂತ ಸಂಭವಿಸಿ ಪ್ರಾಣ ಹಾನಿ ಉಂಟಾಗಿದ್ದ ಹಿನ್ನೆಲೆ ಜಾತ್ರೆಗೆ ತೆರಳಲು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದೆ. ಸಮುದ್ರದಲ್ಲಿ ಕೋಸ್ಟ್‌ಗಾರ್ಡ್, ಕರಾವಳಿ ಕಾವಲುಪಡೆ ಬೋಟ್‌ಗಳು ಗಸ್ತು ತಿರುಗುತ್ತಿದ್ದವು.

ದೇವಸ್ಥಾನಕ್ಕೆ ಆಗಮಿಸಿದವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಬಾಳೆಗೊನೆ ಸೇವೆ ಹೊರತುಪಡಿಸಿ ಇತರೆ ಯಾವುದೇ ಸೇವೆಗಳಿಗೂ ಅವಕಾಶ ನೀಡಿಲ್ಲ ಅಂತಾ ದೇವಸ್ಥಾನ ಕಮಿಟಿ ಸದಸ್ಯರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.